ಬೆಳಗಾವಿ (Belagavi): ಉತ್ತರ ಪ್ರದೇಶದ (Uttara Pradesh) ಪ್ರಯಾಗ್ರಾಜ್ನಲ್ಲಿ (Prayagraj) ನಡೆಯುತ್ತಿರುವ ಮಹಾಕುಂಭಮೇಳದಲ್ಲಿ (Kumbh Mela) ಸಂಭವಿಸಿದ ಕಾಲ್ತುಳಿತ ಪ್ರಕರಣದಲ್ಲಿ ಬೆಳಗಾವಿಯ ತಾಯಿ-ಮಗಳು ಸಾವನ್ನಪ್ಪಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೃತರನ್ನು ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಟ (50), ಮೇಘಾ ಹತ್ತರವಾಟ ಎಂದು ಗುರುತಿಸಲಾಗಿದೆ. ಕಾಲ್ತುಳಿತದಲ್ಲಿ ಗಾಯಗೊಂಡ ಬಳಿಕ ಅವರನ್ನು ಇಂದು ಬೆಳಗ್ಗೆ ಪ್ರಯಾಗ್ರಾಜ್ದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿ ಆಗದೇ ಬೆಳಗಾವಿಯ ತಾಯಿ – ಮಗಳು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ವಿಡಿಯೋ ಸಹಿತ ಇದನ್ನು ಓದಿ : Kick Boxing/ ಮೈಸೂರಲ್ಲಿ ಭಟ್ಕಳದ ಕ್ರೀಡಾ ಪಟುಗಳ ಸಾಧನೆ
ಮೃತ ಜ್ಯೋತಿ ಅವರ ಪತಿ ದೀಪಕ ಹತ್ತರವಾಟ ಅವರಿಗೆ ಬೆಳಗ್ಗೆಯಿಂದ ಇಬ್ಬರೂ ಸಂಪರ್ಕಕ್ಕೆ ಸಿಕ್ಕಿಲ್ಲ. ಫೋನ್ ರಿಂಗ್ ಆಗುತಿದ್ದರೂ ರಿಸೀವ್ ಮಾಡದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆತಂಕದಲ್ಲಿದ್ದರು. ಮೂರು ದಿನಗಳ ಹಿಂದೆ ಸಾಯಿರಥ ಟ್ರಾವೆಲ್ ಏಜೆನ್ಸಿ ಮೂಲಕ ಪ್ರಯಾಗ್ರಾಜ್ಗೆ ಪ್ರಯಾಣ ಬೆಳೆಸಿದ್ದ ೧೩ ಜನರ ತಂಡದಲ್ಲಿ ಜ್ಯೋತಿ ಹತ್ತರವಾಟ ಮತ್ತು ಮೇಘಾ ಹತ್ತರವಾಟ ಸೇರಿದ್ದರು. ಆದರೆ, ಘೋರ ದುರಂತದಲ್ಲಿ ತಾಯಿ-ಮಗಳು ಪ್ರಾಣ ಕಳೆದುಕೊಂಡಿದ್ದಾರೆ.
ಇದನ್ನು ಓದಿ : cash detect/ ಅನುಮಾನಾಸ್ಪದ ಕಾರಿನಲ್ಲಿ ೧.೧೪ ಕೋಟಿ ರೂ. ಪತ್ತೆ
ಸುದ್ದಿ ತಿಳಿಯುತ್ತಿದ್ದಂತೆ ವಡಗಾವಿಯ ಅವರ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ದುಃಖ ಮಡುಗಟ್ಟಿದೆ. ಸಂಬಂಧಿಕರು ಮತ್ತು ಸ್ನೇಹಿತರು ಅವರ ಮನೆಯತ್ತ ಧಾವಿಸುತ್ತಿದ್ದಾರೆ. ಈ ಕುರಿತು ದೀಪಕ ಹತ್ತರವಾಟ ಮಾಧ್ಯಮದವರೊಂದಿಗೆ ಮಾತನಾಡಿ, “ಜ.೨೬ರಂದು ಮಧ್ಯಾಹ್ನ ೧ ಗಂಟೆ ಸುಮಾರಿಗೆ ಪತ್ನಿ, ಮಗಳು ಮತ್ತು ಅವರ ಇಬ್ಬರು ಸ್ನೇಹಿತರು ಪ್ರಯಾಗ್ರಾಜ್ ಹೋಗಿದ್ದರು. ನಿನ್ನೆ ರಾತ್ರಿ ಇಬ್ಬರೂ ವಿಡಿಯೋ ಕಾಲ್ ನಲ್ಲಿ ಮಾತನಾಡಿದ್ದರು. ಆದರೆ, ಇಂದು ಬೆಳಗ್ಗೆ ನಮ್ಮ ಸಂಪರ್ಕಕ್ಕೆ ಅವರು ಸಿಗಲೇ ಇಲ್ಲ ಎಂದರು.
ಇದನ್ನು ಓದಿ : Two Arrested/ ನ್ಯಾಯಾಂಗ ಬಂಧನದಲ್ಲಿ ಲಾರಿ ಚಾಲಕ-ಮಾಲಕ
ನಮ್ಮವರ ಜೊತೆ ಹೋಗಿದ್ದ ಅವರ ಸ್ನೇಹಿತರು ಕಾಲ್ತುಳಿತ ಉಂಟಾಗಿದೆ ಎಂದು ತಿಳಿಸಿದರು. ಇದರಲ್ಲಿ ಪತ್ನಿ ಮತ್ತು ಮಗಳಿಗೆ ಗಂಭೀರವಾಗಿ ಗಾಯವಾಗಿದೆ ಎಂಬ ಮಾಹಿತಿ ಸಿಕ್ಕಿತ್ತು. ಮಧ್ಯಾಹ್ನ 3ರವರೆಗೆ ಏನೂ ಗೊತ್ತಾಗಲಿಲ್ಲ. ಕೊನೆಗೆ ಪ್ರಯಾಗ್ರಾಜ್ಗೆ ಕರೆದುಕೊಂಡು ಹೋಗಿದ್ದ ಚಿದಂಬರ ಪಾಟೀಲ ಅವರು ನಿಮ್ಮ ಪತ್ನಿ ಮತ್ತು ಮಗಳು ತೀರಿಕೊಂಡಿದ್ದಾರೆ ಎಂದು ವಿಷಯ ತಿಳಿಸಿದರು” ಎಂದು ವಿವರಿಸಿದರು.
ಇದನ್ನು ಓದಿ : Hogevaddi/ ಹೊಗೆವಡ್ಡಿಯಲ್ಲಿ ಜಾತ್ರಾ ಮಹೋತ್ಸವ ಫೆ.೬ರಿಂದ
“ಮಗಳು ಮೇಘಾ ಪದವಿ ಮುಗಿಸಿ, ಸ್ಟೇಷನರಿ ಅಂಗಡಿ ನಡೆಸುತ್ತಿದ್ದರು. ಪತ್ನಿ ಮನೆಯಲ್ಲಿ ಇರುತ್ತಿದ್ದರು. ದೊಡ್ಡ ಮಗಳಿಗೆ ಮದುವೆ ಮಾಡಿಕೊಟ್ಟಿದ್ದೆ. ಮೇಘಾಗೂ ಮದುವೆ ಮಾಡುವ ಚಿಂತನೆ ನಡೆಸಿದ್ದೆವು. ೧೪೪ ವರ್ಷಗಳಿಗೆ ಒಮ್ಮೆ ಮಹಾ ಕುಂಭಮೇಳ (Kumbh Mela) ಬರುವುದರಿಂದ ತೆರಳಿದ್ದರು ಎಂದರು.
ಇದನ್ನು ಓದಿ : Urban Bank/ ನಾಲ್ವರು ಅವಿರೋಧ ಆಯ್ಕೆ