ಭಟ್ಕಳ (Bhatkal): ಮುರುಡೇಶ್ವರ (Murdeshwar) ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ (Mangaluru) ವೆನ್ಲಾಕ್ ಆಸ್ಪತ್ರೆಯಲ್ಲಿ (Wenlock hospital) ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮೃತ ಬಾಲಕಿಯನ್ನು ರಾಜಸ್ಥಾನದ (Rajasthan) ಗಂಗಾಪುರ ಸಿಟಿ ಮೂಲದ ಅಲ್ಜಿಯಾಬಾನು ಸುಲೇಮಾನ್ ಖಾನ್ ಎಂದು ತಿಳಿದು ಬಂದಿದೆ. ಈಕೆ ತನ್ನ ತಂದೆ- ತಾಯಿಯೊಂದಿಗೆ ರಾಜಸ್ಥಾನದ ಕೋಟ ಜಂಕ್ಷನನಿಂದ ಕೇರಳ (Kerala) ರಾಜ್ಯದ ಕಣ್ಣೂರಿಗೆ ಅಮೃತಸರ್ ಕುಚೇವೆಲ್ಲಿ ಸೂಪರ್ ಫಾಸ್ಟ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದಳು.
ಇದನ್ನೂ ಓದಿ : ‘ಪಣಿ’ ಚಿತ್ರದ ಟ್ರೇಲರ್ ಗೆ ಭಾರಿ ಮೆಚ್ಚುಗೆ
ನವೆಂಬರ ೨೫ರ ರಾತ್ರಿ ೯ ಗಂಟೆ ಸುಮಾರಿಗೆ ಮುರ್ಡೇಶ್ವರ ಹತ್ತಿರ ಚಲಿಸುವ ರೈಲಿನಿಂದ ಬಿದ್ದ ಬಾಲಕಿಯ ತಲೆಗೆ ಗಂಭೀರವಾಗಿದೆ. ತಕ್ಷಣ ಆಕೆಯನ್ನು ಮುರುಡೇಶ್ವರ (Murdeshwar) ಆರ್ ಎನ್ ಎಸ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ (Manipal) ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಅಲ್ಲಿಂದ ಮಂಗಳೂರು ಜಿಲ್ಲಾ ಆಸ್ಪತ್ರೆ ವೆನ್ಲಾಕ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ: ಐವರಿಂದ ವೃದ್ಧ ಮೀನುಗಾರನಿಗೆ ಕೊಲೆ ಬೆದರಿಕೆ