ಭಟ್ಕಳ (Bhatkal) : ಅರಣ್ಯದಲ್ಲಿ ಜೂಜಾಡುತ್ತಿದ್ದ ಖಚಿತ ಸುಳಿವಿನ ಮೇರೆಗೆ ದಾಳಿ ನಡೆಸಿದ ಮುರುಡೇಶ್ವರ (Murdeshwar) ಪೊಲೀಸರು ಒಬ್ಬನನ್ನು ಬಂಧಿಸಿದ್ದಾರೆ. ಉಳಿದವರು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಮೂರು ಬೈಕ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುರುಡೇಶ್ವರದ (Murdeshwar) ಜನತಾ ಕಾಲೋನಿ ನಿವಾಸಿ ಜಟ್ಟಪ್ಪ ಸುಬ್ಬಯ್ಯ ನಾಯ್ಕ ಬಂಧಿತ ಆರೋಪಿ. ಬಂಧಿತ ಜಟ್ಟಪ್ಪ ನಾಯ್ಕ, ದೊಡ್ಡಬಲ್ಸೆ ನಿವಾಸಿ ವಸಂತ ಹರಿಕಂತ, ಕಂಡಕ ನಿವಾಸಿ ದುರ್ಗಯ್ಯ ನಾಯ್ಕ ಮತ್ತಿತರರು ಸೇರಿಕೊಂಡು ಜೂಜಾಡುತ್ತಿದ್ದರೆಂದು ಆರೋಪಿಸಲಾಗಿದೆ.
ಇದನ್ನು ಓದಿ : Microfinance/ ಉ.ಕ.ದಲ್ಲಿ ಮೈಕ್ರೊಫೈನಾನ್ಸ್ ಹಗರಣ ; ೭ ಪ್ರಕರಣ ದಾಖಲು
ಭಾನುವಾರ ರಾತ್ರಿ 8:30ರ ಸುಮಾರಿಗೆ ಇಸ್ಪೀಟ್ ಎಲೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿ ಅಂದರ ಬಾಹರ ಆಡುತ್ತಿದ್ದಾಗ ಪೊಲೀಸರು ದಾಳಿ ಮಾಡಿದ್ದಾರೆ. ಈ ಕುರಿತು ಮುರುಡೇಶ್ವರ (Murudeshwar) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : Shivarajkumar / ಯಾಣಕ್ಕೆ ಭೇಟಿ ನೀಡಿದ ಶಿವರಾಜಕುಮಾರ, ನಮ್ಮೂರ ಮಂದಾರ ಹೂವೇ ಮೆಲುಕು