ಭಟ್ಕಳ (Bhatkal) : ತಮ್ಮ ವಾರ್ಡ್ ಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ (grant discrimination) ಮಾಡಿದ್ದಾರೆ ಎಂದು ಜಾಲಿ ಪಟ್ಟಣ ಪಂಚಾಯತನ ಮೂರು ವಾರ್ಡ್ ನ ಸದಸ್ಯರು ಶನಿವಾರದಂದು ಜಾಲಿ ಪಟ್ಟಣ ಪಂಚಾಯತ ಮುಂಭಾಗದಲ್ಲಿ ಧರಣಿ ಕುಳಿತುಕೊಂಡು (protest) ಬಳಿಕ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ದೇವಿನಗರ (ವಾರ್ಡ್ ೯), ಕಾರಗದ್ದೆ (ವಾರ್ಡ್ ೨) ಮತ್ತು ದೊಡ್ಮನೆ (ವಾರ್ಡ್ ೮) ಭಾಗದ ಸದಸ್ಯರು ಪ್ರತಿಭಟನೆ ನಡೆಸಿದರು. ನಮ್ಮ ವಾರ್ಡಿಗೆ ಅನುದಾನ ಒದಗಿಸಲು ತಾರತಮ್ಯ (grant discrimination) ಮಾಡಿದ್ದಾರೆ. ಮೂರೂ ವಾರ್ಡಿನಲ್ಲಿ ಕಡು ಬಡವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಜನರೇ ಅಧಿಕವಾಗಿದ್ದಾರೆ. ಮೂಲಭೂತ ಸೌಕರ್ಯಗಳು ಇಲ್ಲದೆ ತೀರ ಹಿಂದುಳಿದಿದೆ. ರಸ್ತೆ, ಚರಂಡಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ. ಕಡು ಬಡವರಿಗೆ ಮೂಲಭೂತ ಸೌಕರ್ಯಗಳು ಸಿಗುತ್ತಿಲ್ಲ. ಇತ್ತೀಚಿಗೆ ಬಿಡುಗಡೆಯಾದ ಅನುದಾನ ಹಂಚಿಕೆಯಲ್ಲಿ ಮುಂದುವರಿದ ವಾರ್ಡಿಗೆ ಹಣ ನೀಡಿದ್ದು ನಮ್ಮ ವಾರ್ಡಿಗೆ ತಾರತಮ್ಯ ಆಗಿದೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಇದನ್ನೂ ಓದಿ : ಭಟ್ಕಳ ವಕೀಲರ ಸಂಘಕ್ಕೆ ನೂತನ ಪದಾಧಿಕಾರಿಗಳು
ವಾರ್ಡಿನಲ್ಲಿ ಮುಖ್ಯವಾಗಿ ಅಭಿವೃದ್ಧಿ ಪ್ರಸ್ತಾಪಗಳು ಅಡಿಯಲ್ಲಿ ಹಲವಾರು ಯೋಜನೆಗಳನ್ನು ಆರಂಭಿಸಬೇಕಾಗಿವೆ. ಈ ಯೋಜನೆಗಳು ನಮ್ಮ ಗ್ರಾಮದ ಆರ್ಥಿಕ ಪರಿಸ್ಥಿತಿ ಹಾಗೂ ಜೀವನಮಟ್ಟವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ, ಈ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಅನುದಾನವನ್ನು ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : Kick boxing/ ಭಟ್ಕಳದ ಧನ್ವಿತಾ ವಾಸು ಮೊಗೇರ ವರ್ಲ್ಡ್ ಚಾಂಪಿಯನ್
ಈಗಾಗಲೇ ೨೦೨೩ ಹಾಗೂ ೨೦೨೪ರ ಸಾಲಿನಲ್ಲಿ ಸಾಲು ಸಾಲು ಅನುದಾನಗಳು ಬಿಡುಗಡೆಯಾಗಿವೆ. ಲಕ್ಷ ಲಕ್ಷ ವೆಚ್ಚದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಆದರೆ ನಮ್ಮ ಮೂರು ವಾರ್ಡನ್ನು ಬಿಟ್ಟು ಉಳಿದ ಎಲ್ಲಾ ವಾರ್ಡಿಗೂ ೨೦೨೩-೨೪ನೇ ಸಾಲಿನಲ್ಲಿ ಬಂದ ಪೂರ್ತಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಸೌಜನ್ಯಕ್ಕೂ ಚುನಾಯಿತ ಸದಸ್ಯರಾದ ನಮ್ಮನ್ನು ಕರೆದು ಈ ಅನುದಾನ ಹಂಚಿಕೆಯಲ್ಲಿ ಗಣನೆಗೆ ತೆಗೆದುಕೊಂಡಿಲ್ಲ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ವಿಶ್ವ ಹಿಂದೂ ಪರಿಷತ್ ನೂತನ ಪದಾಧಿಕಾರಿಗಳ ಆಯ್ಕೆ
ಜನರಿಂದ ಆಯ್ಕೆ ಆದ ನಾವು ಸರ್ಕಾರದಿಂದ ಬಂದ ಅನುದಾನಗಳನ್ನ ಜನರಿಗೆ ತಲುಪಿಸುವ ಕೆಲಸ ಮಾಡಬೇಕಾಗಿರುತ್ತದೆ. ಆದರೆ ಅಧಿಕಾರದಲ್ಲಿರುವ ಈ ವ್ಯವಸ್ಥೆಯಲ್ಲಿ ನಾವು ಬಿಜೆಪಿಯ ಬೆಂಬಲಿತ ಸದಸ್ಯರೆಂದು ನಮ್ಮ ವಾರ್ಡ್ ಗಳಿಗೆ ಈ ಅನುದಾನದಲ್ಲಿ ತಾರತಮ್ಯ ಮಾಡುತ್ತಿರುವುದು ಕಾನೂನಿಗೆ ವಿರುದ್ಧ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : Sunil Naik/ ನಾಮಧಾರಿಗಳಿಂದ ಮಾದರಿ ಕಾರ್ಯಕ್ರಮ
೨೦೨೩ ರಲ್ಲಿ ಎಸ್ ಎಫ್ ಸಿ ಅನುದಾನದಲ್ಲಿ ಕೋಟಿ ಹತ್ತಿರ ಅನುದಾನ ಬಂದಿದೆ. ೨೦೨೪ರಲ್ಲಿ ೧೫ನೇ ಹಣಕಾಸು ಅನುದಾನದಲ್ಲಿ ಕೋಟಿ ಹತ್ತಿರ ಅಭಿವೃದ್ಧಿ ಕಾಮಗಾರಿಗೆ ಹಣ ಬಂದಿದೆ. ಅಂದಾಜು ಮೊತ್ತ ಎರಡು ಕೋಟಿಗೂ ಹೆಚ್ಚು ಅಭಿವೃದ್ದಿ ಕಾಮಗಾರಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಯಾವುದೇ ಒಂದು ಕಾಮಗಾರಿ ನಮ್ಮ ವಾರ್ಡಿಗೆ ಹಾಕಿಲ್ಲ. ಇದು ದ್ವೇಷ ಪೂರಿತ ವ್ಯವಸ್ಥಿತ ಷಡ್ಯಂತರ ಎಂದು ಸದಸ್ಯರು ಆರೋಪಿಸಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : Brahmanand Shri/ ಚಾತುರ್ಮಾಸ್ಯ ನಡೆವ ಸ್ಥಳದಲ್ಲಿ ದೇವರು ಇರ್ತಾನೆ
ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ ನಾಗರಾಜ ನಾಯ್ಕಡ ಪ್ರತಿಭಟನಾ ನಿರತ ಸದಸ್ಯರ ಮನವಿ ಸ್ವೀಕರಿಸಿದರು. ಈ ಹಿಂದೆ ನೀಡಿದ ಅನುದಾನದಲ್ಲಿ ವ್ಯತ್ಯಾಸ ಇದ್ದಲ್ಲಿ ಅಥವಾ ತಾರತಮ್ಯವಾದಲ್ಲಿ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇನೆ. ಮುಂದಿನ ಕ್ರಿಯಾ ಯೋಜನೆಯಲ್ಲಿ ಬದಲಾವಣೆ ಮಾಡುವ ಅಧಿಕಾರ ಮೇಲಾಧಿಕಾರಿಗಳಿಗೆ ಇರುತ್ತದೆ ಎಂದು ತಹಶೀಲ್ದಾರ ಹೇಳಿದರು.
ಇದನ್ನೂ ಓದಿ : ನಾಲ್ವರು ಪತ್ರಕರ್ತರಿಗೆ ಟಾಗೋರ್ ಪ್ರಶಸ್ತಿ ಘೋಷಣೆ
ಕಳೆದ ಎರಡು ವರ್ಷಗಳಲ್ಲಿ ನಾಲ್ಕು ಬಾರಿ ಅನುದಾನ ಬಂದಿದೆ. ಈ ಅನುದಾನದಲ್ಲಿ ಬಿಜೆಪಿ ಬೆಂಬಲಿತ ಮೂವರು ಸದಸ್ಯರಿಗೆ ಯಾವುದೇ ಅನುದಾನ ನೀಡದೆ ತಾರತಮ್ಯ ಮಾಡಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಬಳಿ ಕೇಳಿಕೊಂಡಾಗ ಇದು ನಾವು ಮಾಡಿಲ್ಲ ಆಡಳಿತ ಅಧಿಕಾರಿಗಳಾದ ತಹಶೀಲ್ದಾರ್ ಮಾಡಿದ್ದಾರೆ ಎಂದು ಹೇಳಿ ನುಣುಚಿಕೊಳ್ಳುತ್ತಿದ್ದಾರೆ.
– ದಯಾನಂದ ನಾಯ್ಕ, ವಾರ್ಡ್ ನಂ೯ರ ಸದಸ್ಯ
ಈ ಸುದ್ದಿಯ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂ ಮತ್ತು ಫೇಸ್‌ಬುಕ್‌ನಲ್ಲಿ ವೀಕ್ಷಿಸಬಹುದು.