ಭಟ್ಕಳ (Bhatkal) : ಓಡಿಸ್ಸಾದ (Orissa) ಟೆಕಿ ಗೈಡ್ ಆಯೋಜಿಸಿದ್ದ ರೋಬೋಥ್ರೋನ್ ಎಂಬ ರಾಷ್ಟ್ರ ಮಟ್ಟದ ಕೃತಕ ಬುದ್ದಿಮತ್ತೆ (AI) ಮತ್ತು ರೋಬೋಟಿಕ್ಸ (Robotics) ಸ್ಪರ್ಧೆಯಲ್ಲಿ ಭಟ್ಕಳದ ಶ್ರೀ ಗುರು ವಿದ್ಯಾಧಿರಾಜ (Guru Vidyadhiraja) ದಿ ನ್ಯೂ ಇಂಗ್ಲೀಷ ಪಿ.ಯು. ಕಾಲೇಜು ದ್ವಿತೀಯ ಬಹುಮಾನ ಪಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಕಾಲೇಜಿನ ವಿಜ್ಞಾನ (Science) ವಿಭಾಗದ ವಿದ್ಯಾರ್ಥಿಗಳಾದ ಯುವರಾಜ ನಾಯ್ಕ ಮತ್ತು ಸಂದೀಪ ನಾಯ್ಕ ದ್ವಿತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ. ಈ ವಿದ್ಯಾರ್ಥಿಗಳು ಐ ಬ್ಲಿಂಕ್ ಸೆನ್ಸರ್ (Eye blink sensor) ಅನ್ನು ಕನ್ನಡಕದಲ್ಲಿ ಅಳವಡಿಸಿ ಅದನ್ನು ವಾಹನ ಚಾಲಕರು ಧರಿಸಿಕೊಂಡು ರಾತ್ರಿಯ ಸಮಯದಲ್ಲಿ ವಾಹನ ಚಲಾಯಿಸುವಾಗ ನಿದ್ದೆಗೆ ಜಾರಿದರೆ ಎಚ್ಚರಿಕೆ ಘಂಟೆ ಬಾರಿಸುವ ಮತ್ತು ಒಂದು ವೇಳೆ ಎಚ್ಚರಿಕೆ ಘಂಟೆಗೂ ಕಣ್ಣು ತೆರೆಯದೇ ಹೋದರೆ ವಾಹನದ ಎಂಜಿನ್ ತನ್ನಷ್ಟಕ್ಕೆ ಬಂದ್ ಆಗುವ ತಂತ್ರಜ್ಞಾನವನ್ನು ಆವಿಷ್ಕರಿಸಿ ರೋಬೋಟಿಕ್ (Robotics) ಮಾದರಿಯನ್ನು ಪ್ರದರ್ಶಿಸಿದ್ದರು.
ಇದನ್ನೂ ಓದಿ : Complaint/ ಶಾಲಾ ವಾಹನ ಚಾಲಕನ ವಿರುದ್ಧ ದೂರು ದಾಖಲು
ಮಹಾವಿದ್ಯಾಲಯದ ಕೃತಕ ಬುದ್ದಿಮತ್ತೆ (Artificial Intelligence) ಮತ್ತು ರೋಬೋಟಿಕ್ಸ ತರಬೇತುದಾರ ಸಂಕೇತ ನಾಯ್ಕ ಇವರಿಗೆ ಮಾರ್ಗದರ್ಶನ ನೀಡಿದ್ದರು. ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷ ಡಾ. ಸುರೇಶ ವಿ. ನಾಯಕ, ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಸವಿ ಫೌಂಡೇಶನ್ ಅಧ್ಯಕ್ಷ ಡಾ. ಸಂದೀಪ ನಾಯಕ, ಪ್ರಾಂಶುಪಾಲ ಡಾ. ವಿರೇಂದ್ರ ವಿ. ಶಾನಬಾಗ ಮತ್ತು ತರಬೇತುದಾರ ಸಂಕೇತ ನಾಯ್ಕ ಸಾಧಕ ವಿದ್ಯಾರ್ಥಿಗಳಿಗೆ ಗೌರವಿಸಿ ಸನ್ಮಾನಿಸಿದರು.
ಇದನ್ನೂ ಓದಿ : Childrens Market/ ಗಮನಸೆಳೆದ ಮಕ್ಕಳ ಸಂತೆ