ಭಟ್ಕಳ: ೨೦೨೫-೨೬ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ (PUC result) ಪ್ರಕಟವಾಗಿದ್ದು, ಮುರುಡೇಶ್ವರದ (Murdeshwar) ಆರ್‌ ಎನ್ ಶೆಟ್ಟಿ ಪದವಿ ಪೂರ್ವ ಕಾಲೇಜು (RNS PU College) ಉತ್ತಮ ಫಲಿತಾಂಶ ದಾಖಲಿಸಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ವಿಜ್ಞಾನ ವಿಭಾಗದಲ್ಲಿ ಲಿಡ್ಸನ್ ಫರ್ನಾಂಡಿಸ್ ಶೇ ೯೭.೭ ಅಂಕದೊಂದಿಗೆ ಪ್ರಥಮ ಸ್ಥಾನ, ಅನನ್ಯಾ ನಾಯ್ಕ ಶೇ ೯೭.೫ ಅಂಕದೊಂದಿಗೆ ದ್ವಿತೀಯ ಸ್ಥಾನ, ಪವಿತ್ರಾ ನಾಯ್ಕ ಶೇ ೯೭ ಅಂಕದೊಂದಿಗೆ ತೃತೀಯ ಸ್ಥಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಕೀರ್ತನಾ ನಾಯ್ಕ ಶೇ ೯೬.೩೩ ಅಂಕದೊಂದಿಗೆ ಪ್ರಥಮ ಸ್ಥಾನ, ವರ್ಷಿಣಿ ಗೊಂಡ ಶೇ ೯೬ ಅಂಕದೊಂದಿಗೆ ದ್ವಿತೀಯ ಸ್ಥಾನ, ಕಾವ್ಯ ನಾಯ್ಕ ಶೇ ೯೫ ಅಂಕದೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.

Pallakki Utsava/ ಮುಂಡಳ್ಳಿ ಅಮ್ಮನವರ ಅಷ್ಟಬಂಧದಲ್ಲಿ ಸಾಂಗವಾಗಿ ನೆರವೇರಿದ ಪಲ್ಲಕ್ಕಿ ಉತ್ಸವ

ವಿಜ್ಞಾನ ವಿಭಾಗದಲ್ಲಿ ೨೨ ವಿದ್ಯಾರ್ಥಿಗಳು ಹಾಗೂ ವಾಣಿಜ್ಯ ವಿಭಾಗದಲ್ಲಿ ೨೧ ವಿದ್ಯಾರ್ಥಿಗಳು ಶೇ ೮೫ಕ್ಕೂ ಅಧಿಕ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾರೆ. ಕನ್ನಡ, ಗಣಕಶಾಸ್ತ್ರ, ಭೌತಶಾಸ್ತ್ರದಲ್ಲಿ ತಲಾ ಎರಡು ವಿದ್ಯಾರ್ಥಿಗಳು ಹಾಗೂ ಗಣಿತ, ಸಂಖ್ಯಾಶಾಸ್ತ್ರದಲ್ಲಿ ತಲಾ ಓರ್ವ ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕ ಪಡೆದಿದ್ದಾರೆ.

PUC result/ ರಾಜ್ಯಕ್ಕೆ ೮ನೇ ರ‍್ಯಾಂಕ್ ಪಡೆದ ಭಟ್ಕಳದ ಸಂಜನಾ

ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ (PUC result) ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.

PUC result/ ಭಟ್ಕಳ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿ ಯು ಕಾಲೇಜಿಗೆ ಶೇಕಡಾ ೯೮.೩೬ ಫಲಿತಾಂಶ