ಭಟ್ಕಳ: ಕೆಎಸ್‌ಆರ್ ಬೆಂಗಳೂರು (KSR Bengaluru) ರೈಲ್ವೆ ನಿಲ್ದಾಣದಲ್ಲಿ ಕೆಲವು ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುರ್ಡೇಶ್ವರ (Murdeshwar) ಹಾಗೂ ಶ್ರೀ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು (SMVT Bengaluru) ನಡುವೆ ಸಂಚರಿಸುವ ರೈಲು ಸಂಖ್ಯೆ ೧೬೫೮೬ ಎಕ್ಸ್‌ಪ್ರೆಸ್ ರೈಲಿನ ಸಂಚಾರ ಮಾರ್ಗದಲ್ಲಿ (train route) ಕೆಲವು ಬದಲಾವಣೆಗಳನ್ನು ನೈರುತ್ಯ ರೈಲ್ವೆ (SWR) ಮಾಡಿದೆ ಎಂದು ಕೊಂಕಣ ರೈಲ್ವೆಯ (Konkan railway) ಪ್ರಕಟಣೆ ತಿಳಿಸಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮುಂದಿನ ಜುಲೈ ೧೬ ಮತ್ತು ೧೭ರಂದು ಸಂಚರಿಸುವ ಮುರ್ಡೇಶ್ವರ- ಬೆಂಗಳೂರು ರೈಲು ಕೆಎಸ್‌ಆರ್ ಬೆಂಗಳೂರು, ಯಶವಂತಪುರ ಜಂಕ್ಷನ್ (yashwantpur junction), ಹೆಬ್ಬಾಳ (Hebbal) ಹಾಗೂ ಬಾಣಸವಾಡಿ (Banasavadi) ಮೂಲಕ ಸಂಚರಿಸಲಿದೆ (train route). ಈ ಮೂಲಕ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದ ನಿಲುಗಡೆ ಇರುವುದಿಲ್ಲ.
Pashupati/ ಪಶುಪತಿ ದೇವಸ್ಥಾನದಲ್ಲಿ ನಿಧಿ ಕುಂಭ ಸಮರ್ಪಣೆ
ಮುಂದಿನ ಜುಲೈ ೩೧ರಿಂದ ಆಗಸ್ಟ್ ೨ರವರೆಗೆ (೩ ದಿನ) ಸಂಚರಿಸುವ ಮುರ್ಡೇಶ್ವರ- ಬೆಂಗಳೂರು ದೈನಂದಿನ ಎಕ್ಸ್‌ಪ್ರೆಸ್ ರೈಲನ್ನು ಹಾಸನ ಜಂಕ್ಷನ್, ನೆಲಮಂಗಲ, ಚಿಕ್ಕ ಬಾಣಾವರ, ಯಶವಂತಪುರ ಎ ಕಬಿನ್, ಲೊಟ್ಟೆಗೊಳ್ಳನಹಳ್ಳಿ, ಬಾಣಸವಾಡಿ, ವಿಶ್ವೇಶ್ವರಯ್ಯ ಟರ್ಮಿನಲ್ ಮೂಲಕ ಸಂಚರಿಸಲಿದೆ. ಈ ಮೂಲಕ ಹೊಳೆನರಸಿಪುರ, ಕೃಷ್ಣರಾಜನಗರ, ಮೈಸೂರು ಜಂಕ್ಷನ್, ಮಂಡ್ಯ, ರಾಮನಗರಂ, ಕೆಎಸ್‌ಆರ್ ಬೆಂಗಳೂರು ಸಿಟಿ ಜಂಕ್ಷನ್ ಹಾಗೂ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಿಲುಗಡೆಯನ್ನು ತಪ್ಪಿಸಿಕೊಳ್ಳಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.



