ಭಟ್ಕಳ: ತಾಲೂಕಿನ ಕರಿಕಲ್ ಧ್ಯಾನ ಮಂದಿರಕ್ಕೆ ಇಂದು ಶನಿವಾರ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (MP Kageri) ಭೇಟಿ ನೀಡಿ ಚಾತುರ್ಮಾಸ್ಯ ವ್ರತ ನಿರತ ಶ್ರೀ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಆಶೀರ್ವಾದ ಪಡೆದರು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಶ್ರೀಗಳ ಸಮ್ಮುಖದಲ್ಲಿ ಶ್ರೀ ದೇವರ ಪೂಜೆಯಲ್ಲಿ ಪಾಲ್ಗೊಂಡ ಸಂಸದ ಕಾಗೇರಿ(MP Kageri) ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಶ್ರೀಗಳು ಸಂಸದ ಕಾಗೇರಿ ಅವರಿಗೆ ಮಂತ್ರಾಕ್ಷತೆ ನೀಡಿ, ಶಾಲು ಹೊದೆಸಿ ಸನ್ಮಾನಿಸಿದರು. ಸಂಸದರು ಶ್ರೀಗಳಿಗೆ ಫಲಪುಷ್ಪದೊಂದಿಗೆ ಗೌರವಿಸಿದರು.

ಇದನ್ನೂ ಓದಿ : ಹಾಡುವಳ್ಳಿಗೆ ಮಾಜಿ ಶಾಸಕ ಸುನೀಲ ನಾಯ್ಕ ಭೇಟಿ

ಆರಂಭದಲ್ಲಿ ಸಂಸದರನ್ನು ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಧ್ಯಾನ ಮಂದಿರ ಸೇವಾ ಸಮಿತಿ ಅಧ್ಯಕ್ಷ ಶ್ರೀಧರ ನಾಯ್ಕ ಆಸರಕೇರಿ ಮತ್ತಿತರರು ಸ್ವಾಗತಿಸಿದರು. ಚಾತುರ್ಮಾಸ್ಯದ ವೈಭವ, ವ್ಯವಸ್ಥೆ ನೋಡಿ ಕಾಗೇರಿ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಕ್ಷೇತ್ರದಲ್ಲಿ ಚಾತುರ್ಮಾಸ್ಯ ನಡೆಯುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸಂಸದರು, ಸನಾತನ ಧರ್ಮದ ಉಳಿವು,-ಏಳ್ಗೆಗಾಗಿ ಶ್ರೀಗಳು ಕೈಗೊಳ್ಳುತ್ತಿರುವ ಕಾರ್ಯವನ್ನು ಶ್ಲಾಘಿಸಿದರು.

ಇದನ್ನೂ ಓದಿ :  ಒಳಚರಂಡಿ ಅವಾಂತರ, ಬಾವಿ ನೀರು ಕಲುಷಿತ

ಬಳಿಕ ಮಾತನಾಡಿದ ಸಂಸದ ಕಾಗೇರಿ, ಭಟ್ಕಳದ ಕರಿಕಲ್ ಶಾಖ ಮಠದಲ್ಲಿ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಚಾತುರ್ಮಾಸ್ಯ ವ್ರತ ಪ್ರಾರಂಭಿಸಿರುವುದು ಶಿಷ್ಯರಿಗೆ ಭಕ್ತ ವರ್ಗಕ್ಕೆ ಹಾಗೂ ನಾಡಿನ ಜನ ಸಮೂಹಕ್ಕೆ ಪುಣ್ಯದ ಕೆಲಸವಾಗಿದೆ. ಗುರುಗಳು ದೀಕ್ಷೆ ಪಡೆದ ಬಳಿಕ ಶಿಷ್ಯರ ಶ್ರೇಯೋಭಿವೃದ್ಧಿಗಾಗಿ, ನಮ್ಮ ಸನಾತನ ಹಿಂದೂ ಧರ್ಮದ ರಕ್ಷಣೆಗಾಗಿ ಮತ್ತು ಅದರ ಪ್ರಚಾರ ಕಾರ್ಯದಲ್ಲಿ ಒಂದು ಅದ್ಭುತ ಶಕ್ತಿಯಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಜನರನ್ನು ಸಂಘಟಿಸುವಂತಹ, ಜನರಲ್ಲಿ ಧಾರ್ಮಿಕ ,ಆಧ್ಯಾತ್ಮಿಕ ಭಾವನೆಯನ್ನು ಜಾಗ್ರತಿಗೊಳಿಸುವ ಅವರೆಲ್ಲ ಪ್ರಯತ್ನದ ಫಲ ಇಂದು ಸಮಾಜ ಒಳ್ಳೆಯದಾಗಿ ಬೆಳೆಯುತ್ತಿರುವುದನ್ನು ನಾವು ಕಾಣುತ್ತಿದ್ದೇವೆ. ಜನರಲ್ಲಿ ನಮ್ಮ ಹಿಂದೂ ಧರ್ಮವನ್ನು ಸದಾ ಜಾಗ್ರತವಾಗಿರುವುದಕ್ಕೆ ಪೂಜ್ಯ ಸ್ವಾಮೀಜಿಯವರ ಮಾಡುವಂತಹ ಎಲ್ಲಾ ಕೆಲಸದ ಜೊತೆಗೆ ನಾವೆಲ್ಲರೂ ಇದ್ದೇವೆ ಮತ್ತು ನಾವೆಲ್ಲರೂ ಜೊತೆ ಸೇರಿ ಸನಾತನ ಹಿಂದೂ ಧರ್ಮದ ರಕ್ಷಣೆಗೆ ನಮ್ಮನ್ನು ನಾವು ತೊಡಗಿಸಿಕೊಳ್ಳಲು ಶ್ರೀ ರಾಮ ಹಾಗೂ ಸ್ವಾಮೀಜಿ ಆಶೀರ್ವಾದ ಮಾಡಲಿ ಎಂದು ಹೇಳಿದರು.

ಇದನ್ನೂ ಓದಿ : ಎಲ್.ಪಿ.ಜಿ. ಪಂಪ್ ನಿರ್ಮಾಣಕ್ಕೆ ವಿರೋಧ

ಸಂಸದ ಕಾಗೇರಿ ಅವರೊಂದಿಗೆ ಕುಮಟಾ ಶಾಸಕ ದಿನಕರ ಶೆಟ್ಟಿ, ಭಟ್ಕಳ ಮಾಜಿ ಶಾಸಕ ಸುನೀಲ‌ ನಾಯ್ಕ, ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಗೋವಿಂದ ನಾಯ್ಕ, ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಮಂಡಲಾಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವೆಂಕಟೇಶ ನಾಯಕ, ಭಟ್ಕಳ ತಾಲೂಕು ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ನಾಯ್ಕ ಮತ್ತಿತರ ಪಕ್ಷದ ಮುಖಂಡರು ಜೊತೆಗಿದ್ದರು. ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ, ಈಶ್ವರ ನಾಯ್ಕ ಮುರುಡೇಶ್ವರ ಕೂಡ ಸಂಸದರಿಗೆ ಸಾಥ್ ನೀಡಿದರು.