ಭಟ್ಕಳ (Bhatkal): ಇಲ್ಲಿನ ದಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನ (Urban Bank) ಆಡಳಿತ ಮಂಡಳಿ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಮುಖಂಡ (BJP Leader), ಮಾಜಿ ಸೈನಿಕ (Ex Army) ಶ್ರೀಕಾಂತ ನಾಯ್ಕ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಮತ ಎಣಿಕೆ ಕೇಂದ್ರದ ಬಳಿ ಅವರ ಗೆಲುವು ಖಚಿತಗೊಂಡಂತೆ ಅವರ ಅಭಿಮಾನಿಗಳು, ಹಿತೈಷಿಗಳು ಹೂವಿನ ಹಾರ ಹಾಕಿ ತೆರೆದ ಜೀಪಿನಲ್ಲಿ ಶ್ರೀಕಾಂತ ನಾಯ್ಕ ಅವರ ಮೆರವಣಿಗೆ ನಡೆಸಿದರು. ನ್ಯೂ ಇಂಗ್ಲಿಷ್ ಶಾಲೆ, ಬಂದರ ರಸ್ತೆ ಮಾರ್ಗವಾಗಿ ಮೆರವಣಿಗೆಯಲ್ಲಿ ಕರೆತಂದು ಸಂಶುದ್ದೀನ್ ಸರ್ಕಲ್ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಅಲ್ಲಿಂದ ಪಿ.ಎಲ್.ಡಿ ಬ್ಯಾಂಕ್ ಮುಖಾಂತರ ಮಾರಿಕಾಂಬಾ ರೋಡ್ ನಿಂದ ಹನುಮಂತ ದೇವಸ್ಥಾನ ಸುತ್ತಿ ಹೂವಿನ ಮಾರ್ಕೆಟ್ ರೋಡ್ ಮೂಲಕ ಆಸರಕೇರಿ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು.

ಇದನ್ನು ಓದಿ : Urban Bank/ ಭಟ್ಕಳ ಅರ್ಬನ್‌ ಬ್ಯಾಂಕ್‌ ಚುನಾವಣೆಯಲ್ಲಿ ಗೆದ್ದವರು ಯಾರ್ಯಾರು?

ಹಿಂದುತ್ವದ ಅಡಿ ಸ್ಪರ್ಧೆ :
ಚುನಾವಣಾ ಎಂದ ಮೇಲೆ ಒಂದು ತಂಡ ರಚಿಸಿ ನಿರ್ದೇಶಕ‌ ಮಂಡಳಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸಹಜವಾಗಿದೆ. ಆದರೆ ಶ್ರೀಕಾಂತ ನಾಯ್ಕ ಅವರು ಯಾವುದೇ ತಂಡದೊಂದಿಗೆ ಸೇರದೆ ಏಕಾಂಗಿಯಾಗಿ ಹಿಂದುತ್ವದ ಅಡಿಯಲ್ಲಿ ಸಾಮಾನ್ಯ ಕ್ಷೇತ್ರಕ್ಕೆ ಸ್ಪರ್ಧಿಸಿ ಅತೀ ಹೆಚ್ಚು ಮತ ಪಡೆದು ಜಯಭೇರಿ ಬಾರಿಸಿದ್ದಾರೆ.

ಇದನ್ನು ಓದಿ : Urban Bank/ ನಾಲ್ವರು ಅವಿರೋಧ ಆಯ್ಕೆ

ಶ್ರೀಕಾಂತ ನಾಯ್ಕ ದೇಶದ ಸೈನಿಕರಾಗಿ ದೇಶ ಸೇವೆ ಮಾಡಿ ನಂತರದಲ್ಲಿ ಸ್ವಯಂ ನಿವೃತ್ತಿ ಪಡೆದು ಈಗ ಭಟ್ಕಳದಲ್ಲಿ ತಮ್ಮದೇ ಒಂದು ತಂಡ ಕಟ್ಟಿಕೊಂಡು ಸಾಮಾಜಿಕ ಕಾರ್ಯದಲ್ಲಿ ತೊಡಗಿದ್ದಾರೆ. ಅನೇಕ ಸಾಮಾಜಿಕ ಸಂಘ ಸಂಸ್ಥೆಗಳ ಜೊತೆಗೂಡಿ ತಾಲೂಕಿಗೆ, ಜಿಲ್ಲೆಗೆ, ಊರಿಗೆ ಉಪಕಾರಿಯಾಗುವಂತಹ ಮಾದರಿ ಕೆಲಸಗಳನ್ನು ಮಾಡುತ್ತಿದ್ದಾರೆ.

ಇದನ್ನು ಓದಿ : Private bus/ ಅಪಘಾತದಲ್ಲಿ ೯ ಜನರು ಗಂಭೀರ

ಎಲ್ಲಾ ಕ್ಷೇತ್ರಗಳಲ್ಲಿ ಸಾಮಾಜಿಕ ನ್ಯಾಯ ಬಯಸಿ ಹೋರಾಟದ ರೂಪದಲ್ಲಿ ಜನಮನದಲ್ಲಿ ಹೆಸರು ಮಾಡಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿಯೂ ಆಗಿರುವ ಶ್ರೀಕಾಂತ ನಾಯ್ಕ ಅವರು  ದಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ಚುನಾವಣೆಯಲ್ಲಿ ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಭರ್ಜರಿ ಜಯ ಸಾಧಿಸಿ, ಸಹಕಾರ ರಂಗಕ್ಕೂ ಕಾಲಿಟ್ಟಿದ್ದಾರೆ.

ವಿಡಿಯೋವನ್ನು ಯೂಟ್ಯೂಬ್ಇನ್ಸ್ಟಾಗ್ರಾಂ  ಮತ್ತು  ಫೇಸ್‌ಬುಕ್‌ ನಲ್ಲಿ ವೀಕ್ಷಿಸಬಹುದು.