ಭಟ್ಕಳ (Bhatkal) : ಇತಿಹಾಸ ಪ್ರಸಿದ್ದ ತಾಲೂಕಿನ ಶಕ್ತಿ ದೇವತೆಯಾದ ಇಲ್ಲಿನ ಮಣ್ಕುಳಿಯ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಶ್ರೀ ನಾಗಮಾಸ್ತಿ (Nagamasthi) ಕ್ಷೇತ್ರದ ಪ್ರಥಮ ವರ್ಷದ ವರ್ಧಂತ್ಯುತ್ಸವ (Vardhanthi) ಭಕ್ತರ ಹರ್ಷೊದ್ಘಾರಗಳ ನಡುವೆ ಅತಿ ವಿಜೃಂಭಣೆಯಿಂದ ಸೋಮವಾರ ಸಂಪನ್ನಗೊಂಡಿತು.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ೫ ಗಂಟೆಗೆ ಶ್ರೀ ಸತ್ಯಸಾಯಿ ಸೇವಾ ಸಮಿತಿ ಇವರಿಂದ ನಗರದಲ್ಲಿ ಸಂಕೀರ್ತನಾ ಭಜನಾ ಕಾರ್ಯಕ್ರಮ ನಡೆಯಿತು. ಮಹಾಪೂಜೆಯ ನಂತರ ಮಹಾ ಅನ್ನಸಂತರ್ಪಣೆ ಹಾಗು ಭಜನಾ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನೇರವೇರಿತು. ಸಭಾ ಕಾರ್ಯಕ್ರಮದಲ್ಲಿ ನಾಗಮಾಸ್ತಿ ದೇವಸ್ಥಾನದ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ಸತೀಶಕುಮಾರ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಾಗಯಕ್ಷೆ ಧರ್ಮಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು, ಕೊಂಕಣ ರೈಲ್ವೆ ಹಿರಿಯ ಅಭಿಯಂತ ಆರ್.ರುದ್ರಣ್ಣ, ಗಣ್ಯರಾದ ಅನಂತ ನಾಯ್ಕ, ರಾಜೇಶ ಶೆಟ್ಟಿ, ಡಾ. ಸವಿತಾ ಕಾಮತ, ವಕೀಲ ರಾಮದಾಸ ನಾಯಕ, ಗಿರಿಜಾ ವಿ. ದೇವಾಡಿಗ ಇತರರು ಇದ್ದರು.

ವಿಡಿಯೋ ಸಹಿತ ಇದನ್ನೂ ಓದಿ : Protest / ಗ್ರಾಮ ಆಡಳಿತ ಅಧಿಕಾರಿಗಳ ಮುಷ್ಕರ ಆರಂಭ 

ರಾತ್ರಿ ೯ ಗಂಟೆಗೆ ಅಂತರಾಷ್ಟ್ರೀಯ ಕಲಾತಂಡವಾದ ಉಪ್ಪಿನಕುದ್ರುವಿನ ಶ್ರೀ ಗಣೇಶ ಯಕ್ಷಗಾನ ಬೊಂಬೆಯಾಟ ಮಂಡಳಿಯಿಂದ ಚೂಡಾಮಣಿ ಲಂಕಾದಹನ ಬೊಂಬೆಯಾಟ (puppet show) ಜನಮನಸೂರೆಗೊಂಡಿತು. ಕಾರ್ಯದರ್ಶಿ ಸೀತಾರಾಮ ನಾಯ್ಕ, ಪ್ರಮುಖರಾದ ಪರಮೇಶ್ವರ ನಾಯ್ಕ, ನಾಗರಾಜ ನಾಯ್ಕ, ಶ್ರೀಧರ ನಾಯ್ಕ ರಾಮಣ್ಣ ಬಳೆಗಾರ, ಶ್ರೀಕಾಂತ ದೇವಾಡಿಗ, ಶೇಷಗಿರಿ ನಾಯ್ಕ, ಆನಂತ ನಾಯ್ಕ, ಹೇಮಂತ ನಾಯ್ಕ, ರಾಜು ನಾಯ್ಕ, ವೆಂಕಟೇಶ ದೇವಾಡಿಗ, ಸುಬ್ರಾಯ ನಾಯ್ಕ ಇತರರು ಸಹಕಾರ ನೀಡಿದರು.

ಇದನ್ನೂ ಓದಿ : matsyagandha express/ ಮತ್ಸ್ಯಗಂಧ ಎಕ್ಸಪ್ರೆಸ್‌ಗೆ ಎಲ್‌ಎಚ್‌ಬಿ ಕೋಚ್‌