ಭಟ್ಕಳ (Bhatkal) : ಹಿಂದೂ ಸಂಘಟನೆ ಕಾರ್ಯಕರ್ತನ ಮೇಲೆ ಎಸ್ಪಿ ಎಂ. ನಾರಾಯಣ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಭಟ್ಕಳದಲ್ಲಿ ರಾತೋರಾತ್ರಿ ಹೆದ್ದಾರಿ ಬಂದ್ ಮಾಡಿ ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ (overnight protest).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಮಂಗಳವಾರ ಶಿರಸಿಯಲ್ಲಿ (Sirsi) ರೌಡಿ ಶೀಟರುಗಳ ಪರೇಡ್ ನಡೆಸಿದ್ದ ಎಸ್ಪಿ ಎಂ.ನಾರಾಯಣ, ಭಟ್ಕಳದ ಹನುಮಾನ ನಗರದ ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಭಟ್ಕಳದಿಂದ ಕರೆಯಿಸಿ ಶಿರಸಿಯ ನಗರ ಠಾಣೆಯಲ್ಲಿ ಎಸ್ಪಿ ಎಂ. ನಾರಾಯಣ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಎಸ್ಪಿ ಹಲ್ಲೆ ಹಿನ್ನೆಲೆ ಶ್ರೀನಿವಾಸ ನಾಯ್ಕ ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇದನ್ನೂ ಓದಿ : Yasin Bhatkal/ ಯಾಸಿನ್ ಭಟ್ಕಳ ಸಹಿತ ಐವರಿಗೆ ಮರಣದಂಡನೆ
ಹಲ್ಲೆ ಮಾಡಿರುವ ಸುದ್ದಿ ಭಟ್ಕಳ ತಾಲೂಕಿನಾದ್ಯಂತ ಕಾಳ್ಗಿಚ್ಚಿನಂತೆ ಹರಡಿತು. ಬಿಜೆಪಿ (BJP), ವಿಶ್ವ ಹಿಂದೂ ಪರಿಷತ್ (VHP) ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಟ್ಕಳ ಶಹರ ಠಾಣೆಗೆ ಮುತ್ತಿಗೆ ಹಾಕಿದರು. ತಾಲೂಕು ಪಂಚಾಯತ್ ಕಚೇರಿ ಎದುರು ಹೆದ್ದಾರಿ ಬಂದ್ ಮಾಡಿದ ಪ್ರತಿಭಟನಾಕಾರರು, ಎಸ್ಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : vascular treatment/ ವ್ಯಾಸ್ಕ್ಯೂಲರ್ ಚಿಕಿತ್ಸೆಯಲ್ಲಿ ಎಸ್ ಡಿಎಂ ನಾರಾಯಣ ಹಾರ್ಟ್ ಸೆಂಟರ್ ನ ಸಾಧನೆ
ಮಾಜಿ ಶಾಸಕ ಸುನೀಲ ನಾಯ್ಕ (Ex MLA Sunil Naik) ಸೇರಿದಂತೆ ಬಿಜೆಪಿಯ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಪ್ರತಿಭಟನಾ ಸ್ಥಳಕ್ಕೆ ಎಸ್ಪಿ ಆಗಮಿಸಿ ಕ್ಷಮೆ ಕೋರುವಂತೆ ಪ್ರತಿಭಟನಾ ನಿರತರು ಒತ್ತಾಯಿಸಿದರು. ಭಟ್ಕಳದ ಡಿವೈಎಸ್ಪಿ ಮಹೇಶ್ ಸ್ಥಳದಲ್ಲಿ ಮೊಕ್ಕಾಂ ಇದ್ದು, ಪರಿಸ್ಥಿತಿ ಹತೋಟಿ ತರಲು ಹರಸಾಹಸ ಪಟ್ಟರು.
ಇದನ್ನೂ ಓದಿ : NSUI/ ಉತ್ತರ ಕನ್ನಡ ಜಿಲ್ಲೆಗೆ ವಿದ್ಯಾರ್ಥಿ ನ್ಯಾಯ ಯಾತ್ರೆ
ಎಸ್ಪಿಗೆ ಎಚ್ಚರಿಕೆ : ಬುಧವಾರ ಏ.೧೧ರ ಒಳಗಾಗಿ ಎಸ್ಪಿ ಎಂ. ನಾರಾಯಣ ಭಟ್ಕಳಕ್ಕೆ ಬರಬೇಕು. ೧೧ ಗಂಟೆ ಒಳಗಾಗಿ ಭಟ್ಕಳಕ್ಕೆ ಎಸ್ಪಿ ಬರದಿದ್ದರೆ ಬಂದ್‌ಗೆ ಕರೆ ಕೊಡುವುದಾಗಿ ಹಿಂದು ಸಂಘಟನೆಗಳ ಮುಖಂಡರು ಘೋಷಿಸಿದರು. ಮಾಜಿ ಶಾಸಕ ಸುನೀಲ ನಾಯ್ಕ, ಬಿಜೆಪಿ ಮುಖಂಡ ಗೋವಿಂದ ನಾಯ್ಕ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಲಕ್ಷ್ಮೀನಾರಾಯಣ ನಾಯ್ಕ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ವಿಡಿಯೋ ಸಹಿತ ಇದನ್ನೂ ಓದಿ : Chariot Festival/ಚನ್ನಪಟ್ಟಣ ಹನುಮಂತ ದೇವರ ರಥೋತ್ಸವ ಸಂಪನ್ನ
ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ೬ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾರೆ. ಕಳೆದ ಲೋಕಸಭಾ ಚುನಾವಣೆ ವೇಳೆ ಅವರನ್ನು ಗಡಿಪಾರು ಮಾಡಲಾಗಿತ್ತು. ಭಟ್ಕಳದಲ್ಲಿ ಆಟೋ ಚಾಲಕನಾಗಿರುವ ಶ್ರೀನಿವಾಸ ನಾಯ್ಕ, ಹಿಂದೂ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ : WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ