ಭಟ್ಕಳ (Bhatkal) : ಭಟ್ಕಳ ನಾಮಧಾರಿ (Namadhari) ಸಮಾಜದ ಬಂಧುಗಳು ಜಿಲ್ಲೆಯಲ್ಲಿ ಮಾದರಿ ಕಾರ್ಯಕ್ರಮವನ್ನಾಗಿ ಮಾಡಿ ಎಲ್ಲರ ಹೆಗ್ಗಳಿಕೆಗೆ ಕಾರಣರಾಗಿದ್ದಾರೆ ಎಂದು ಮಾಜಿ ಶಾಸಕ ಸುನೀಲ ನಾಯ್ಕ (Sunil Naik) ಸಂತಸ ವ್ಯಕ್ತಪಡಿಸಿದರು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಅವರು, ಶ್ರೀಗಳ ೪೧ ದಿನಗಳ ಚಾತುರ್ಮಾಸ್ಯ ವ್ರತಾಚಾರಣೆಯ ಕೊನೆಯ ದಿನದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದೂರದ ಊರಿನಿಂದ ನನ್ನ ಸ್ನೇಹಿತರು ಕರೆ ಮಾಡಿ ಭಟ್ಕಳದಲ್ಲಿ ನಡೆದ ಶ್ರೀಗಳ ೫ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣಾ ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ನಾವೆಲ್ಲ ದಿನ ನಿತ್ಯ ಬಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೆವು. ಆದರೆ ಈ ಕಾರ್ಯಕ್ರಮದ ಯಶಸ್ಸಿನ ಕೈಗಳು ಹೊರಗಡೆ ಸರಿಯಾದ ರೀತಿಯಲ್ಲಿ ವಾಹನ ನಿಲುಗಡೆ ಮಾಡಿಸುತ್ತಿರುವರು, ಬಂದಂತಹ ಭಕ್ತಾದಿಗಳಿಗೆ ಶುಚಿರುಚಿಯಾಗಿ ಅಡುಗೆ ಮಾಡುತ್ತಿದ್ದವರು ಮತ್ತು ಕಾರ್ಯಕ್ರಮದ ಸ್ವಯಂಸೇವಕರಾಗಿ ಕೆಲಸ ಮಾಡಿದ ಭಟ್ಕಳ ಹಾಗೂ ಶಿರಾಲಿ ಭಾಗದ ಎಲ್ಲ ಕೂಟಗಳ ಸದಸ್ಯರುಗಳೇ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರಾಗಿದ್ದಾರೆ. ಅವರಿಗೆಲ್ಲ ನಾನು ಶಿರಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ ಎಂದು ಸುನೀಲ ನಾಯ್ಕ (Sunil Naik) ಹೇಳಿದರು.
ವಿಡಿಯೋ ಸಹಿತ ಇದನ್ನೂ ಓದಿ : ಚಾತುರ್ಮಾಸ್ಯ ನಡೆವ ಸ್ಥಳದಲ್ಲಿ ದೇವರು ಇರ್ತಾನೆ
ಮಾಜಿ ಶಾಸಕ ಸುನೀಲ ನಾಯ್ಕ ಅವರ ಭಾಷಣದ ವಿಡಿಯೋವನ್ನು ಯೂಟ್ಯೂಬ್ ಚಾನೆಲ್, ಇನ್ಸ್ಟಾಗ್ರಾಂನಲ್ಲಿ ಮತ್ತು ಫೇಸ್ಬುಕ್ ನಲ್ಲಿ ವೀಕ್ಷಿಸಬಹುದಾಗಿದೆ.