ಗೋಕರ್ಣ (Gokarna) : ತನ್ನ ಸ್ವಂತ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅಸ್ವಸ್ಥಗೊಂಡ ರೆಸಾರ್ಟ್ ಮಾಲೀಕ (Resort owner) ಮೃತಪಟ್ಟ ಘಟನೆ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಕುಮಟಾ (Kumta) ತಾಲೂಕಿನ ಭಾವಿಕೋಡ್ಲ ದುಬ್ಬನಸಶಿ ನಿವಾಸಿ ಗೌರೀಶ ಗೋಪಾಳ ನಾಯಕ (೬೧) ಮೃತ ದುರ್ದೈವಿ. ಇವರು ದುಬ್ಬನಸಶಿಯಲ್ಲಿ ತಮ್ಮ ಹೆಂಡತಿ ಬಾನು ಜೊತೆ ವಾಸವಾಗಿ, ರೆಸಾರ್ಟ್ ವ್ಯವಹಾರ (Resort owner) ನಡೆಸುತ್ತಿದ್ದರು. ಇವರು ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ನ.೧ರಂದು ಸಂಜೆ ೬ರಿಂದ ೭ರ ನಡುವಿನ ಅವಧಿಯಲ್ಲಿ ತಮ್ಮ ಕಾರಿನಲ್ಲಿ ಗೋಕರ್ಣದಿಂದ ದುಬ್ಬನಸಶಿಗೆ ಹೋಗುವಾಗ ಅಸ್ವಸ್ಥಗೊಂಡರು.
ಇದನ್ನೂ ಓದಿ : ನೇಣು ಬಿಗಿದು ಸಾವಿಗೆ ಶರಣಾದ ಯುವಕ
ದುಬ್ಬನಸಶಿ ಸಮೀಪದಲ್ಲಿ ಚಾಲಕನ ಸೀಟಿನಲ್ಲಿ ಕುಳಿತಲ್ಲೆ ಗೌರೀಶ ನಾಯಕ ಅಸ್ವಸ್ಥಗೊಂಡರು. ಉಪಚಾರಕ್ಕೆ ಗೋಕರ್ಣಕ್ಕೆ ಕರೆದುಕೊಂಡು ಬರುತ್ತಿರುವಾಗ ಮಾರ್ಗ ಮಧ್ಯದಲ್ಲಿ ಅವರು ಕೊನೆಯುಸಿರು ಎಳೆದಿದ್ದಾರೆ. ಈ ಕುರಿತು ಮೃತರ ತಂದೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ದೂರು (complaint) ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ (Case Registered) ಗೋಕರ್ಣ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಸಾವು ತಂದ ಬೈಕ್ ಟಯರ್ ಪಂಕ್ಚರ್ !