ಭಟ್ಕಳ: ಮಾರ್ಚ ೨೦೨೬ರಲ್ಲಿ ನಡೆದ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಭಟ್ಕಳದ (Bhatkal) ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿ ಯು ಕಾಲೇಜು ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ ಹಾಜರಾದ ೩೦೫ ವಿದ್ಯಾರ್ಥಿಗಳಲ್ಲಿ ೩೦೦ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರ ಮೂಲಕ ಶೇಕಡಾ ೯೮.೩೬ ಫಲಿತಾಂಶ ದಾಖಲಿಸಿದೆ (PUC result). ೧೩೩ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದರೆ, ೧೫೮ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೧೮೫ ವಿದ್ಯಾರ್ಥಿಗಳಲ್ಲಿ ೧೮೨ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಸಂಜನಾ ನಾಗಪ್ಪ ನಾಯ್ಕ ೯೮.೮೩% ನೊಂದಿಗೆ ಪ್ರಥಮ, ಶುಭಾ ಮಹೇಶ ಖಾರ್ವಿ ೯೮% ನೊಂದಿಗೆ ದ್ವಿತೀಯ ಮತ್ತು ಅನು಼ಷಾ ಆನಂಧ ನಾಯ್ಕ ೯೭.೬೭% ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
Bhavagana/ ಬ್ರಹ್ಮ ಕಲಶೋತ್ಸವದಲ್ಲಿ ಭಾವಗಾನದ ನಿನಾದ
ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೯೮ ವಿದ್ಯಾರ್ಥಿಗಳಲ್ಲಿ ೯೮ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ತೇಜಸ ರವಿ ನಾಯ್ಕ ೯೮% ನೊಂದಿಗೆ ಪ್ರಥಮ, ದೇಶಿಕ್ ದುರ್ಗಾದಾಸ ನಾಯ್ಕ ಮತ್ತು ಯುವರಾಜ ಗೋಯ್ದಪ್ಪ ನಾಯ್ಕ ೯೭.೮೩% ನೊಂದಿಗೆ ದ್ವಿತೀಯ ಮತ್ತು ಇಂಚರಾ ಶ್ರೀನಿವಾಸ ಮೊಗೇರ ೯೬.೮೩% ನೊಂದಿಗೆ ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ.
Rathotsava/ ಚಿತ್ರಾಪುರದಲ್ಲಿ ರಥೋತ್ಸವ ಸಂಪನ್ನ
ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ೨೨ ವಿದ್ಯಾರ್ಥಿಗಳಲ್ಲಿ ೨೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ರಮೇಶ ಸುಕ್ರ ಗೊಂಡ ೮೭.೩೩% ನೊಂದಿಗೆ ಪ್ರಥಮ, ಭಾವನಾ ನಾಗರಾಜ ನಾಯ್ಕ ೮೬.೬೭% ನೊಂದಿಗೆ ದ್ವಿತೀಯ ಮತ್ತು ಪ್ರಾರ್ಥನಾ ಪ್ರಶಾಂತ ಚಿತ್ರಾಪುರ ೮೩.೧೭% ನೊಂದಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
CM Medal/ ಪಿಎಸ್‌ಐ ನವೀನ್ ನಾಯ್ಕಗೆ ಸಿಎಂ ಪದಕ ಪ್ರದಾನ
ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ಕನ್ನಡದಲ್ಲಿ ೯, ಹಿಂದಿಯಲ್ಲಿ ೧, ಭೌತಶಾಸ್ತ್ರ ೨, ಗಣಿತ ೫, ಜೀವಶಾಸ್ತ್ರ ೧, ಗಣಕಶಾಸ್ತ್ರ ೧, ಸಂಖ್ಯಾಶಾಸ್ತ್ರ ೪, ಲೆಕ್ಕಶಾಸ್ತ್ರ ೨ ಮತ್ತು ವ್ಯವಹಾರ ಅಧ್ಯಯನದಲ್ಲಿ ೯ ವಿದ್ಯಾರ್ಥಿಗಳು ೧೦೦/೧೦೦ ಅಂಕಗಳನ್ನು ಪಡೆದುಕೊಂಡಿರುತ್ತಾರೆ.
Durgaparameshwari/ ೬೦೦ ವರ್ಷಗಳ ಇತಿಹಾಸದ ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ
ವಿದ್ಯಾರ್ಥಿಗಳ ಸಾಧನೆಗೆ (PUC result) ಭಟ್ಕಳ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಆರ್ ಜಿ ಕೊಲ್ಲೆ ಮತ್ತು ಟ್ರಸ್ಟಿ ಮೆನೇಜರ್ ರಾಜೇಶ ನಾಯಕ ಹಾಗೂ ಪ್ರಾಂಶುಪಾಲ ಡಾ ವಿರೇಂದ್ರ ವಿ ಶ್ಯಾನಭಾಗ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಅಭಿನಂದನೆ ಸಲ್ಲಿಸಿರುತ್ತಾರೆ.
Bhatkal Municipal Commissioner/ ಭಟ್ಕಳ ನಗರಸಭೆ ಪೌರಾಯುಕ್ತರಾಗಿ ಬಾಬಾ ಸಾಹೇಬ್ ಮಾನೆ ಅಧಿಕಾರ ಸ್ವೀಕಾರ



