ಭಟ್ಕಳ: ತಾಲೂಕಿನಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿರುವದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಪಟ್ಟಣದಲ್ಲಿ ವ್ಯಕ್ತಿಯೋರ್ವ ಹಾಲು ಕದಿಯುತ್ತಿದ್ದ(milk theft) ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ಆತನ ಪತ್ತೆಗೆ ಬಲೆ ಬೀಸಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಪಟ್ಟಣದಲ್ಲಿ ಹಾಂಗ್ಯೊ ಸಂಸ್ಥೆಯ ಸಾವಿರಾರು ಲೀಟರ್ ಹಾಲು ಭಟ್ಕಳದಲ್ಲಿ ಸರಬರಾಜು ಆಗುತ್ತಿದೆ. ಅದರಲ್ಲಿ ಅರ್ಧದಷ್ಟು ಹಾಲನ್ನು ರಂಗಿನಕಟ್ಟೆಯ ಬಳಿಯಲ್ಲಿ ಇಳಿಸುತ್ತಿದ್ದರು. ವಾಹನದಲ್ಲಿ ಬಂದ ಹಾಲು ನಸುಕಿನ ಜಾವ ೩ ಗಂಟೆಗೆ ಹಾಲು ಇಳಿಕೆಯಾಗುತ್ತಿದೆ.
ಇದನ್ನೂ ಓದಿ : ಕೊಳಚೆ ನೀರಿನ ಜೊತೆ ಮನೆಗೆ ನುಗ್ಗುತ್ತಿರುವ ವಿಷಜಂತುಗಳು
ಪ್ರತಿದಿನ ಹಾಲು ಕಳ್ಳತನ (milk theft) ಆಗುತ್ತಿರುವುದು ಹಾಲು ಸರಬರಾಜು ಮಾಡುವವರ ಗಮನಕ್ಕೆ ಬಂದಿತ್ತು. ಹೀಗಾಗಿ ಕಳ್ಳತನ ಮಾಡುವ ವ್ಯಕ್ತಿಯ ಪತ್ತೆಗಾಗಿ ಅವರು ಸಮೀಪದಲ್ಲಿ ಶ್ರೀಕುಮಾರ ರೋಡಲೈನ್ಸ್ ಅವರ ಕಚೇರಿ ಎದುರು ಸಿಸಿಟಿವಿ ಇದ್ದ ಕಡೆಯಲ್ಲಿ ಹಾಲನ್ನು ಇಳಿಸಿದ್ದರು.
ಇದನ್ನೂ ಓದಿ : ಆತಂಕ ಸೃಷ್ಟಿಸಿದ ನಗ್ನ ವ್ಯಕ್ತಿ
ಮುಂಜಾನೆ ೪ ಗಂಟೆಗೆ ಅಲ್ಲಿಗೆ ಬಂದ ಕಳ್ಳ ಸುಮಾರು ೧೫ ಲೀಟರ್ ನಷ್ಟು ಹಾಲನ್ನು ಕದ್ದಿದ್ದಾನೆ. ಬಳಿಕ ಅಲ್ಲೇ ಇರುವ ಸಿಸಿಟಿವಿ ಕ್ಯಾಮರಾ ನೋಡಿ ಅದನ್ನು ತಿರುಗಿಸಿ ತೆರಳಿದ್ದಾನೆ. ಮತ್ತೆ ಬಂದ ಆತ ಸಿಸಿಟಿವಿ ಕ್ಯಾಮರಾವನ್ನೇ ಒಡೆದು ಹಾಕಿದ್ದಾನೆ. ಇವೆಲ್ಲವೂ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ : ತಪ್ಪಿದ ರೈಲು ದುರಂತ, ಪ್ರಯಾಣಿಕರ ನಿಟ್ಟುಸಿರು
ಈತ ಕೇವಲ ಹಾಲು ಮಾತ್ರ ಕದಿಯುತ್ತಾನೊ ಅಥವಾ ಮತ್ತೆಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೊ ಎಂದು ಪೊಲೀಸ್ ತನಿಖೆಯಿಂದ ತಿಳಿಯಬೇಕಿದೆ. ಅಲ್ಲೇ ಪಕ್ಕದಲ್ಲಿ ಖಾಸಗಿ ಬ್ಯಾಂಕ್ ಕೂಡ ಇದೆ. ಈ ಕೈಚಳಕ ತೋರಿದ ಕಳ್ಳನನ್ನು ಪತ್ತೆಹಚ್ಚಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಪೊಲೀಸ್ ಅಧಿಕಾರಿ ಗೋಪಿಕೃಷ್ಣನ್ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಕಳ್ಳನ ಪತ್ತೆಗಾಗಿ ಬಲೆ ಬೀಸಿದ್ದಾರೆ.