ಭಟ್ಕಳ (Bhatkal) : ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ಶ್ರೀ ಶ್ರೀಧರ ಪದ್ಮಾವತಿ ದೇವಿಯ ಸನ್ನಿಧಿಯಲ್ಲಿ ರಥ ಸಪ್ತಮಿಯ (Ratha Sapthami) ಹಿನ್ನೆಲೆಯಲ್ಲಿ ವರ್ಷಂಪ್ರತಿಯಂತೆ ಪಲ್ಲಕ್ಕಿ (Pallakki) ಉತ್ಸವವು ಫೆ.೩ರಂದು ನಡೆಯಲಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅಂದು ಮುಂಜಾನೆ ಶ್ರೀ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ಹಾಗೂ ಒಂದು ಗಂಟೆಯಿಂದ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ೪ ಗಂಟೆಗೆ ಪುರ ಬೀದಿಯಲ್ಲಿ ಶ್ರೀಧರ ಪದ್ಮಾವತಿ ದೇವಿಯ ಪಲ್ಲಕ್ಕಿ (Pallakki) ಉತ್ಸವದ ಮೆರವಣಿಗೆ ನಡೆಯಲಿದೆ. ಈ ಪಲ್ಲಕ್ಕಿ ಉತ್ಸವದ ವಿಶೇಷವೆಂದರೆ ರಥಸಪ್ತಮಿಯ ಮೊದಲ ದಿನ ಪದ್ಮಾವತಿ ಅಮ್ಮನವರ ಪಲ್ಲಕ್ಕಿಯು ನಿಚ್ಚಲಮಕ್ಕಿ ವೆಂಕಟರಮಣ ದೇವರ ಸನ್ನಿಧಿಗೆ ತೆರಳಲಿದ್ದು, ಮರುದಿನ ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವರ ಪಲ್ಲಕ್ಕಿಯು ಶ್ರೀ ಪದ್ಮಾವತಿ ಅಮ್ಮನವರ ದೇಗುಲಕ್ಕೆ ಬರುತ್ತದೆ. ಶ್ರೀ ಪದ್ಮಾವತಿ ದೇವಿ ಮತ್ತು ಶ್ರೀ ವೆಂಕಟರಮಣ ದೇವರು ಸತಿಪತಿಯರ ಪಲ್ಲಕ್ಕಿ ಉತ್ಸವವು ಪರಸ್ಪರರ ಭೇಟಿಗೆ ತೆರಳುವುದು ವಿಶೇಷವಾಗಿದೆ.
ಇದನ್ನೂ ಓದಿ : Calender/ ೨೦೦೨೫ನೇ ವರ್ಷದ ಕ್ಯಾಲೆಂಡರ್ ಬಿಡುಗಡೆ
ಪಲ್ಲಕ್ಕಿ ಮೆರವಣಿಗೆಯು ಪದ್ಮಾವತಿ ದೇವಸ್ಥಾನದಿಂದ ಹೊರಟು ರಘುನಾಥ ರಸ್ತೆಯ ಮೂಲಕ ಮಣ್ಕಳಿ ಕೇರಿಯ ಪುಷ್ಪಾಂಜಲಿ ಚಿತ್ರಮಂದಿರದವರೆಗೆ ತಲುಪಲಿದೆ. ಅಲ್ಲಿಂದ ಹಿಂದಿರುಗಿ ವೀರ ವಿಠಲ ರಸ್ತೆಯ ಮೂಲಕ ಒಡೆಯರ ಮಠ ಮಾರ್ಗವಾಗಿ ನೆಹರು ರಸ್ತೆಯನ್ನು ತಲುಪಲಿದೆ. ಅಲ್ಲಿಂದ ಹೂವಿನ ಚೌಕ, ಮುಖ್ಯ ರಸ್ತೆಯ ಮೂಲಕ ಸಾಗಿ ಜಟ್ಟಪ್ಪ ನಾಯಕ ಬಸದಿಯ ಎದುರಿನ ರಸ್ತೆಯ ಮೂಲಕ ಆಸರಕೇರಿ ಪ್ರವೇಶಿಸಲಿದೆ. ನಿಚ್ಚಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನ, ಸೊನಾರಕೇರಿ ಮಾರ್ಗವಾಗಿ ಶಹರ ಪೊಲೀಸ್ ಠಾಣೆಯನ್ನು ತಲುಪಲಿದೆ. ಅಲ್ಲಿಂದ ಮುಖ್ಯ ರಸ್ತೆ,ಯ ಮೂಲಕ ಹಳೆ ಬಸ್ ನಿಲ್ದಾಣ, ಕಳಿ ಹನುಮಂತ ದೇವಸ್ಥಾನ ರಸ್ತೆಯ ಮೂಲಕ ಪದ್ಮಾವತಿ ದೇವಾಲಯಕ್ಕೆ ಹಿಂದಿರುಗಲಿದೆ.
ಇದನ್ನೂ ಓದಿ : Ginger growers / ಕಣ್ಣೀರು ಸುರಿಸುತ್ತಿರುವ ಶುಂಠಿ ಬೆಳೆಗಾರರು