ಭಟ್ಕಳ: ನಗರದ ಹೃದಯ ಭಾಗವಾದ ಸಂಶುದ್ದೀನ್ ವೃತ್ತದ ಬಳಿ ಹೊಂಡಗುಂಡಿಯಾಗಿರುವ ರಾಷ್ಟ್ರೀಯ ಹೆದ್ದಾರಿಗೆ ತೇಪೆ ಹಚ್ಚಲು ಬಂದಿದ್ದ ಗುತ್ತಿಗೆದಾರನಿಗೆ ತಡೆದು ಸಾರ್ವಜನಿಕರು ಆಕ್ರೋಶ (Public outrage) ಹೊರಹಾಕಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.

ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರೀಯ ಹೆದ್ದಾರಿ ಹೊಂಡಮಯವಾಗಿದೆ. ಆಗಾಗ ತೇಪೆ ಹಚ್ಚುವ ಕಾರ್ಯ ನಡೆಯುತ್ತಲೇ ಇದ್ದು, ಮತ್ತೆ ಮತ್ತೆ ಹೊಂಡ ನಿರ್ಮಾಣ ಆಗುತ್ತಲೇ ಇದೆ.  ಸಂಚಾರಕ್ಕೆ ತೀವ್ರ ತೊಂದರೆಯಾಗಿದ್ದರಿಂದ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸುತ್ತಿರುವ ಐ.ಆರ್.ಬಿ. ಕಂಪನಿ ವಿರುದ್ಧ ಅಸಮಾಧಾನ‌ಹೊಂದಿದ್ದರು. ಈ ಬಗ್ಗೆ ಅನೇಕ ಬಾರಿ ಸಾರ್ವಜನಿಕರಿ ದೂರಿದ್ದರೂ ಸಂಬಂಧಪಟ್ಟ ಇಲಾಖೆ ನಿದ್ರಾವಸ್ಥೆಯಲ್ಲಿದೆ.

ಇದನ್ನೂ ಓದಿ :  ಬ್ರಹ್ಮಾನಂದ ಶ್ರೀಗಳ ಚಾತುರ್ಮಾಸ್ಯಕ್ಕೆ ಹೊರೆ ಕಾಣಿಕೆ ಸಮರ್ಪಣೆ

ಬುಧವಾರ ಹೊಂಡಗುಂಡಿಗಳಿಗೆ ತೇಪೆ ಹಚ್ಚು ಕಾಮಗಾರಿ ಆರಂಭಿಸಿದಾಗ ಸ್ಥಳೀಯ ಸಾರ್ವಜನಿಕರು ಕಾಮಗಾರಿಯನ್ನು ತಡೆದಿದ್ದಾರೆ. ಕಳಪೆ ಗುಣಮಟ್ಟದ ಡಾಂಬರು ಮತ್ತು ಜಲ್ಲಿ ಬಳಸಲಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಗುತ್ತಿಗೆದಾರ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು, ಇಂತಹ ಕಳಪೆ ಗುಣಮಟ್ಟದ ಕಾಮಗಾರಿ ಅವಕಾಶ ನೀಡುವುದಿಲ್ಲ ಎಂದು ಕಾಮಗಾರಿ ತಡೆದರು.
ಇತ್ತೀಚೆಗಷ್ಟೇ ಇದೇ ಹೆದ್ದಾರಿಯಲ್ಲಿ ತೇಪೆ ಕಾಮಗಾರಿ ನಡೆಸಲಾಗಿತ್ತು. ಆದರೆ ಸುರಿದ ಮಳೆಯಲ್ಲಿ ಹಾಕಿದ್ದ ಜಲ್ಲಿ, ಡಾಂಬರು ಎಲ್ಲವೂ ಕೊಚ್ಚಿಕೊಂಡು ಹೋಗಿದೆ. ಮತ್ತೆ ಹೊಂಡಗಳು ತೆರೆದುಕೊಂಡಿವೆ. ರಸ್ತೆ ಹೊಂಡಗಳಲ್ಲಿ ನೀರು ನಿಂತು ಅಪಾಯಕಾರಿಯಾಗಿ ಪರಿಣಮಿಸಿದೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ ಎಂದು ಸಾರ್ವಜನಿಕರು ಆಕ್ರೋಶ (public outrage) ವ್ಯಕ್ತಪಡಿಸಿದರು.

ಇದನ್ನೂ ಓದಿ : ಶಾಲೆ ಕುಸಿತ; ಮನೆಯ ಮಹಡಿಗೆ ಶಾಲೆ ಸ್ಥಳಾಂತರ

ಬುಧವಾರ ಏಕಾಏಕಿ ಜಲ್ಲಿ,ಹುಡಿ ಮಿಶ್ರಣದೊಂದಿಗೆ ರಸ್ತೆಗೆ ತೇಪೆ ಹಾಕಲು ಗುತ್ತಿಗೆದಾರರು ಬಂದಾಗ ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಮಳೆಗಾಲದಲ್ಲಿ ಕಳಪೆ ಮಟ್ಟದ ತೇಪೆ ಕಾಮಗಾರಿ ನೀರುಪಾಲಾಗುತ್ತದೆ ಎಂದ ಸ್ಥಳೀಯರು, ಉತ್ತಮ ಗುಣಮಟ್ಟದ ಡಾಂಬರು ಬಳಸಿ ಕಾಮಗಾರಿ ನಡೆಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಬಿದ್ದ ಹೊಂಡದ ದುರಸ್ತಿಗೆ ಯಾವುದೋ ರಸ್ತೆ ದುರಸ್ತಿ ಮಾಡಿದೆ. ಡಾಂಬರು ಜಲ್ಲಿಗಳನ್ನು ತಂದು ಕೆಲಸ ಮಾಡಲು ಮುಂದಾಗಿದ್ದಾರೆ. ಇದರಿಂದ ನಮ್ಮ ಆಟೋ ಚಾಲಕರು ಹಾಗೂ ಸಾರ್ವಜನಿಕರು ಇದನ್ನು ತಡೆದಿದ್ದಾರೆ. ಉತ್ತಮ ಗುಣಮಟ್ಟದ ಜಲ್ಲಿ ತಂದು ರಸ್ತೆ ದುರಸ್ತಿ ಮಾಡಿ. ಈ ರೀತಿ ಯೋಗ್ಯವಲ್ಲದ ಜಲ್ಲಿಗಳನ್ನು ಹಾಕಿದರೆ ಮತ್ತೆ ನಾಲ್ಕು ದಿನಗಳಲ್ಲಿ ರಸ್ತೆ ಹೊಂಡಮಯವಾಗುತ್ತೆ. ಇದು ಮಳೆಗಾಲವಾಗಿರುವುದರಿಂದ ಗುಣಮಟ್ಟದ ಕೆಲಸ ಮಾಡಿ ಇಲ್ಲವಾದರೆ ಸ್ಥಳಕ್ಕೆ ಐ.ಆರ್.ಬಿ. ಇಂಜಿನಿಯರ ಕರೆಸುವಂತೆ ಪಟ್ಟು ಹಿಡಿದಿದ್ದರಿಂದ ದುರಸ್ತಿ ಕಾರ್ಯ ಅಲ್ಲೇ ನಿಲ್ಲಿಸಿದ್ದಾರೆ.
ಶ್ರೀನಿವಾಸ ನಾಯ್ಕ, ಆಟೋ ಚಾಲಕ, ಹನುಮಾನ ನಗರ.