ಭಟ್ಕಳ (Bhatkal): ಇಲ್ಲಿನ ರಥಬೀದಿಯ ಸಾರ್ವಜನಿಕ ಶ್ರೀ ಶಾರದೋತ್ಸವ (Sharadotsav) ಸಮಿತಿ ಆಶ್ರಯದಲ್ಲಿ ವರ್ಷಂಪ್ರತಿಯಂತೆ ಈ ವರ್ಷವೂ ಸಾರ್ವಜನಿಕ ಶ್ರೀ ಶಾರದೋತ್ಸವವನ್ನು ಶ್ರೀ ವೀರಾಂಜನೇಯ ಧರ್ಮಛತ್ರದಲ್ಲಿ ಆಚರಿಸಲಾಗುತ್ತಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅ. ೧೦ರಿಂದ ಆರಂಭಗೊಂಡು ೧೨ರವರೆಗೆ ನಡೆಯಲಿರುವ ಶ್ರೀ ಶಾರದೋತ್ಸವಕ್ಕೆ (Sharadotsav) ಭಕ್ತರು ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿ ವಿನಂತಿಸಿಕೊಂಡಿದೆ. ಅ.೧೦ರಂದು ಬೆಳಿಗ್ಗೆ ೯.೩೦ಕ್ಕೆ ಶ್ರೀ ದೇವಿಯ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ. ಮೂರೂ ದಿನ ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ, ಮಂಗಳಾರತಿ ನೆರವೇರಲಿದೆ. ಮೊದಲ ದಿನ ಸಂಜೆ ೭.೩೦ಕ್ಕೆ ಮತ್ತು ಎರಡನೇ ದಿನ ರಾತ್ರಿ ೭.೩೦ಕ್ಕೆ ಮಹಾಪೂಜೆ, ಮಂಗಳಾರತಿ ನಡೆಯಲಿದೆ. ಮೂರನೇ ದಿನ ೧.೧೨ರಂದು ಸಂಜೆ ೪.೩೦ಕ್ಕೆ ವಿಸರ್ಜನೆ ಪೂಜೆ ನಡೆಯಲಿದೆ. ಸಂಜೆ ೫ಕ್ಕೆ ಶ್ರೀ ದೇವರ ವಿಗ್ರಹವನ್ನು ಜಲಸ್ಥಂಭನಕ್ಕೆ ಒಯ್ಯುಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ : ಗಮನಸೆಳೆದ ದಸರಾ ಕಾವ್ಯೋತ್ಸವ