ಭಟ್ಕಳ (Bhatkal): ದೇಶದಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾದಲ್ಲಿ ಅದನ್ನು ಎದುರಿಸಿ, ಯುದ್ಧ ಸನ್ನದ್ಧವಾಗೋ ಹಿನ್ನೆಲೆ ಕೋಸ್ಟಲ್ ಸೆಕ್ಯೂರಿಟಿ (coastal security) ಪೊಲೀಸರ ನೇತೃತ್ವದಲ್ಲಿ ಭಟ್ಕಳ ಬಂದರಿನಲ್ಲಿ (bhatkal bunder) ಅಣಕು ಕಾರ್ಯಾಚರಣೆ (mock drill) ನಡೆಸಲಾಯಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಭಟ್ಕಳ ನಗರ, ಗ್ರಾಮೀಣ ಪೊಲೀಸರು, ಅಗ್ನಿಶಾಮಕದಳ, ಕೋಸ್ಟಲ್ ಪೊಲೀಸರು ಹಾಗೂ ಮೀನುಗಾರರ ಸಹಯೋಗದಲ್ಲಿ ಬಾಂಬ್ ಶೆಲ್ ದಾಳಿಯಾದಂತೆ ಅಣಕು ಕಾರ್ಯಾಚರಣೆ (mock drill) ನಡೆಸಲಾಗಿದೆ. ಶೆಲ್ ದಾಳಿಯಾದ ಕೂಡಲೇ ಪೊಲೀಸರು, ಕೋಸ್ಟಲ್ ಪೊಲೀಸರು, ಅಗ್ನಿಶಾಮಕದಳ ಗಾಯಳುಗಳ ರಕ್ಷಣೆ, ಬೆಂಕಿ ನಂದಿಸುವ ಪ್ರಕ್ರಿಯೆ, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ಹಾಗೂ ಶಸಸ್ತ್ರ ಪೊಲೀಸರಿಂದ ನಾಲ್ವೆಡೆ ರಕ್ಷಣೆ ಒದಗಿಸುವಂತಹ ಅಣುಕು ಕಾರ್ಯಾಚರಣೆಯನ್ನು ನಡೆಸಲಾಯಿತು. ಅಲ್ಲದೇ, ಮೀನುಗಾರರು (fishermen) ಹಾಗೂ ಮೀನುಗಾರ ಮುಖಂಡರಿಗೂ ಯುದ್ಧದ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಜಾಗೃತೆ ಹಾಗೂ ಸುರಕ್ಷತಾ ಕ್ರಮಗಳ ಬಗ್ಗೆಯೂ ತಿಳಿಸಲಾಗಿದೆ.
ಇದನ್ನೂ ಓದಿ : motorcycle collision/ ಮೋಟಾರ್ ಸೈಕಲ್ ಡಿಕ್ಕಿಯಾಗಿ ಇಬ್ಬರಿಗೆ ಗಾಯ