ಭಟ್ಕಳ (Bhatkal) : ಮುರುಡೇಶ್ವರ (Murudeshwar) ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರಿನ (Bengaluru) ಕಾಲೇಜೊಂದರ ವಿದ್ಯಾರ್ಥಿಗಳ ಪೈಕಿ ಒಬ್ಬ ಸಮುದ್ರಪಾಲಾದ ಘಟನೆ ಇಂದು ರವಿವಾರ ಬೆಳಿಗ್ಗೆ ನಡೆದಿದೆ. ಸಮುದ್ರದ ಅಲೆಗೆ ಸಿಕ್ಕ ಇನ್ನೊಬ್ಬ ವಿದ್ಯಾರ್ಥಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬೆಂಗಳೂರಿನ ಜಾಲಹಳ್ಳಿ ಕ್ರಾಸ್‌ನಲ್ಲಿರುವ ವಿದ್ಯಾಸೌಧ ಪಿಯು ಕಾಲೇಜಿನ ವಿದ್ಯಾರ್ಥಿ ಗೌತಮ್‌ (೧೭) ಸಮುದ್ರ ಪಾಲಾಗಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿ ಧನುಷ್‌ ಡಿ. ಎಂಬಾತನನ್ನು ರಕ್ಷಿಸಲಾಗಿದೆ. ಕಾಲೇಜಿನ ೨೨೦ ವಿದ್ಯಾರ್ಥಿಗಳು ಪ್ರವಾಸಕ್ಕೆಂದು ಮುರುಡೇಶ್ವರಕ್ಕೆ (Murudeshwar) ಬಂದಿದ್ದರು. ಈ ವೇಳೆ ಇಬ್ಬರು ವಿದ್ಯಾರ್ಥಿಗಳು ಸಮುದ್ರದ ಆಳದಲ್ಲಿ ಈಜಲು ತೆರಳಿದ್ದಾರೆ. ಅಲೆಯ ಹೊಡೆತಕ್ಕೆ ಗೌತಮ್‌ ಸಮುದ್ರದಲ್ಲಿ ಮುಳುಗಿದ್ದಾನೆ. ಇನ್ನೊಬ್ಬ ವಿದ್ಯಾರ್ಥಿಯನ್ನು ಲೈಫ್‌ ಗಾರ್ಡ್‌ ಮತ್ತು ಪೊಲೀಸ್‌ ಸಿಬ್ಬಂದಿ ರಕ್ಷಿಸಿದ್ದಾರೆ.

ಇದನ್ನೂ ಓದಿ : ಸಹಕೈದಿ ಮೇಲೆ ಮಾರಣಾಂತಿಕ ಹಲ್ಲೆ

ಗೌತಮ್‌ ಸಮುದ್ರದಲ್ಲಿ ಮುಳುಗಿರುವುದು ಯಾರಿಗೂ ಮೊದಲು ಗೊತ್ತಾಗಲೇ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆ ಎಣಿಸಿದಾಗ ಗೌತಮ್‌ ಈಜುಲು ಹೋಗಿರುವುದು ಗೊತ್ತಾಗಿದೆ. ಕೊನೆಗೆ ಗೌತಮ್‌ ಶವವನ್ನು ಹೊರತೆಗೆಯಲಾಗಿದೆ. ರಕ್ಷಣೆಗೊಳಗಾದ ಧನುಷ್‌ ನನ್ನು ಆರ್‌ಎನ್‌ಎಸ್‌ (RNS) ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿಗೆ ಸಂಬಂಧಿಸಿದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.

ಇದನ್ನೂ ಓದಿ :  ಮಾರಣಾಂತಿಕ ಹಲ್ಲೆ ಯತ್ನ; ಜೀವ ಬೆದರಿಕೆ