ಭಟ್ಕಳ (Bhatkal): ದಿವಂಗತ ಪುನೀತ್ ರಾಜ್‌ಕುಮಾರ್ (Punit Rajkumar) ಅವರ 50ನೇ ವರ್ಷದ ಹುಟ್ಟುಹಬ್ಬದ (Birthday) ಹಿನ್ನೆಲೆಯಲ್ಲಿ ಭಟ್ಕಳ ಟ್ಯಾಕ್ಸಿ ನಿಲ್ದಾಣದಲ್ಲಿ (Taxi Stand) ಕರ್ನಾಟಕ ರತ್ನ (Karnataka Ratna) ಅಪ್ಪು ಅಭಿಮಾನಿಗಳ ಸೇವಾದಳ ವತಿಯಿಂದ ಉಚಿತ ಅನ್ನದಾನ ಹಾಗೂ ರಕ್ತದಾನ ಶಿಬಿರವನ್ನು ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೆಳಿಗ್ಗೆಯಿಂದ ನಡೆದ ರಕ್ತದಾನ ಶಿಬಿರದಲ್ಲಿ ಸುಮಾರು ೮೦ಕ್ಕೂ ಹೆಚ್ಚು ಜನ ರಕ್ತದಾನ ಮಾಡಿದರು. ಬಳಿಕ ಮಧ್ಯಾಹ್ನ ವೇಳೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿ ದಿ. ಪುನೀತ್ ರಾಜಕುಮಾರ (Punit Rajkumar) ಫೋಟೋ ಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಭಟ್ಕಳದ ನೂರಾರು ಸಾರ್ವಜನಿಕರಿಗೆ ಅನ್ನದಾನ ನೆರವೇರಿಸಿದರು. ಈ ವೇಳೆ ಅಪ್ಪು ಅಭಿಮಾನಿಗಳು ಹಾಗೂ ಜೈ ಮಾರುತಿ ರಕ್ತದಾನ ಬಳಗದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್‌ಬುಕ್ ನಲ್ಲಿ ವೀಕ್ಷಿಸಬಹುದು.
ವಿಡಿಯೋ ಸಹಿತ ಇದನ್ನೂ ಓದಿ : Protest/ ಗೋ ಸಾಗಾಟ ಖಂಡಿಸಿ ಭಟ್ಕಳದಲ್ಲಿ ಪ್ರತಿಭಟನೆ