ಸಿದ್ದಾಪುರ (Siddapura): ನಾವು ಕಂಡ ಕನಸು ನನಸಾಗುವ ಜೊತೆಗೆ ಗುರಿ ಮುಟ್ಟಬೇಕಾದರೆ ಎಲ್ಲರೂ ಆರೋಗ್ಯವಂತರಾಗಿರಬೇಕು. ಈ ಕಾರಣಕ್ಕಾಗಿ ಇಂತಹ ಆರೋಗ್ಯ ತಪಾಸಣಾ ಶಿಬಿರಗಳು ಸಹಕಾರಿಯಾಗಬಲ್ಲವು ಎಂದು ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಣ್ಣ ಟಿ. ನಾಯ್ಕ ಹೇಳಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು ಸಿದ್ದಾಪುರ (siddapura) ಪಟ್ಟಣದ ಎಂ ಹೆಚ್ ಪಿ ಎಸ್ ಬಾಲಿಕೊಪ್ಪದಲ್ಲಿ ಭಾನುವಾರ ನಡೆದ ಬೃಹತ್ ಉಚಿತ ಹೃದಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಲ್ಲಿನ ಆಧಾರ್ ಸಂಸ್ಥೆಯಿಂದ ಮಂಗಳೂರಿನ (Mangaluru) ಒಮೇಗಾ ಆಸ್ಪತ್ರೆ ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ದಿ. ಡಿ.ಎನ್. ಶೇಟ ಸ್ಮರಣಾರ್ಥ ಶಿಬಿರ ಆಯೋಜಿಸಲಾಗಿತ್ತು.
ವಿಡಿಯೋ ಸಹಿತ ಇದನ್ನು ಓದಿ : Farewell/ ಪಿ.ಐ.ಗೆ ಹೃದಯಸ್ಪರ್ಶಿ ಬೀಳ್ಕೊಡುಗೆ
ಹಿಂದಿನ ದಿನಗಳಲ್ಲಿ ನಮ್ಮ ಹಿರಿಯರು ಯಾವುದೇ ಆರೋಗ್ಯ ಸಮಸ್ಯೆ ಇಲ್ಲದೆ ನೂರಾರು ವರ್ಷಗಳ ಕಾಲ ಜೀವನ ನಡೆಸುತ್ತಿದ್ದರು. ಆದರೆ ಇಂದಿನ ಆಹಾರ ಪದ್ಧತಿ ಜೀವನಶೈಲಿಯಿಂದ ಕಡಿಮೆ ವಯಸ್ಸಿನಲ್ಲಿಯೇ ಹೃದಯ ಸಂಬಂಧಿತ ಕಾಯಿಲೆ (heart disease) ಸೇರಿದಂತೆ ಅನೇಕ ಕಾಯಿಲೆಗಳಿಗೆ ಯುವಕರು ಬಲಿಯಾಗುತ್ತಿದ್ದಾರೆ. ಇದು ನಿಜಕ್ಕೂ ಬೇಸರದ ಸಂಗತಿ. ನಾವು ಆರೋಗ್ಯವಂತರಾಗಿದ್ದರೂ ಸಹ ಇಂದಿನ ದಿನಗಳಲ್ಲಿ ಆರೋಗ್ಯ ತಪಾಸಣೆ ಮಾಡಬೇಕಾದ ಪರಿಸ್ಥಿತಿ ಇದೆ. ಎಲ್ಲರೂ ಈ ಆರೋಗ್ಯ (health) ತಪಾಸಣಾ ಶಿಬಿರದ ಉಪಯೋಗ ಪಡೆದುಕೊಳ್ಳುವಂತೆ ಅವರು ತಿಳಿಸಿದರು.
ವಿಡಿಯೋ ಸಹಿತ ಇದನ್ನು ಓದಿ : Chemical Lorry / ಭಟ್ಕಳದಲ್ಲಿ ರಾಸಾಯನಿಕ ತುಂಬಿದ ಲಾರಿ ಪಲ್ಟಿ
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಆಧಾರ್ ಸಂಸ್ಥೆ ಅಧ್ಯಕ್ಷ ನಾಗರಾಜ ನಾಯ್ಕ ಮಾಳ್ಕೋಡ ಮಾತನಾಡಿ, ಆಧಾರ್ ಸಂಸ್ಥೆ ಕಳೆದ ೧೫ ವರ್ಷಗಳಿಂದ ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಶಿಕ್ಷಣ, ಆರೋಗ್ಯ ಹಾಗೂ ಸ್ವಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲಸವನ್ನು ಮಾಡುತ್ತಿದ್ದು, ಕಳೆದ ೧೨ ವರ್ಷಗಳ ಹಿಂದೆ ಒಮೇಗಾ ಆಸ್ಪತ್ರೆ ಸಹಯೋಗದಲ್ಲಿ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಆಶ್ರಯದಲ್ಲಿ ಹೃದಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿತ್ತು. ಮತ್ತೊಮ್ಮೆ ನಮಗೆ ಈ ಅವಕಾಶ ಒದಗಿಬಂದಿದೆ. ಮುಂದಿನ ದಿನಗಳಲ್ಲಿ ಶಿರಸಿಯಲ್ಲಿಯೂ (Sirsi) ಸಹ ಬೃಹತ್ ಆರೋಗ್ಯ ಶಿಬಿರವನ್ನು ಕ್ಷೇತ್ರದ ಶಾಸಕರ ನೇತೃತ್ವದಲ್ಲಿ ಹಮ್ಮಿಕೊಳ್ಳುವ ಆಲೋಚನೆಯಿದೆ ಎಂದು ಅವರು ಹೇಳಿದರು.
ವಿಡಿಯೋ ಸಹಿತ ಇದನ್ನು ಓದಿ : Fashion show/ ಭಟ್ಕಳದ ಕುವರಿ ಮಿಸ್ ಗ್ರ್ಯಾಂಡ್ ಸೌತ್ ಇಂಡಿಯಾ
ಗೌರವ ಉಪಸ್ಥಿತರಿದ್ದ ಹಿರಿಯ ಹೃದ್ರೋಗ ತಜ್ಞ ಕೆ. ಮುಕುಂದ ಮಾತನಾಡಿ, ಪ್ರಸ್ತುತ ದೇಶದಲ್ಲಿ ಹೃದಯಘಾತ (heart attack) ಪ್ರಕರಣಗಳು ಸಾಕಷ್ಟು ಹೆಚ್ಚಾಗುತ್ತಿದೆ. ಹೃದಯಾಘಾತ ಸಂಭವಿಸಿದರೆ ಪ್ರಾಥಮಿಕವಾಗಿ ನೀಡುವ ಔಷಧಿಗಳ ಲಭ್ಯತೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿಯ ಕೊರತೆ ಇದೆ ಎಂದರು. ಈ ವೇಳೆ ಹೃದಯಾಘಾತ ಸಂಭವಿಸಲು ಕಾರಣಗಳು ಅದಕ್ಕಿರುವ ಮುಂಜಾಗ್ರತಾ ಪರೀಕ್ಷೆಗಳು ಹಾಗೂ ಮಂಗಳೂರು ಒಮೇಗಾ ಆಸ್ಪತ್ರೆಯಲ್ಲಿ ಇದಕ್ಕಿರುವ ಅತ್ಯಾಧುನಿಕ ಸೌಲಭ್ಯಗಳ ಬಗ್ಗೆ ಮಾಹಿತಿಯನ್ನು ಅವರು ನೀಡಿದರು.
ಇದನ್ನು ಓದಿ : lorry collision/ ಲಾರಿಗೆ ಡಿಕ್ಕಿಯಾಗಿ ಬೈಕ್ ಸವಾರರಿಗೆ ಗಾಯ
ಈ ಸಂದರ್ಭದಲ್ಲಿ ತಹಸೀಲ್ದಾರ ಎಮ್. ಆರ್. ಕುಲಕರ್ಣಿ, ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಅಮಿತ್ ಕಿರಣ್, ಡಾ. ಅಭಿಜಿತ ಪಾಟೀಲ, ಪ. ಪಂ. ಸದಸ್ಯ ನಂದನ ಬೋರಕರ, ಆಧಾರ್ ಸಂಸ್ಥೆ ಉಪಾಧ್ಯಕ್ಷ ಬೈಜು ಜೋಸೆಫ್, ಶಿಬಿರದ ಸಂಯೋಜಕ ಧರ್ಮ ಅಂಬಿಗ, ರಜತ ಶಿಲ್ಪಿ ವಿಠ್ಠಲ ಎನ್ ಶೇಟ, ಬಾಲಿಕೊಪ್ಪ ಹಿ. ಪ್ರಾ. ಶಾಲೆಯ ಮುಖ್ಯೋಪಾಧ್ಯಾಯ ಅರ್ಜುನ್ ಚೌವಾಣ, ಮಂಗಳೂರು ಒಮೇಗಾ ಆಸ್ಪತ್ರೆ ಎಚ್ ಆರ್ ನಾಗರಾಜ ಟಿ., ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಪಿ ಆರ್ ಓ ಬಾಲಕೃಷ್ಣ ಮುಟ್ಟಂ ಹಾಗೂ ಒಮೇಗಾ ಆಸ್ಪತ್ರೆಯ ಇಬ್ರಾಹಿಂ ಹಾಜರಿದ್ದರು.
ಇದನ್ನು ಓದಿ : Childrens festival/ ಅದ್ದೂರಿಯಾಗಿ ಜರುಗಿದ ಮಕ್ಕಳ ಹಬ್ಬ
ಕಾರ್ಯಕ್ರಮವನ್ನು ಆಧಾರ್ ಸಂಸ್ಥೆ ಸಂಯೋಜಕ ಸುರೇಶ್ ಮಡಿವಾಳ ಕಡಕೇರಿ ನಿರೂಪಿಸಿದರು. ಸಂಸ್ಥೆಯ ನಿರ್ದೇಶಕಿ ಪುಷ್ಪಲತಾ ನಾಯ್ಕ ಸ್ವಾಗತಿಸಿದರು. ದಿ. ಡಿ ಎನ್ ಶೇಟ ಕುಟುಂಬಸ್ಥ ಪ್ರಶಾಂತ್ ಶೇಟ್ ವಂದಿಸಿದರು. ಸಾಯಿ ಸ್ಫೂರ್ತಿ ಹಾಗೂ ಪ್ರಾಚಿ ಶೇಟ ಪ್ರಾರ್ಥಿಸಿದರು.
ಇದನ್ನು ಓದಿ : Vardhanthi/ ನಾಗಬನ ದೇವರ ದ್ವಿತೀಯ ವರ್ಧಂತಿ