ಭಟ್ಕಳ : ಆ.೨೩ರಿಂದ ಸೆ.೧ರ ತನಕ ಹಂಗೇರಿ (Hangeri) ದೇಶದ ಬುಡಾಪೆಸ್ಟ್ ನಲ್ಲಿ ನಡೆಯುವ ವಾಕೊ ಯೂಥ್ ವರ್ಲ್ಡ್ ಕಿಕ್ ಬಾಕ್ಸಿಂಗ್ (Kickboxing) ಚಾಂಪಿಯನ್ ಶಿಪ್ ನಲ್ಲಿ ಉತ್ತರ ಕನ್ನಡ (uttarakannada) ಜಿಲ್ಲೆಯ ಇಬ್ಬರು ಭಾರತ ದೇಶವನ್ನು ಪ್ರತಿನಿಧಿಸಲಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಭಟ್ಕಳದ (Bhatkal) ಧನ್ವಿತಾ ವಾಸು ಮೊಗೇರ ಮತ್ತು ಕಾರವಾರದ(Karwar) ಅವನಿ ಸೂರಜ್ ರಾವ್ ಕಿಕ್ ಬಾಕ್ಸಿಂಗ್ (Kickboxing) ಯುವ ವಿಶ್ವ ಚಾಂಪಿಯನ್ ಶಿಪ್ ಗೆ ಆಯ್ಕೆಯಾದವರು. ಇವರಿಬ್ಬರ ಜೊತೆಗೆ ನಾಗಶ್ರೀ ಭಾರತ ತಂಡದ ಕೋಚ್ ಆಗಿ ಭಾಗವಹಿಸುತ್ತಿದ್ದಾರೆ.
ಇದನ್ನೂ ಓದಿ : ನಾಳೆ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ
ಕಳೆದ ಮೇ ೨೧ರಿಂದ ೨೬ರ ತನಕ ಪುಣೆಯ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಧನ್ವಿತಾ ಮತ್ತು ಅವನಿ ಕರ್ನಾಟಕ (Karnataka) ರಾಜ್ಯದಿಂದ ಪ್ರತಿನಿಧಿಸಿದ್ದರು. ೭ ರಿಂದ ೯ ವರ್ಷ ವಯೋಮಿತಿಯ ಬಾಲಕಿಯರ -18kg ಪಾಯಿಂಟ್ ಫೈಟ್ ವಿಭಾಗದಲ್ಲಿ ಧನ್ವಿತಾ ವಾಸು ಮೊಗೇರ ಚಿನ್ನದ ಪದಕ ಪಡೆದಿದ್ದರು. ಅವನಿ ಸೂರಜ್ ರಾವ್ ಮ್ಯೂಸಿಕಲ್ ಫಾರ್ಮ್ ಹಾರ್ಡ್ ಸ್ಟೈಲ್ ನಲ್ಲಿ ಚಿನ್ನದ ಪದಕ ಗಳಿಸಿದ್ದರು.
ಇದನ್ನೂ ಓದಿ : ಭಟ್ಕಳದಲ್ಲಿ ಬೈಕ್ ರ್ಯಾಲಿ ಯಶಸ್ವಿ
ಈ ಕಿಕ್ ಬಾಕ್ಸಿಂಗ್ ಪಟುಗಳಿಗೆ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ (mankal Vaidya), ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಶಾಸಕ ಸುನೀಲ ನಾಯ್ಕ, ಉತ್ತರ ಕನ್ನಡ ಜಿಲ್ಲಾ ಬಿಜೆಪಿಯ ಮಹಿಳಾ ಮೋರ್ಚಾ ಅಧ್ಯಕ್ಷೆ ಶಿವಾನಿ ಶಾಂತರಾಮ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ವಾಕೊ ಕರ್ನಾಟಕ ರಾಜ್ಯ ಕಿಕ್ ಬಾಕ್ಸಿಂಗ್ ಅಧ್ಯಕ್ಷ ಸಂತೋಷ ಕೆ., ಪ್ರಧಾನ ಕಾರ್ಯದರ್ಶಿ ಪೂಜಾ ಹರ್ಷ ಹಾಗೂ ರಾಷ್ಟ್ರ ಮಟ್ಟದ ಕಿಕ್ ಬಾಕ್ಸಿಂಗ್ ಕೋಚ್ ಹರ್ಷ ಶಂಕರ್, ಉತ್ತರ ಕನ್ನಡ ಜಿಲ್ಲೆಯ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ ಈಶ್ವರ ನಾಯ್ಕ, ನಾಗಶ್ರೀ ಮಾರ್ಷಲ್ ಆರ್ಟ್ಸ್ ನ ಕಿಕ್ ಬಾಕ್ಸಿಂಗ್ ಕೋಚ್ ನಾಗಶ್ರೀ ನಾಯ್ಕ, ಕಾನೂನು ಸಲಹೆಗಾರ ಮನೋಜ್ ನಾಯ್ಕ, ಅಲೆಯನ್ಸ್ ಮಾರ್ಷಲ್ ಆರ್ಟ್ಸ್ ಕೋಚ್ ಇಸ್ಮಾಯಿಲ್, ರೇವೊಲ್ಯೂಷನ್ ಮಾರ್ಷಲ್ ಆರ್ಟ್ಸ್ ಅಕಾಡೆಮಿ ಕೋಚ್ ಜುಹೆಬ್, ಅಕ್ಫಾ ಅಕಾಡೆಮಿಯ ಕೋಚ್ ಅಮರ್ ಶಾಬಂದ್ರಿ ಅಭಿನಂದಿಸಿದ್ದಾರೆ.