ಹೊನ್ನಾವರ (Honnavar): ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ರೈಲು ಬಡಿದು (train hit) ಮೃತಪಟ್ಟಿರುವ ಘಟನೆ ತಾಲೂಕಿನ ಮಂಕಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಗುಣವಂತೆಯ ಕೋಲ್ಕಿ ನಿವಾಸಿ ಗಣಪಿ ಗಣಪಯ್ಯ ಗೌಡ (೭೦) ಮೃತ ವೃದ್ಧೆ. ಇವರು ಕೆಲ ವರ್ಷಗಳಿಂದ ಮಾನಸಿಕ ಅಸ್ವಸ್ಥರಾಗಿದ್ದು, ಅತ್ತಿಂದಿತ್ತ ಸುತ್ತಾಡುತ್ತ ಇರುತ್ತಿದ್ದರೆನ್ನಲಾಗಿದೆ. ಮನೆಯವರು ಅವರನ್ನು ಹುಡುಕಾಡಿ ಮನೆಗೆ ಕರೆತರುತ್ತಿದ್ದರು.  ಸೆ.೧ರಂದು ಮಧ್ಯಾಹ್ನ ೧೨.೩೦ರ ಸುಮಾರಿಗೆ ಎಂದಿನಂತೆ ಅತ್ತಿಂದಿತ್ತ ತಿರುಗಾಡುತ್ತ ಭಂಡಾರಕೇರಿಯ ರೈಲ್ವೆ ಹಳಿಯ ಬಳಿ ಹೋಗಿದ್ದರು. ಹಳಿಯ ಮೇಲೆ ನಡೆದುಕೊಂಡು ಹೋಗುತ್ತಿರುವಾಗ ಅಪಘಾತ ಸಂಭವಿಸಿದೆ. ಹೊನ್ನಾವರ ಕಡೆಯಿಂದ ಮಂಗಳೂರು (Mangaluru) ಕಡೆಗೆ ಸಂಚರಿಸುತ್ತಿದ್ದ ಮುಂಬೈ (Mumbai) -ಮಂಗಳೂರು ರೈಲು ಬಡಿದಿದ್ದರಿಂದ (train hit) ಸಾವನ್ನಪ್ಪಿದ್ದಾರೆ. ಈ ಕುರಿತು ಮಂಕಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (Case Registered). ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ಇದನ್ನೂ ಓದಿ : ಮುರ್ಡೇಶ್ವರ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ; ಇಬ್ಬರ ಬಂಧನ