ಹೊನ್ನಾವರ (Honnavar) :  ಶೈಕ್ಷಣಿಕ ಪ್ರವಾಸಕ್ಕೆ ಬಂದ ಬಸ್ (School Bus) ಪಲ್ಟಿಯಾಗಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ  ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ತಾಲೂಕಿನ ಆರೋಳ್ಳಿ ಕ್ರಾಸ್ ಬಳಿ ನಿನ್ನೆ ಗುರುವಾರ ರಾತ್ರಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹೊನ್ನಾವರ ತಾಲೂಕಿನ ಮುಗ್ವಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆರೋಳ್ಳಿ ತಿರುವಿನಲ್ಲಿ ನಗರದಿಂದ ಸುಮಾರು ಮೂರುವರೆ ಕಿಲೋಮೀಟರ ಅಂತರದಲ್ಲಿ ಈ ದುರ್ಘಟನೆ ನಡೆದಿದೆ.  ಕೋಲಾರ (Kolar) ಜಿಲ್ಲೆಯ ಮಾಲೂರು (Malur) ತಾಲೂಕಿನ ಮಾಸ್ತಿಹಳ್ಳಿಯ ಕರ್ನಾಟಕ ಪ್ರೌಢಶಾಲೆಯ ಮಕ್ಕಳ ಖಾಸಗಿ ಪ್ರವಾಸ ವಾಹನ (School Bus) ಪಲ್ಟಿಯಾಗಿದೆ. ಉತ್ತರ ಕನ್ನಡ ಜಿಲ್ಲಾ ಪ್ರವಾಸ ಮುಗಿಸಿಕೊಂಡು ಗೋಕರ್ಣದಿಂದ (Gokarna) ಪುನಃ ಕೋಲಾರಕ್ಕೆ ಹೋಗುವಾಗ ಮಧ್ಯರಾತ್ರಿ ೧೨ ಗಂಟೆ ಸುಮಾರಿಗೆ ಎರಡು ವಾಹನಗಳ ಪೈಕಿ ಒಂದು ವಾಹನ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

ವಿಡಿಯೋ ಸಹಿತ ಇದನ್ನೂ ಓದಿ : ಹೀಗೊಂದು ಹಾಲು ಕರೆವ ಸ್ಪರ್ಧೆ

ವಾಹನದಲ್ಲಿ ಇದ್ದ ೪೦ ಶಾಲಾ ಮಕ್ಕಳ ಪೈಕಿ ೩೪ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಗೂ ಶಿಕ್ಷಕರಿಗೆ ಚಿಕ್ಕ ಪುಟ್ಟ ಗಾಯಗಳಾಗಿವೆ. ಅವರನ್ನು ತಕ್ಷಣ ಹೊನ್ನಾವರದ ಸರಕಾರಿ ಆಸ್ಪತ್ರೆಗೆ ಪೊಲೀಸ್ ಮತ್ತು ಸ್ಥಳೀಯರ ಸಹಕಾರದೊಂದಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.  ಆ ಪೈಕಿ ಇಬ್ಬರು ವಿದ್ಯಾರ್ಥಿ ಮತ್ತು ಇಬ್ಬರು ವಿದ್ಯಾರ್ಥಿನಿಯರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇರುವುದರಿಂದ ಅವರನ್ನು ಮಣಿಪಾಲ (Manipal) ಕೆಎಂಸಿ ಆಸ್ಪತ್ರೆಗೆ (KMC Hospital) ವೈದ್ಯಾಧಿಕಾರಿಗಳ ಸಲಹೆ ಮೇರೆಗೆ ರವಾನಿಸಲಾಗಿದೆ. ಅವರು ಈಗಾಗಲೇ ಆಸ್ಪತ್ರೆ ತಲುಪಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅದೃಷ್ಟವಶಾತ್‌ ಈ ಅನಾಹುತದಿಂದ ಯಾವುದೇ ಪ್ರಾಣಾಪಾಯವಾಗಿಲ್ಲ.

ವಿಡಿಯೋ ಸಹಿತ ಇದನ್ನೂ ಓದಿ : ಬಾವಿಗೆ ಬಾಲಕ ಬಿದ್ದ ಸ್ಥಳದಲ್ಲಿ ಪಾಲಕರಿಂದ ಪ್ರತಿಭಟನೆ