ದೆಹಲಿ (Delhi) : ಇಲ್ಲಿನ ಪಟಿಯಾಲ ಹೌಸ್ ಕೋರ್ಟ್ (Patiala House Court) ಗುರುವಾರ ಇಂಡಿಯನ್ ಮುಜಾಹಿದ್ದೀನ್ (Indian Mujahideen) ಸಂಸ್ಥಾಪಕರಲ್ಲಿ ಒಬ್ಬನಾದ ಭಯೋತ್ಪಾದಕ (Terrorist) ಯಾಸಿನ್ ಭಟ್ಕಳ್ (Yasin Bhatkal) ತನ್ನ ಅನಾರೋಗ್ಯದ ತಾಯಿಯೊಂದಿಗೆ ವಿಡಿಯೋ ಕಾನ್ಫರೆನ್ಸ್ (VC) ಸಭೆ ನಡೆಸಲು ಅನುಮತಿ ನೀಡಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಯಾಸಿನ್ ಭಟ್ಕಳ್‌ (Yasin Bhatkal) ಪ್ರಸ್ತುತ ದೆಹಲಿಯ ತಿಹಾರ್ ಜೈಲಿನಲ್ಲಿ (Tihar Jail) ಬಂಧಿತನಾಗಿದ್ದಾನೆ. ಇತ್ತೀಚೆಗೆ ಹೃದಯ ಶಸ್ತ್ರಚಿಕಿತ್ಸೆಗೆ (cardiac surgery) ಒಳಗಾಗಿರುವ ತಮ್ಮ ಅನಾರೋಗ್ಯದ ತಾಯಿಗೆ ಭೇಟಿಯಾಗಲು ಕಸ್ಟಡಿ ಪೆರೋಲ್ (Custody Parole) ಕೋರಿ ಅರ್ಜಿ ಸಲ್ಲಿಸಿದ್ದ. ಹೃದಯ ಶಸ್ತ್ರಚಿಕಿತ್ಸೆಯ ನಂತರ ಅವರ ತಾಯಿಯ ಸ್ಥಿತಿ ಗಂಭೀರವಾಗಿರುವುದು ಮನವಿಗೆ ಕಾರಣವೆಂದು ತಿಳಿಸಲಾಗಿತ್ತು. ಮನವಿಯಲ್ಲಿ, ದೆಹಲಿ ಜೈಲು ನಿಯಮಗಳು, ೨೦೧೮ರ ಪ್ಯಾರಾ ೧೨೦೩ ಅನ್ನು ಉಲ್ಲೇಖಿಸಲಾಗಿತ್ತು.  ಈ ಪ್ಯಾರಾ ಯಾವ ಸಂದರ್ಭಗಳಲ್ಲಿ ಕಸ್ಟಡಿ ಪೆರೋಲ್ ಅನ್ನು ನೀಡಬಹುದು ಎಂಬುದನ್ನು ವಿವರಿಸುತ್ತದೆ. ಇವುಗಳಲ್ಲಿ, ಕುಟುಂಬದ ಸದಸ್ಯರ ಸಾವು, ಕುಟುಂಬದ ಸದಸ್ಯರ ಮದುವೆ, ಕುಟುಂಬದ ಸದಸ್ಯರ ಗಂಭೀರ ಅನಾರೋಗ್ಯ ಮತ್ತು ಯಾವುದೇ ಇತರ ತುರ್ತು ಪರಿಸ್ಥಿತಿ, ಕಾರಾಗೃಹಗಳ ಡಿಐಜಿ (ರೇಂಜ್) ಅನುಮೋದನೆಗೆ ಒಳಪಟ್ಟಿದೆ.

ಇದನ್ನೂ ಓದಿ :  ಸಮುದ್ರದಲ್ಲಿ ಬಿದ್ದು ಮೀನುಗಾರ ಸಾವು

ಮೂಲತಃ ಭಟ್ಕಳದವನಾದ ಯಾಸಿನ್‌ ಭಟ್ಕಳ್‌, ಅನಾರೋಗ್ಯದಲ್ಲಿರುವ ತನ್ನ ತಾಯಿಯನ್ನು ಖುದ್ದಾಗಿ ಭೇಟಿಯಾಗಲು ಕಸ್ಟಡಿ ಪೆರೋಲ್‌ಗೆ ಅನುಮತಿ ಕೋರಿದ್ದ.  ನ್ಯಾಯಾಲಯವು ವಿಡಿಯೋ ಕಾನ್ಫರೆನ್ಸಿಂಗ್‌ (video conferencing) ಮೂಲಕ ಮಾತನಾಡಲು ಅನುಮತಿ ನೀಡಿದೆ. ಯಾಸಿನ್ ಭಟ್ಕಳ್ ಅವರ ಅನಾರೋಗ್ಯದ ತಾಯಿಯೊಂದಿಗೆ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಸಂವಹನ ನಡೆಸಲು ಅವಕಾಶ ನೀಡುವಂತೆ ಸಂಬಂಧಪಟ್ಟ ಜೈಲು ಅಧೀಕ್ಷಕರಿಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಡಾ.ಹರ್ದೀಪ್ ಕೌರ್ ನಿರ್ದೇಶನ ನೀಡಿದರು. ಒಂದು ಬಾರಿ ಮಾತ್ರ ಮಾತನಾಡಲು ಅವಕಾಶ ಕೊಡಬಹುದು ಮತ್ತು ಯಾಸಿನ್‌ ಭಟ್ಕಳ್ ತನ್ನ ತಾಯಿಯೊಂದಿಗೆ ಹಿಂದಿಯಲ್ಲಿ ಮಾತ್ರ ಸಂವಹನ ನಡೆಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ. ಹೆಚ್ಚುವರಿಯಾಗಿ, ಜೈಲು ಅಧೀಕ್ಷಕರಿಗೆ ಭದ್ರತಾ ಕಾರಣಗಳಿಗಾಗಿ ಅಗತ್ಯವೆಂದು ಎನಿಸಿದರೆ ಸಂವಹನವನ್ನು ದಾಖಲಿಸಲು ನ್ಯಾಯಾಲಯ ಸ್ವಾತಂತ್ರ್ಯ ನೀಡಿದೆ.

ಇದನ್ನೂ ಓದಿ : ತಿರುಪತಿ ಲಡ್ಡು ಪ್ರಕರಣ- ಸೂಕ್ತ ಕ್ರಮಕ್ಕೆ ಆಗ್ರಹ

ಈ ಪ್ರಕರಣದಲ್ಲಿ ಯಾಸಿನ್ ಭಟ್ಕಳ್ ಪರ ವಕೀಲ ಎಂ.ಎಸ್.ಖಾನ್, ಕೌಸರ್ ಖಾನ್, ಪ್ರಶಾಂತ್ ಪ್ರಕಾಶ್ ಮತ್ತು ರಾಹುಲ್ ಸಹಾನಿ ವಾದ ಮಂಡಿಸಿದರು. ಯಾಸಿನ್‌ ಭಟ್ಕಳ್‌ ಕಳೆದ ೧೩ ವರ್ಷಗಳಿಂದ ತನ್ನ ಕುಟುಂಬದೊಂದಿಗೆ ಮಾತನಾಡಿಲ್ಲ ಎಂದು ಯಾಸಿನ್‌ ಪರ ವಕೀಲರು ಹೇಳಿದರು. ಮೊದಲು ತನ್ನ ತಾಯಿಯನ್ನು ಭೇಟಿಯಾಗಲು ಕಸ್ಟಡಿ ಪೆರೋಲ್‌ಗಾಗಿ ಕೋರಿದ್ದ ಯಾಸಿನ್‌ ಭಟ್ಕಳ್‌, ತಾನು ಪೆರೋಲ್‌ಗಾಗಿ ಒತ್ತಾಯಿಸುತ್ತಿಲ್ಲ. ಮಾನವೀಯ ಆಧಾರದ ಮೇಲೆ ತಿಂಗಳಿಗೊಮ್ಮೆ ತನ್ನ ತಾಯಿಯೊಂದಿಗೆ ವರ್ಚುವಲ್ ಮೀಟಿಂಗ್ ಸೌಲಭ್ಯವನ್ನು ಒದಗಿಸಬೇಕೆಂದು ವಿನಂತಿಸಿಕೊಂಡ. ಆದರೆ ಪೊಲೀಸರು ಯಾಸಿನ್‌ ಪರ ಅರ್ಜಿಯನ್ನು ವಿರೋಧಿಸಿದರು. ಯಾಸಿನ್‌ ಭಟ್ಕಳ್‌ ಮೇಲಿರುವ ಭಯೋತ್ಪಾದನೆ ಆರೋಪಗಳ ಬಗ್ಗೆ ಪೊಲೀಸರು  ತಮ್ಮ ತಕರಾರು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ :  ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ‌ ಮಾಹಿತಿ ನೀಡಿದ ಎಸ್ಪಿ ನಾರಾಯಣ ಎಂ.

ಭಯೋತ್ಪಾದನೆಯ ಹಲವಾರು ಪ್ರಕರಣಗಳಲ್ಲಿ ಯಾಸಿನ್‌ ಭಟ್ಕಳ್‌ ಆರೋಪಿಯಾಗಿದ್ದಾನೆ. ೨೦೧೨ರಲ್ಲಿ ಭಾರತದ ವಿರುದ್ಧ ಯುದ್ಧಕ್ಕೆ ಸಂಚು ರೂಪಿಸಿದ್ದಕ್ಕೆ ಸಂಬಂಧಿಸಿದ ಮತ್ತು ೨೦೦೮ರ ಸೆಪ್ಟೆಂಬರ್‌ನಲ್ಲಿ ದೆಹಲಿಯಲ್ಲಿ ೨೬ ಜೀವಗಳನ್ನು ಬಲಿತೆಗೆದುಕೊಂಡ ಹಾಗೂ ೧೩೫ಜನರನ್ನು ಗಾಯಗೊಳಿಸಿದ ಸರಣಿ ಸ್ಫೋಟಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ೨೦೧೩ರಲ್ಲಿ ಹೈದ್ರಾಬಾದಿನ (Hyderabad) ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾಗಿದ್ದಕ್ಕಾಗಿ ೨೦೧೬ರಲ್ಲಿ ಹೈದರಾಬಾದ್ ನ್ಯಾಯಾಲಯವು ಯಾಸಿನ್ ಭಟ್ಕಳ್‌ಗೆ ಮರಣದಂಡನೆ ವಿಧಿಸಿದೆ.

ಇದನ್ನೂ ಓದಿ : ಸೆಪ್ಟೆಂಬರ್‌ ೨೬ರಂದು ವಿವಿಧೆಡೆ ಅಡಿಕೆ ಧಾರಣೆ