ಭಟ್ಕಳ: ಬಡತನ ಒಂದು ಮಿತಿ ಅಲ್ಲ, ಅದೇ ದೊಡ್ಡ ಪ್ರೇರಣೆ ಆಗಬಲ್ಲದು ಅಂತ ತೋರಿಸಿಕೊಟ್ಟಿದ್ದಾರೆ. ಭಟ್ಕಳದ ನ್ಯೂ ಇಂಗ್ಲಿಷ್ ಕಾಲೇಜಿನ ವಾಣಿಜ್ಯ (commerce) ವಿಭಾಗದ ವಿದ್ಯಾರ್ಥಿನಿ ಸಂಜನಾ ನಾಯ್ಕ ದ್ವಿತೀಯ ಪಿಯುಸಿಯಲ್ಲಿ ರಾಜ್ಯಕ್ಕೆ ೮ನೇ ರ್ಯಾಂಕ್ ಪಡೆದಿದ್ದಾರೆ (PUC result). ಉತ್ತರ ಕನ್ನಡ (Uttara Kannada) ಜಿಲ್ಲೆಗೆ ಮೂರನೇ ರ್ಯಾಂಕ್ ಗಳಿಸಿರುವ ಈಕೆ ಭಟ್ಕಳ (Bhatkal) ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಗ್ರಾಮೀಣ ಭಾಗದ ಹೆಣ್ಣುಮಕ್ಕಳು ಏನು ಬೇಕಾದರೂ ಸಾಧಿಸಬಲ್ಲರು ಅನ್ನೋದಕ್ಕೆ ಸಂಜನಾ ಉದಾಹರಣೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಂಜನಾ ತರಹದ ಮಕ್ಕಳು ನಮ್ಮ ಶಿಕ್ಷಣ ವ್ಯವಸ್ಥೆಯ ನಿಜವಾದ ಹೀರೋಗಳು. ಅಂಕ ೫೯೩ (೯೮.೮೩%) ಅನ್ನೋದು ಕೇವಲ ನಂಬರ್ ಅಲ್ಲ. ಅದು ರಾತ್ರಿ ಎಚ್ಚರ, ಹಸಿವು, ಕಷ್ಟ ಮತ್ತು ಬಿಡದ ಛಲದ ಒಟ್ಟು ಮೊತ್ತ ( PUC result).
PUC result/ ಭಟ್ಕಳ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿ ಯು ಕಾಲೇಜಿಗೆ ಶೇಕಡಾ ೯೮.೩೬ ಫಲಿತಾಂಶ
ಭಟ್ಕಳ ತಾಲೂಕಿನ ಶಿರಾಲಿ ಚಿತ್ರಾಪುರದ ಮಾದೇವಿ ನಾಯ್ಕ ಅಂಗನವಾಡಿ ಕಾರ್ಯಕರ್ತೆ. ತಂದೆಯಿಲ್ಲದ ಇವರ ಮೂರು ಹೆಣ್ಣುಮಕ್ಕಳಿಗೆ ತಾಯಿಯೇ ಆಸರೆ. ಸಂಜನಾ ಕೊನೆಯವಳು. ಬಡತನ ಶಿಕ್ಷಣಕ್ಕೆ ಅಡ್ಡಿಯಾಗಲು ಎನ್ನುವುದನ್ನು ಸಂಜನಾ ರೂಪಿಸಿದ್ದಾಳೆ. ಇಂಥ ಸಾಧಕರು ಇನ್ನಷ್ಟು ಮಕ್ಕಳಿಗೆ “ನಾನೂ ಮಾಡಬಲ್ಲೆ” ಅನ್ನೋ ಧೈರ್ಯ ಕೊಡ್ತಾರೆ. ಸಂಜನಾಗೆ ಮುಂದಿನ ವಿದ್ಯಾಭ್ಯಾಸಕ್ಕೂ ಒಳ್ಳೇದಾಗಲಿ ಅಂತ ಹಾರೈಸೋಣ.
✍️ ಮಹೇಶ್ ಖಾರ್ವಿ



