ಭಟ್ಕಳ: ರಾಷ್ಟ್ರೀಯ ಹೆದ್ದಾರಿ (National Highway) ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಭಟ್ಕಳ (Bhatkal) ನಗರ ವ್ಯಾಪ್ತಿಯಲ್ಲಿ ಸುಗಮ ಸಂಚಾರಕ್ಕಾಗಿ ಕೆಲವು ಮಾರ್ಗ (Traffic route) ಬದಲಾವಣೆ ಮಾಡಲಾಗಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸರ್ಕಲ್ ಮತ್ತು ಬಂದರ್ ರೋಡ್ ಕಡೆಯಿಂದ ಕೆಳಗಿನ ಮಾರ್ಕೆಟ್ ಕಡೆಗೆ ಹೋಗುವ ವಾಹನಗಳು, → ಬಂದರ್ ರೋಡ್ → ಈದ್ಗಾ ಮೈದಾನ → ಸೋನಾರಕೇರಿ ಕ್ರಾಸ್ → ಪೊಲೀಸ್ ಠಾಣೆ ಮುಂಭಾಗದ ರಸ್ತೆಯ ಮೂಲಕ ಸಂಚರಿಸತಕ್ಕದ್ದು. ಮಾರಿಕಟ್ಟಾ, ಹಳೆ ಬಸ್ ನಿಲ್ದಾಣ ಕಡೆಯಿಂದ ಸರ್ಕಲ್ ಕಡೆಗೆ ಹೋಗುವ ವಾಹನಗಳು,→ ಪೊಲೀಸ್ ಠಾಣೆ ಮುಂಭಾಗದ ರಸ್ತೆ → ಸೋನಾರಕೇರಿ ಕ್ರಾಸ್ → ಈದ್ಗಾ ಮೈದಾನ → ಬಂದರ್ ರೋಡ್ ಮಾರ್ಗವಾಗಿ ಸಂಚರಿಸತಕ್ಕದ್ದು. ಜಾಲಿ, ಜಾಲಿ ಕೋಡಿ ಮತ್ತು ಜಾಲಿ ಬೀಚ್ ಕಡೆಗೆ ಹೋಗುವ ವಾಹನಗಳು, → ಬಂದರ್ ರೋಡ್ ೨ನೇ ಕ್ರಾಸ್ ರಸ್ತೆಯ ಮೂಲಕ ಸಂಚರಿಸತಕ್ಕದ್ದು.
train route/ ಮುರ್ಡೇಶ್ವರ – ಬೆಂಗಳೂರು ರೈಲು ಸಂಚಾರ ಮಾರ್ಗದಲ್ಲಿ ಬದಲಾವಣೆ
ಭಟ್ಕಳ ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಸಾರ್ವಜನಿಕರು ಮತ್ತು ವಾಹನ ಸವಾರರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪೂರ್ಣಗೊಳ್ಳುವವರೆಗೆ “ತುರ್ತು/ಅನಿವಾರ್ಯ ಸಂದರ್ಭ ಹೊರತುಪಡಿಸಿ” ರಾಷ್ಟ್ರೀಯ ಹೆದ್ದಾರಿ-೬೬ (NH-66) ಬಳಸದಂತೆ ಹಾಗೂ ಪರ್ಯಾಯ ಮಾರ್ಗಗಳನ್ನು (Traffic route) ಬಳಸುವಂತೆ ಪೊಲೀಸರು ಕೋರಿದ್ದಾರೆ.



