ಭಟ್ಕಳ (Bhatkal) : ಲಾರಿ ಡಿಕ್ಕಿಯಾಗಿ (lorry collision) ಸ್ಕೂಟರ್ ಸವಾರರಿಬ್ಬರು ಗಾಯಗೊಂಡ ಘಟನೆ ನಗರದ ತೆಂಗಿನಗುಂಡಿ ಕ್ರಾಸ್ ಹತ್ತಿರ ಹೆಬಳೆ ರಸ್ತೆಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸ್ಕೂಟರ್ ಸವಾರ ಮುಂಡಳ್ಳಿ ನೆಸ್ತಾರ ಮೂಲದ ಮೊಹಮ್ಮದ್ ಹನೀಫ್ ಮೊಹಮ್ಮದ್ ಫಾರೂಕ್ (೫೦) ಮತ್ತು ಹಿಂಬದಿ ಸವಾರ ಯಲ್ವಡಿಕವೂರ ಪುರವರ್ಗದ ಮಾಸ್ತಪ್ಪ ಈರಯ್ಯ ನಾಯ್ಕ (೬೪) ಗಾಯಗೊಂಡವರು. ಹೆಬಳೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ ಕಡೆಗೆ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದ ಲಾರಿ ಚಾಲಕ ಸ್ಕೂಟರ್‌ಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಲಾರಿ ಚಾಲಕ ಜಾರ್ಖಂಡ (Jarkhand) ಮೂಲದ ರಾಮಸ್ವರೂಪ ಸಿಂಗ್ (೫೪) ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ (case registered).
ಇದನ್ನೂ ಓದಿ : ಮರಳು ಅಭಾವ; ಕಾರ್ಮಿಕರ ಆತಂಕ