ಭಟ್ಕಳ (Bhatkal) : ಬೈಕ್ ಸ್ಕಿಡ್ (Bike skid) ಆಗಿ ಬೈಕಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಬೈಕ್ ನಲ್ಲಿದ್ದ ಶಿವಮೊಗ್ಗ (Shivamogga) ಜಿಲ್ಲೆಯ ಸಾಗರ (Sagar) ತಾಲೂಕಿನ ನಾಗವಳ್ಳಿಯ ಹಸಿರುಬೈಲ್ ನಿವಾಸಿಗಳಾದ ರಾಘವೇಂದ್ರ ವೆಂಕಟರಮಣ ನಾಯ್ಕ (೩೮), ಅವರ ಮಗ ಪ್ರಣೀತ ಮತ್ತು ಮಾಸ್ತಪ್ಪ ಈರಪ್ಪ ನಾಯ್ಕ ಗಾಯಗೊಂಡವರು. ಫೆಬ್ರುವರಿ ಎರಡರಂದು ಮಧ್ಯಾಹ್ನ ೧ ಗಂಟೆಯ ಸುಮಾರಿಗೆ ಈ ಘಟನೆ ನಡೆದಿದೆ. ನಾಗವಳ್ಳಿಯಿಂದ ಭಟ್ಕಳ ಕಡೆಗೆ ಬರುತ್ತಿದ್ದಾಗ ಮಾರುಕೇರಿ ಬೀರುಗೊಳಿ ದೇವಸ್ಥಾನದ ಹತ್ತಿರ ಘಟನೆ (Bike skid) ನಡೆದಿದೆ.
ಇದನ್ನು ಓದಿ : Vanadurga/ ಶ್ರೀ ವನದುರ್ಗಾ ವಾರ್ಷಿಕೋತ್ಸವ ಫೆ. ೧೦ರಂದು
ಬೈಕ್ ಚಲಾಯಿಸುತ್ತಿದ್ದ ರಾಘವೇಂದ್ರ ನಾಯ್ಕ ವಿರುದ್ಧ ಮಾಸ್ತಪ್ಪ ನಾಯ್ಕರ ಪತ್ನಿ ಹೇಮಾವತಿ ದೂರು ದಾಖಲಿಸಿದ್ದಾರೆ. ಭಟ್ಕಳ ಗ್ರಾಮೀಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕಡು ತನಿಖೆ ಮುಂದುವರಿಸಿದ್ದಾರೆ.
ವಿಡಿಯೋ ಸಹಿತ ಇದನ್ನು ಓದಿ : Namadhari/ ಶ್ರೀ ವೆಂಕಟರಮಣ ದೇವರ ಅದ್ದೂರಿ ಪಲ್ಲಕ್ಕಿ ಮೆರವಣಿಗೆ