ಭಟ್ಕಳ: ಇಲ್ಲಿನ ಬೋಯಿರಕೇರಿಯ ಪುರಾತನ ಪಶುಪತಿ (Pashupati) ದೇವಸ್ಥಾನದ ನಿಧಿ ಕುಂಭ ಸಮರ್ಪಣಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನಡೆಯಿತು. ಗೋಕರ್ಣದ (Gokarna) ವೇದಮೂರ್ತಿ ಶ್ರೀನಿವಾಸ ಅಡಿಗರ ನೇತೃತ್ವದಲ್ಲಿ ಅರ್ಚಕ ರಾಘು ಭಟ್ ತಂಡವು ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಿದ ನಂತರ ನೂತನ ಶಿಲಾಮಯ ದೇವಾಲಯದ ಗರ್ಭಗುಡಿಯಲ್ಲಿ ನಿಧಿ ಕುಂಭ ಸಮರ್ಪಣೆಯ ಕಾರ್ಯ ನಡೆಯಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಭಕ್ತರು ತಮ್ಮ ಇಷ್ಟಾನುಸಾರ ಚಿನ್ನ ಬೆಳ್ಳಿ, ನವರತ್ನ ಮುಂತಾದವುಗಳನ್ನು ನಿಧಿ ಕುಂಭಕ್ಕೆ ಸಮರ್ಪಿಸಿದರು. ಈ ಸಂದರ್ಭದಲ್ಲಿ ಪಶುಪತಿ (Pashupati) ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗೋವಿಂದ ನಾಯ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಲಚ್ಮಯ್ಯ ನಾಯ್ಕ, ಪ್ರಮುಖರಾದ ಕೇದಾರ ಕೊಲ್ಲೆ, ಮಳ್ಳಾ ನಾಯ್ಕ, ಚಂದ್ರಹಾಸ ಭಟ್, ಕೃಷ್ಣ ನಾಯ್ಕ, ಶ್ರೀಕಾಂತ ನಾಯ್ಕ, ಶಿವಾನಿ ಶಾಂತಾರಾಮ, ಕೃಷ್ಣ ಮಹಾಲೆ, ಉದಯ ಮಡಿವಾಳ, ವಿನಾಯಕ ಮಡಿವಾಳ, ನಾಗರಾಜ ಶೇಟ, ವಿಠ್ಠಲ ನಾಯ್ಕ, ರಾಮಚಂದ್ರ ನಾಯ್ಕ, ಶ್ರೀಪಾದ ಕಂಚುಗಾರ, ವೆಂಕಟೇಶ ಮೊಗೇರ, ಸೇರಿದಂತೆ ವಿವಿಧ ದೇವಸ್ಥಾನಗಳ ಪಧಾಧಿಕಾರಿಗಳು, ಭಕ್ತರು ಇದ್ದರು.

school ground/ ಹನುಮಾನ ನಗರದ ಶಾಲಾ ಮೈದಾನ ದುರ್ಬಳಕೆ ಆರೋಪ