ಕುಮಟಾ (Kumta) : ಬೆಂಗಳೂರಿನಲ್ಲಿರುವ (Bengaluru) ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿ ಆವರಣದಲ್ಲಿರುವ ಶ್ರೀ ಕೃಷ್ಣರಾಜ ಪರಿಷತ್ತಿನ ಸಭಾಂಗಣದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಹೊಳೆಗದ್ದೆಯ ಶಿಕ್ಷಕ ಪಿ.ಆರ್.ನಾಯ್ಕರವರ “ಪಾಟಿಚೀಲ”ಮಕ್ಕಳ ಕವನ ಸಂಕಲನಕ್ಕೆ ಸಿಸು ಸಂಗಮೇಶ ದತ್ತಿ ಪ್ರಶಸ್ತಿ (Endowment Award) ಪ್ರದಾನ ಮಾಡಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಈ ದತ್ತಿ ಪ್ರಶಸ್ತಿ (Endowment Award) ಪ್ರದಾನ ಕಾರ್ಯಕ್ರಮದಲ್ಲಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಮುಕುಂದರಾಜು, ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸಾ, ಕಸಾಪ ರಾಜ್ಯಾಧ್ಯಕ್ಷ ಡಾ. ಮಹೇಶ ಜೋಶಿ, ಹಿರಿಯ ಪತ್ರಕರ್ತ ರವೀಂದ್ರ ಭಟ್ಟ, ಕೇಂದ್ರ ಸಾಹಿತ್ಯ ಪರಿಷತ್ತಿನ ಡಾ. ಪದ್ಮಿನಿ ನಾಗರಾಜು, ರಾಮಲಿಂಗ ಶೆಟ್ಟಿ, ಬಿ. ಎಂ. ಪಟೇಲ ಪಾಂಡು, ಆರ್. ಶಿವಣ್ಣ, ರಾಮೆಗೌಡ, ಉತ್ತರ ಕನ್ನಡ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎನ್. ವಾಸರೆ ಮುಂತಾದವರು ಉಪಸಿದ್ಧರಿದ್ದರು.

ಇದನ್ನೂ ಓದಿ : foundation stone/ ಶಂಕುಸ್ಥಾಪನೆಯಾಗಿ ೨ ವರ್ಷ ಕಳೆದರೂ ಆರಂಭವಾಗದ ಕಾಮಗಾರಿ

ಯಾರಿವರು ಸಿಸು ಸಂಗಮೇಶ?: “ಸಿಸು” ಸಂಗಮೇಶ ಶಿಶು ಸಾಹಿತ್ಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿದ ಮಕ್ಕಳ ಸಾಹಿತಿಯೆಂದೇ ನಾಡಿನುದ್ದಕ್ಕೂ ಪರಿಚಿತ ಹೆಸರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಮುಖ್ಯಾಧ್ಯಾಪಕರಾಗಿ ಸುಮಾರು ೩೬ ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಮಹಾನುಭಾವರು. ಸಂಗಮೇಶರು ವೃತ್ತಿಯಲ್ಲಿ ಅಧ್ಯಾಪಕರಾದರೂ ಪ್ರವೃತ್ತಿಯಲ್ಲಿ ಸಾಹಿತ್ಯಾಶಕ್ತರು. ಕವಿತೆ, ಅನುವಾದ,ಪ್ರೌಢ ಸಾಹಿತ್ಯ, ಸಂಪಾದನೆ, ಮಕ್ಕಳ ಸಾಹಿತ್ಯ ಹೀಗೆ ಹಲವಾರು ಪ್ರಕಾರಗಳಲ್ಲಿ ಮಹತ್ತರವಾದ ಸಾಹಿತ್ಯ ಕೃಷಿ ಮಾಡಿದವರು.

ಇದನ್ನೂ ಓದಿ : Annual Sports/ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ

ಶಿಕ್ಷಕರಲ್ಲಿ ಹುದುಗಿರುವ ಸಾಹಿತ್ಯವನ್ನು ಪ್ರಕಾಶಿಸಲು ಅವರು ಪ್ರಾರಂಭಿಸಿದ್ದು “ಭಾರತೀಯ ಸಾಹಿತ್ಯ ಭಂಡಾರ ಪ್ರಕಾಶನ” ಎಂಬ ಸಂಸ್ಥೆ. ೧೯೬೪ ರಲ್ಲಿ ಶಕ್ತಿ ಮುದ್ರಣಾಲಯ ಪ್ರಾರಂಭಿಸಿ ಹಲವು ಕೃತಿಗಳನ್ನು ಪ್ರಕಟಿಸಿ, ಸಾಹಿತಿಗಳಿಗೆ ಮಕ್ಕಳ ಸಾಹಿತ್ಯ ರಚಿಸಲು ಪ್ರೇರೇಪಿಸಿದವರು ಸಂಗಮೇಶರವರು. ಸಾಹಿತಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಸುಮಾರು ೮೦ಕ್ಕೂ ಹೆಚ್ಚು ಕೃತಿ ಪ್ರಕಟಿಸಿದ ಹಿರಿಮೆ ಸಂಗಮೇಶ್ವರದ್ದು. ಇವುಗಳಲ್ಲಿ ೧೮ ಕೃತಿಗೆ ರಾಷ್ಟ್ರ ಪ್ರಶಸ್ತಿ, ೧೬ ಕೃತಿಗೆ ರಾಜ್ಯ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದಿದೆ. ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ನೀಡಲು ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಅಕಾಡೆಮಿಯನ್ನು ೧೯೮೩ ರಲ್ಲಿ ಸ್ಥಾಪಿಸಿದರು.

ಇದನ್ನೂ ಓದಿ : bike collide/ ಎಕ್ಟಿವಾಗೆ ಬೈಕ್‌ ಡಿಕ್ಕಿಯಾಗಿ ಇಬ್ಬರಿಗೆ ಗಾಯ

ಮೂಲತಃ ವಿಜಯಪುರ (Vijayapura) ಜಿಲ್ಲೆಯ ಬಾಗೇವಾಡಿ ಸಮೀಪದ ಯರನಾಳವೆಂಬ ಗ್ರಾಮದಲ್ಲಿ ೧೯೨೯ ರಂದು ಸಂಗಮೇಶ ಜನಿಸಿದರು. ಇವರ ಮೊದಲ ಹೆಸರು ಸಂಗಮೇಶ ಸಿದ್ದರಾಮಪ್ಪ ಮನಗೊಂಡ. ಸಂಗಮೇಶರ ಸಾಹಿತ್ಯ ಕೃಷಿಯಲ್ಲಿ ಮಕ್ಕಳಿಗಾಗಿ ರಚಿಸಿದ ನಾಯಿ ಪಜೀತಿ, ಯಾರು ಜಾಣರು? ಮಂಕು ಮರಿ, ಆಸೆ ಬರುಕಿ ಆಶಾ, ಹೇಗಿದ್ದರು ಹೇಗಾದರು, ದಾರಿಯ ಬುತ್ತಿ ಮುಂತಾದ ಕೃತಿಗಳಿವೆ. ರಾಜ್ಯ, ರಾಷ್ಟ್ರ ಪ್ರಶಸ್ತಿ ಗಳಿಸಿದ ಮಹಾನುಭಾವರ ಹೆಸರಿನಲ್ಲಿ ನೀಡುವ ದತ್ತಿ ಪ್ರಶಸ್ತಿಗೆ ನನ್ನ “ಪಾಟಿಚೀಲ” ಕವನ ಸಂಕಲನ ಆಯ್ಕೆಯಾಗಿರುವುದು ನನ್ನ ಸಾಹಿತ್ಯ ಬದುಕಿನ ಪಯಣದಲ್ಲಿ ಅತ್ಯಂತ ಸಂತಸದ ಕ್ಷಣ ಎಂದು ಶಿಕ್ಷಕ ಪಿ.ಆರ್‌.ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Save life / “ನೀರು ನೀಡಿ-ಜೀವ ಉಳಿಸಿ” ಅಭಿಯಾನ