ಭಟ್ಕಳ (Bhatkal) : ತಾಲೂಕಿನ ಶಿರಾಲಿಯಲ್ಲಿ ಯುಗಾದಿಯ (Ugadi) ಶುಭದಿನದಂದು ಚಿಕ್ಕ ಚೊಕ್ಕ ಕಾರ್ಯಕ್ರಮ ನಡೆಯಿತು. ಇತ್ತೀಚೆಗೆ ನಡೆದ ಭಟ್ಕಳ ತಾಲೂಕು ೧೧ನೇ ಕನ್ನಡ (Kannada) ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ನಾರಾಯಣ ಯಾಜಿಯವರ ೨ನೇ ಕವನ ಸಂಕಲನ (Poetry collection) ಸದ್ದಿಲ್ಲದೆ ಬಿಡುಗಡೆಗೊಂಡಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ವಕೀಲ (Advocate) ಮತ್ತು ಹಿರಿಯ ಸಾಹಿತಿ (writer) ನಾರಾಯಣ ಯಾಜಿ ಅವರ ಎರಡನೇ ಕವನ ಸಂಕಲನ (Poetry collection) “ಹಡೆಯೋದಾದರೆ ನೀನು…” ಕೃತಿಯನ್ನು ಅವರ ಹಿರಿಯಣ್ಣ ಗಣಪತಿ ಕೃಷ್ಣ ಯಾಜಿ ಅವರು ಗುಡಿಗದ್ದೆಯ ಮೂಲಮನೆಯಲ್ಲಿ ಬಿಡುಗಡೆ ಗೊಳಿಸಿದರು. ನಂತರ ಮಾತನಾಡಿದ ಗಣಪತಿ ಯಾಜಿಯವರು ಸಹೋದರ, ಕವಿ ನಾರಾಯಣ ಯಾಜಿಗೆ ಶುಭ ಕೋರಿದರು. ಪ್ರಾರಂಭ ದಲ್ಲಿ ಕೃಷ್ಣಾನಂದ ಯಾಜಿ ಸ್ವಾಗತಿಸಿದರು. ಕವಿ ನಾರಾಯಣ ಯಾಜಿ ಪ್ರಾಸ್ತವಿಕವಾಗಿ ಮಾತಾಡಿ, ತಮ್ಮ ಕೃತಿಯ ಪರಿಚಯ ಮಾಡಿಕೊಟ್ಟರು. ಛಾಯಾ ಯಾಜಿ ವಂದಿಸಿದರು. ಸಂಜಿತ ಯಾಜಿ ಮತ್ತು ಕಲ್ಯಾಣಿ ಯಾಜಿ ಉಪಸ್ಥಿತರಿದ್ದರು.
ಇದನ್ನೂ ಓದಿ : Vardhanti/ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಧಂತಿ ಉತ್ಸವ