ಯಲ್ಲಾಪುರ (Yellapur) : ತರಕಾರಿ ಹೊತ್ತುಕೊಂಡು ಬಂದಿದ್ದ ಲಾರಿ ಪಲ್ಟಿಯಾಗಿ ೧೦ ಜನರ ಸಾವಿಗೀಡಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿ (Haveri) ಜಿಲ್ಲೆಯ ಸವಣೂರ (Savanur) ತಾಲೂಕಿನವರಾದ ಲಾರಿಯ ಚಾಲಕ ಮತ್ತು ಮಾಲೀಕನನ್ನು ಪೊಲೀಸರು ಬಂಧಿಸಿ (Two Arrested) ಕ್ರಮಕೈಗೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಸವಣೂರಿನ ಎಸ್‌.ಎಂ.ಕೃಷ್ಣ ನಗರ ನಿವಾಸಿಯಾಗಿರುವ ಲಾರಿ ಚಾಲಕ ನಿಜಾಮುದ್ದೀನ ಕರೀಮಖಾನ ಸೌದಾಗರ (೩೨) ಮತ್ತು ಸವಣೂರಿನ ಖಾದ್ರಿ ನಗರ ನಿವಾಸಿ ಲಾರಿ ಮಾಲೀಕ  ಗೌಸಮೊಹಿದ್ದೀನ ಬಸೀರ ಅಹಮ್ಮದ ಲೋಹಾರ (೩೩) ಬಂಧಿತರು (Two arrested). ಇವರಿಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಇದನ್ನೂ ಓದಿ : Hubballi/ ಚಾಕು ಇರಿದವರಿಗೆ ಗುಂಡಿನೇಟು

ಸವಣೂರ ಮಾರ್ಕೆಟ್‌ನಲ್ಲಿ ಹಣ್ಣು ಮತ್ತು ತರಕಾರಿಯನ್ನು ತುಂಬಿಕೊಂಡು ಕುಮಟಾಕ್ಕೆ (Kumta) ಬರುತ್ತಿದ್ದ ಲಾರಿಯು ಚಾಲಕನ ನಿರ್ಲಕ್ಷ್ಯತನ ಮತ್ತು ಅತಿ ವೇಗದ ಚಾಲನೆಯಿಂದ ಜ.೨೨ರಂದು ಬೆಳಗಿನ ಜಾವ ೪.೧೫ರ ಸುಮಾರಿಗೆ ಯಲ್ಲಾಪುರ ತಾಲೂಕಿನ ಗುಳ್ಳಾಪುರದ ಬಳಿ ಪಲ್ಟಿಯಾಗಿತ್ತು. ಪರಿಣಾಮ ಲಾರಿಯಲ್ಲಿದ್ದ ೧೦ ಜನರು ಸಾವನ್ನಪ್ಪಿದ್ದರೆ, ಲಾರಿ ಚಾಲಕ ಸಹಿತ ೧೯ ಜನರು ಗಾಯಗೊಂಡಿದ್ದರು. ಈ ಕುರಿತು ಸವಣೂರಿನ ಖಾದರಬಾಗ್‌ ನಿವಾಸಿ ನೂರ್‌ ಅಹ್ಮದ್‌ ಮಹ್ಮದ್‌ ಜಾಫರ್‌ (೩೯) ಯಲ್ಲಾಪುರ ಪೊಲೀಸ್‌ ಠಾಣೆಯಲ್ಲಿ ದೂರು (complaint) ದಾಖಲಿಸಿದ್ದರು.

ಇದನ್ನೂ ಓದಿ : ಲಾರಿ ಪಲ್ಟಿ; ನಡೆದಿದ್ದೇನು ಗೊತ್ತಾ? ಸತ್ತವರು ಯಾರು? ಉಳಿದವರ ಕಥೆ ಏನು?