ಭಟ್ಕಳ (Bhatkal): ಮುರ್ಡೇಶ್ವರದಲ್ಲಿ (Murdeshwar) ಪ್ರತಿಭಟನೆಯ ಬಿಸಿ ಎದುರಿಸಿದ ಐಆರ್‌ಬಿ ಕಂಪನಿಯವರಿಗೆ (IRB infra) ಭಟ್ಕಳ ಶಹರದ ಮೂಡಭಟ್ಕಳದಲ್ಲೂ ಪ್ರತಿಭಟನೆ (Protest) ವ್ಯಕ್ತವಾಗಿದೆ.  ರಾಷ್ಟ್ರೀಯ ಹೆದ್ದಾರಿ (National highway) ಅಗಲೀಕರಣ ಕಾಮಗಾರಿಗೆಂದು ಇಲ್ಲಿನ ಮೂಢ ಭಟ್ಕಳ ಬೈಪಾಸ್ ಗೆ ಬಂದ ಐ. ಆರ್.ಬಿ ಕಂಪನಿಯ ವಾಹನಗಳನ್ನು ಸ್ಥಳೀಯ ಸಾರ್ವಜನಿಕರು ಮರಳಿ ಕಳುಹಿಸಿದ್ದಾರೆ. ಮೊದಲು ಅಂಡರ್ ಪಾಸ್ (Under Pass) ಮಾಡಿ, ಬಳಿಕ ರಸ್ತೆ ಅಗಲೀಕರಣ ಮಾಡುವಂತೆ ಒತ್ತಾಯಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೆದ್ದಾರಿ ಪ್ರಾಧಿಕಾರದ ಮೇರೆಗೆ ತ್ವರಿತಗತಿಯಲ್ಲಿ ಚತುಷ್ಪಥ (four lane) ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲು ಮುಂದಾಗಿರುವಐ ಐ.ಆರ್.ಬಿ. ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂಡಭಟ್ಕಳದಲ್ಲಿ ಕಾಮಗಾರಿಯನ್ನು ಮತ್ತೆ ಆರಂಭ ಮಾಡಲು ಮುಂದಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದ ಮೂಡಭಟ್ಕಳ, ಮುಟ್ಟಳ್ಳಿ ಭಾಗದ ಜನರು ಸ್ಥಳಕ್ಕೆ ಆಗಮಿಸಿ ಕಾಮಗಾರಿ ಮುಂದುವರೆಸದಂತೆ ತಾಕೀತು ಮಾಡಿದರು (Protest).

ಇದನ್ನೂಓದಿ : ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಟ್ಯೂಶನ್‌ ಕ್ಲಾಸ್‌

ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಬರುವ ನಿರೀಕ್ಷೆಯಿಂದಲೇ ಕಾದು ಕುಳಿತಿದ್ದ ಜನರು, ಕೆಲ ಹೊತ್ತಿನ ನಂತರ ಐಆರ್‌ಬಿ ವಾಹನಗಳತ್ತ ಮುಖ ಮಾಡಿದರು. ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಚದುರಿಸುವ ಪ್ರಯತ್ನ ನಡೆಸಿದರು. ಈ ಹಂತದಲ್ಲಿ ಜನರ ಆಕ್ರೋಶ ಪೊಲೀಸರತ್ತ ತಿರುಗಿತು. ಈ ಹೆದ್ದಾರಿ ಪ್ರಾಧಿಕಾರ, ಐಆರ್‌ಬಿ ಕಂಪನಿ ಜನರಿಗೆ ಬೇಕಾದ ಒಂದು ಕೆಲಸವನ್ನೂ ಮಾಡುವುದಿಲ್ಲ, ಕೊಟ್ಟ ಯಾವುದೇ ಮಾತನ್ನೂ ಇಲ್ಲಿಯವರೆಗೆ ಉಳಿಸಿಕೊಂಡಿಲ್ಲ. ನಮ್ಮನ್ನು ಬಂಧಿಸಿದರೂ ಸರಿಯೇ, ನಾವು ಕೆಲಸ ಮಾಡಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.  ಮೊದಲು ಅಂಡರ್ ಪಾಸ್, ನಂತರ ಹೆದ್ದಾರಿ ಅಗಲೀಕರಣ ಕಾಮಗಾರಿ ಎಂದು ಎಚ್ಚರಿಸಿದರು. ಐಆರ್‌ಬಿ ಕಂಪನಿಯ ಜೆಸಿಬಿ, ಟಿಪ್ಪರ್ ವಾಹನಗಳು ಅಲ್ಲಿಂದ ಮರಳಿ ಕಳುಹಿಸಿದರು.

ಇದನ್ನೂ ಓದಿ : ನಾಗಬನದಲ್ಲಿ ವಿಜೃಂಭಣೆಯ ದೀಪೋತ್ಸವ

ಬಗ್ಗೆ ಮಾತನಾಡಿದ ಸ್ಥಳೀಯ ಶ್ರೀನಿವಾಸ ನಾಯ್ಕ,  ಡಾ.ಚಿತ್ತಾರಂಜನ್ ಬೈಪಾಸ್ (ಮೂಢ ಭಟ್ಕಳ)ನಲ್ಲಿ ಅಂಡರ್ ಪಾಸ್ ಮಾಡಬೇಕೆಂದು ಸತತ ೫ ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ಹಿಂದೆ ಕೂಡ ಹೋರಾಟ ಮಾಡಿದ ವೇಳೆ ಜಿಲ್ಲಾಧಿಕಾರಿಯವರನ್ನು ಕರೆಯಿಸಿ ಮನವಿ ನೀಡಲಾಗಿತ್ತು. ಈ ಭಾಗದಲ್ಲಿ ೧೦ ಹಳ್ಳಿಯ ಜನರು ವಾಹನಗಳಲ್ಲಿ ಶಾಲಾ-ಕಾಲೇಜು ಹಾಗೂ ಕೆಲಸಗಳಿಗೆ ಸಂಚಾರ ಮಾಡುತ್ತಾರೆ. ಅದಕ್ಕಾಗಿ ನಮಗೆ ಅಂಡರ್ ಪಾಸ್ ಅವಶ್ಯಕತೆ ಇದೆ ಎಂದು ತಿಳಿಸಿದ್ದೇವು ಎಂದರು.

ಇದನ್ನೂ ಓದಿ : ಭಟ್ಕಳದ ವ್ಯಕ್ತಿ ನಾಪತ್ತೆ

ಐ. ಆರ್.ಬಿ ಕಂಪನಿಯವರು ನಮಗೆ ಗೋಡೆಯ ಮೇಲೆ ದೀಪ ಇಟ್ಟಂತೆ ಆಶ್ವಾಸನೆ ನೀಡುತ್ತಾರೆ. ಈ ಭಾಗದಲ್ಲಿ ಅಂಡರ್ ಪಾಸ್ ಮಾಡಲು ೭ ಕೋಟಿ ೩೧ ಲಕ್ಷಕ್ಕೆ ಟೆಂಡರ್ ಕರೆಯಲಾಗಿದೆ. ಆದರೆ ಐ. ಆರ್.ಬಿ ಕಂಪನಿಯವರು ಒಪ್ಪಿಗೆ ನೀಡುತ್ತಿಲ್ಲ. ಈ ಭಾಗದ ಗ್ರಾಮಸ್ಥರೆಲ್ಲ ಒಂದೇ ತೀರ್ಮಾನ ಮಾಡಿದ್ದೇವೆ. ಈ ಭಾಗದಲ್ಲಿ ಅಂಡರ್ ಪಾಸ್ ಮಾಡಿಯೇ ರಸ್ತೆ ಅಗಲೀಕರಣ ಮಾಡಬೇಕು. ಇಲ್ಲವಾದರೆ ನಾವು ರಸ್ತೆಗಿಳಿದು ಹೋರಾಟ ಮಾಡಲು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಬಳಿಕ ಈ ವಿಚಾರವಾಗಿ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮುಖಂಡರೊಂದಿಗೆ ಸಭೆ ಕೂಡ ನಡೆಯಿತು.

ಇದನ್ನೂ ಓದಿ : ಕೆಲಸ ಮಾಡುತ್ತಿದ್ದ ಲಾಡ್ಜ್ ನಲ್ಲೇ ಯುವಕ ನೇಣಿಗೆ ಶರಣು