ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ೨೦೨೩ರಲ್ಲಿ ನಡೆಸಿದ ಬಿ.ಬಿ.ಎ ಪರೀಕ್ಷೆಯಲ್ಲಿ ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ವೃಂದಾ ಆರ್ ಜೋಗಿ ರ್ಯಾಂಕ್(university rank) ಪಡೆದಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ವೃಂದಾ ಜೋಗಿ ಬಿಬಿಎ ಪರೀಕ್ಷೆಯಲ್ಲಿ ಶೇ. ೯೧.೮೯ ಪಡೆದು ಕರ್ನಾಟಕ ವಿಶ್ವವಿದ್ಯಾಲಯದ ಬಿಬಿಎ ವಿಭಾಗದಲ್ಲಿ
ದ್ವಿತೀಯ ರ್ಯಾಂಕ್(university rank) ಪಡೆದಿದ್ದಾರೆ. ವೃಂದಾ ಅವರು ಭಟ್ಕಳದ ಮಣ್ಕುಳಿಯ ವೀಣಾ ಹಾಗೂ ರಾಮನಾಥ ಜೋಗಿಯವರ ಸುಪುತ್ರಿ. ಈ ವಿದ್ಯಾರ್ಥಿನಿಯ ಅಪ್ರತಿಮ ಸಾಧನೆಯಿಂದ ಉತ್ತರ ಕನ್ನಡ ಜಿಲ್ಲೆ ಹೆಮ್ಮೆ ಪಡುವಂತಾಗಿದೆ. ಈ ಯುವಪ್ರತಿಭೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಚಾರ್ಯರು, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿರುತ್ತಾರೆ.
ಇದನ್ನೂ ಓದಿ : ಶರಾವತಿ ನದಿಪಾತ್ರದ ವಿದ್ಯಾರ್ಥಿಗಳಿಗೆ ತಾತ್ಕಾಲಿಕ ವಸತಿ