ಭಟ್ಕಳ: ಪ್ರೋ ಕಬಡ್ಡಿ (Pro-Kabaddi) ಮಾದರಿಯಲ್ಲಿ ಭಟ್ಕಳ ತಾಲೂಕಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಉತ್ತರ ಕನ್ನಡ (Uttara Kannada) ಜಿಲ್ಲಾ ಮಟ್ಟದ ಕಬಡ್ಡಿ ಫೆಡರೇಶನ್ ಕಪ್ ಪಂದ್ಯಾವಳಿಯನ್ನು ಮೇ ೯ ಮತ್ತು ೧೦ರಂದು ಭಟ್ಕಳದ (Bhatkal) ತಾಲೂಕಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಶ್ರೀಧರ ನಾಯ್ಕ ತಿಳಿಸಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಬುಧವಾರ ಖಾಸಗಿ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂದ್ಯಾಟದಲ್ಲಿ ಪ್ರಥಮ ಬಹುಮಾನವಾಗಿ ರೂ ೭೫,೦೦೦, ದ್ವಿತೀಯ ಬಹುಮಾನ ರೂ ೫೦,೦೦೦ ಹಾಗೂ ತೃತೀಯ ಬಹುಮಾನ ರೂ ೨೫,೦೦೦ ನಿಗದಿಪಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಒಟ್ಟು ೮ ತಂಡಗಳ ಮಾಲಕರು ಭಾಗವಹಿಸಲಿದ್ದು, ಆಟಗಾರರು ಏಪ್ರಿಲ್ ೨೭ರೊಳಗೆ ಗೂಗಲ್ ಫಾರ್ಮ್ ಮೂಲಕ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದರು.

Shiksha Award/ ವಿದ್ಯಾಂಜಲಿ ಪಬ್ಲಿಕ್ ಶಾಲೆಗೆ ಹೆಮ್ಮೆಯ ” ಶಿಕ್ಷಾ ಪ್ರಶಸ್ತಿ -೨೦೨೬” ಪ್ರದಾನ

ಪಂದ್ಯಾವಳಿಯನ್ನು ಸುಮಾರು ೫,೦೦೦ ಪ್ರೇಕ್ಷಕರು ಕುಳಿತು ವೀಕ್ಷಿಸಲು ವ್ಯವಸ್ಥೆ ಕಲ್ಪಿಸಲಾಗಿದ್ದು, ಕ್ರೀಡಾಭಿಮಾನಿಗಳಿಗೆ ರೋಚಕ ಹಾಗೂ ಸ್ಪರ್ಧಾತ್ಮಕ ಪಂದ್ಯಗಳ ನಿರೀಕ್ಷೆ ಇದೆ. ಭಟ್ಕಳದಲ್ಲಿ ಕಬಡ್ಡಿಗೆ ವಿಶೇಷ ಮಹತ್ವವಿದ್ದು, ಕಳೆದ ಕೆಲವು ವರ್ಷಗಳಿಂದ ಪಂದ್ಯಾವಳಿ ನಡೆಯದೆ ಕಬಡ್ಡಿ ಪ್ರಿಯರು ನಿರಾಸೆಗೊಂಡಿದ್ದರು. ಈ ಬಾರಿ ಫೆಡರೇಶನ್ ಕಪ್ ಪ್ರೋ-ಕಬಡ್ಡಿ (Pro-Kabaddi) ಮಾದರಿಯಲ್ಲಿ ನಡೆಯಲಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಶ್ರೇಷ್ಠ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

bulls rescued/ ಭಟ್ಕಳದಲ್ಲಿ ಕಟ್ಟಿ ಹಾಕಿದ್ದ ಎರಡು ಎತ್ತು ರಕ್ಷಣೆ

ಈ ಸಂದರ್ಭದಲ್ಲಿ ತಾಲೂಕಾ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರವೂಫ್ ನಾಯ್ತೆ, ಜಿಲ್ಲಾ ಉಪಾಧ್ಯಕ್ಷ ಜಾಫರ್ ಹೈದರ್, ತಾಲೂಕಾ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಕನ್ವೀನರ್ ಅಜುಜುರ್ ರಹಮಾನ, ಇನಾಯತ್ ಉಲ್ಲಾ, ಸಮೀರ್ ಮೊಮಿನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

camels transporting/ ೮ ಒಂಟೆ ಸಾಗಿಸುತ್ತಿದ್ದ ಮೂವರ ಬಂಧನ