ಕಾರವಾರ (Karwar): ಮೀಶೋ (Meesho App) ಆನ್‌ಲೈನ್ ಶಾಪಿಂಗ್ (online shopping) ಮಾಡಿದ ಅಂಕೋಲಾದ ವ್ಯಕ್ತಿಯೋರ್ವರು ೬೩೮೯೪ ರೂ. ಕಳೆದುಕೊಂಡಿರುವ ಬಗ್ಗೆ ಕಾರವಾರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂಕೋಲಾದ (Ankola) ಮಠಾಕೇರಿಯಲ್ಲಿ ವಾಸವಾಗಿರುವ ಮೂಲತಃ ಧಾರವಾಡ (Dharwad) ಚಿಕ್ಕಮಲ್ಲಿಗೆವಾಡಾದ ನಾಗರಾಜ ಫಕೀರಪ್ಪ ಕಡತಾಳ ಹಣ ಕಳಕೊಂಡವರು. ಇವರು ಸೆ.೧೫ರಂದು ಮೀಶೋ ಆನ್‌ಲೈನ್ ಶಾಪಿಂಗ್ ಆಪ್‌ನಲ್ಲಿ (Meesho App) ಒಂದು ಮೊಬೈಲ್ ಫೋನ್ ಕವರ್ ಬುಕ್ ಮಾಡಿದ್ದರು. ಆದರೆ ಅವರು ಬುಕ್ ಮಾಡಿರುವ ಆರ್ಡರ್ ಬಗ್ಗೆ ಮೀಶೋ ಆನ್‌ಲೈನ್ ಶಾಪಿಂಗ್ ಆಪ್‌ನಲ್ಲಿ ಯಾವುದೇ ಮಾಹಿತಿ ಇರಲಿಲ್ಲ. ಗೂಗಲ್‌ದಲ್ಲಿ ಸರ್ಚ್ ಮಾಡಿದಾಗ ಅವರಿಗೆ +೯೧೬೨೦೪೨೩೦೬೨೮ ಸಂಖ್ಯೆ ಸಿಕ್ಕಿತ್ತು.
ವಿಡಿಯೋ ಸಹಿತ ಇದನ್ನೂ ಓದಿ : ನೇಣು ಬಿಗಿದ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆ
ಈ ನಂಬರಗೆ ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸಿದ ವ್ಯಕ್ತಿಯು ತಾವು ಮೀಶೋ ಆನ್‌ಲೈನ್ ಶಾಪಿಂಗ್ ಆಪ್‌ನ ಕಸ್ಟಮರ್ ಕೇರ್‌ನಿಂದ (Customer Care) ಮಾತನಾಡುತ್ತಿರುವ ಬಗ್ಗೆ ಹೇಳಿದ್ದಾರೆ. ಆ ವ್ಯಕ್ತಿಗೆ ಮೊಬೈಲ್ ಕವರ್ ಬುಕ್ ಮಾಡಿದರೂ ಆಪ್‌ನಲ್ಲಿ ತೋರಿಸದೇ ಇರುವ ಬಗ್ಗೆ ಹೇಳಿದರು. ಅದಕ್ಕೆ ೧೨೬ ರೂ.ಯನ್ನು ಮರಳಿ ಬ್ಯಾಂಕ್ ಖಾತೆಗೆ ಜಮಾ ಮಾಡುವುದಾಗಿ ಹೇಳಿದ್ದಾರೆ. ವಿಡಿಯೋ ಕಾಲ್‌ನಲ್ಲಿ ಮಾತನಾಡಿದ ಆ ವ್ಯಕ್ತಿ, ಫೋನ್ ಪೇ (Phone pay) ಆಪ್ ತೆರೆದು, ಪಿನ್ ನಂಬರ್ ನಮೂದಿಸಲು ಹೇಳಿದ್ದಾನೆ. ಆತನ ಮಾತನ್ನು ನಂಬಿದ ನಾಗರಾಜ, ಪಿನ್ ನಮೂದಿಸುತ್ತಿದ್ದಂತೆ ಬ್ಯಾಂಕ್ ಖಾತೆಯಿಂದ ಹಣ ಕಡಿತವಾಗಿದೆ.
ಇದನ್ನೂ ಓದಿ : ಅಕ್ಟೋಬರ್ ೧ರಂದು ವಿವಿಧೆಡೆ ಅಡಿಕೆ ಧಾರಣೆ