ಭಟ್ಕಳ (Bhatkal): ವಿಶ್ವ ಪ್ರಸಿದ್ಧ ಪ್ರವಾಸಿ ತಾಣವಾದ ಮುರುಡೇಶ್ವರಕ್ಕೆ (Murudeshwar) ಕನ್ನಡ ಚಲನಚಿತ್ರ ನಟಿ (Kannada actress) ಪೂಜಾ ಗಾಂಧಿ (Pooja Gandhi) ಭೇಟಿ ನೀಡಿ ದೇವರ ದರ್ಶನ ಪಡೆದು ತೆರಳಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಉತ್ತರ ಪ್ರದೇಶ ಮೂಲದ ನಟಿ ಪೂಜಾ ಗಾಂಧಿ (Pooja Gandhi) ಕನ್ನಡ (Kannada) ಕಲಿತು, ಕನ್ನಡದ ಹುಡುಗನನ್ನೇ ಮದುವೆಯಾಗಿ ಪಕ್ಕಾ ಕನ್ನಡತಿ ಆಗಿದ್ದಾರೆ. 40 ವರ್ಷದ ನಟಿ ಸದ್ಯ ಅಷ್ಟಾಗಿ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಕನ್ನಡ ಸಾಹಿತ್ಯದ ಕಡೆಗೆ ಹೆಚ್ಚು ಗಮನ ಕೊಡುತ್ತಿರುವ ಪೂಜಾ ಗಾಂಧಿ ಈಗ ಕನ್ನಡ ನೆಲದ ಮಗಳು ಎನ್ನುವ ರೀತಿ ಆಗಿದ್ದಾರೆ.
ಇದನ್ನೂ ಓದಿ: ಕಾರು ಡಿಕ್ಕಿಯಾಗಿ ಸ್ಕೂಟಿ ಸವಾರ ಗಂಭೀರ
ಸದ್ಯ ಅವರು ತಮ್ಮ ಸಹೋದರಿ ಹಾಗೂ ಸ್ನೇಹಿತೆಯೊಂದಿಗೆ ಉತ್ತರ ಕನ್ನಡ (Uttarakannada) ಜಿಲ್ಲೆಯ ಮುರುಡೇಶ್ವರ (Murdeshwar) ಹಾಗೂ ಇಡುಗುಂಜಿ (Idagunji) ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡಿಕೊಂಡಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಯನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರು ಗಂಭೀರ