ಭಟ್ಕಳ (Bhatkal) : ಎಸ್‌ವಿಸಿ (SVC) ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ (ಹಿಂದೆ ದಿ ಶಾಮರಾವ್ ವಿಠಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್) ನ ಅಧ್ಯಕ್ಷರಾಗಿರುವ ಕಾರ್ಪೊರೇಟ್ ವಲಯದ ದೂರದೃಷ್ಟಿಯ ನಾಯಕ ದುರ್ಗೇಶ ಎಸ್. ಚಂದಾವರ್ಕರ (Durgesh Chandavarkar) ಅವರಿಗೆ ವಿಕ್ಷಿತ್‌ ಭಾರತ (Vikshit Bharat) ಮಿಷನ್‌ ೨೦೨೪-೨೫ರ ಪ್ರತಿಷ್ಠಿತ ನಾಯಕತ್ವ ಪ್ರಶಸ್ತಿಯನ್ನು (Leadership Award) ನೀಡಿ ಗೌರವಿಸಲಾಗಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ದುರ್ಗೇಶ ಎಸ್‌. ಚಂದಾವರ್ಕರ ಭಟ್ಕಳ ತಾಲೂಕಿನವರು. ಅವರು ಮುರ್ಡೇಶ್ವರ (Murdeshwar) ಬಳಿಯ ಶಿರಾಣಿ ಗ್ರಾಮದವರು. ಮುಂಬೈನ (Mumbai) ಹೋಟೆಲ್‌ ಕೊಹಿನೂರ್‌ನಲ್ಲಿ (Hotel Kohinoor) ನಡೆದ ಸಮಾರಂಭದಲ್ಲಿ ಚಂದಾವರ್ಕರ ಅವರ ಪರವಾಗಿ ಬ್ಯಾಂಕಿನ ಖಜಾನೆ ವಿಭಾಗದ ಮುಖ್ಯ ಪ್ರಧಾನ ವ್ಯವಸ್ಥಾಪಕ ಆರ್‌.ಜಾನಕಿರಾಮನ್‌ ಸ್ವೀಕರಿಸಿದ್ದಾರೆ. ಆರ್‌ಬಿಐನ (RBI) ಮಾಜಿ ಡೆಪ್ಯುಟಿ ಗವರ್ನರ್‌ ಆರ್‌.ಜಾನಕಿರಾಮ್‌ ಮತ್ತು ನ್ಯೂ ಇಂಡಿಯಾ ಆಶುರೆನ್ಸ್‌ನ ಸಿಎಂಡಿ ಗಿರಿಜಾ ಸುಬ್ರಮಣಿಯನ್‌  ವಿಕ್ಷಿತ್‌ ಭಾರತ (Vikshit Bharat) ಮಿಷನ್‌ ೨೦೨೪-೨೫ರ ಪ್ರತಿಷ್ಠಿತ ನಾಯಕತ್ವ ಪ್ರಶಸ್ತಿ (Leadership Award) ಪ್ರದಾನ ಮಾಡಿದ್ದಾರೆ.

ಇದನ್ನೂ ಓದಿ : Murdeshwar/ ಅರಣ್ಯದಲ್ಲಿ ಜೂಜಾಟ ; ಓರ್ವ ಸೆರೆ, ೩ ಬೈಕ್ ವಶ

ಪ್ರತಿಷ್ಠಿತ ಕೈಗಾರಿಕೋದ್ಯಮಿ, ಬ್ಯಾಂಕರ್ ಚಂದಾವರ್ಕರ ಅವರು, ಕೈಗಾರಿಕೆಗಳಲ್ಲಿ ೪೦ ವರ್ಷಗಳ ಅನುಭವ ಹೊಂದಿದ್ದಾರೆ. ೨೦೧೯ ರಿಂದ ೨೦೨೩ರವರೆಗೆ ಎಸ್‌ವಿಸಿ ಬ್ಯಾಂಕ್‌ನ (SVC Bank) ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅವರು, ೨೦೨೩ ರಿಂದ ೨೦೨೯ರವರೆಗೆ ಹೊಸ ಅವಧಿಗೆ ಅವಿರೋಧವಾಗಿ ಮರು ಆಯ್ಕೆಯಾದರು. ಅವರ ನಾಯಕತ್ವದಲ್ಲಿ, ಎಸ್‌ವಿಸಿ ಬ್ಯಾಂಕ್ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ೧೦೦ ವರ್ಷಗಳ ಸೇವೆಗಾಗಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ (Amit Shah) ಅವರ ಮನ್ನಣೆ ಸೇರಿದಂತೆ ಹಲವಾರು ಪುರಸ್ಕಾರಗಳನ್ನು ಗಳಿಸಿದೆ.

ಇದನ್ನೂ ಓದಿ : Microfinance/ ಉ.ಕ.ದಲ್ಲಿ ಮೈಕ್ರೊಫೈನಾನ್ಸ್ ಹಗರಣ ; ೭ ಪ್ರಕರಣ ದಾಖಲು

೨೦೨೪ರಲ್ಲಿ, ಯುಸಿಬಿ (UCB) ವಲಯದೊಂದಿಗೆ ಒಗ್ಗಟ್ಟಿನ ಸಂಕೇತವಾಗಿ ನ್ಯಾಷನಲ್ ಅರ್ಬನ್ ಕೋ-ಆಪರೇಟಿವ್ ಫೈನಾನ್ಸ್ ಅಂಡ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್‌ನ (NUCFDC) ಪಾವತಿಸಿದ ಬಂಡವಾಳಕ್ಕೆ ನೀಡಿದ ಕೊಡುಗೆಗಾಗಿ ಬ್ಯಾಂಕ್ ಅನ್ನು ಮತ್ತೊಮ್ಮೆ ಗೌರವಿಸಲಾಗಿದೆ. ಚಂದಾವರ್ಕರ್ ಅವರು ೨೦೨೪ರ ಮೇ ತಿಂಗಳಲ್ಲಿ ಭಾರತ ರತ್ನ ಸಹಕಾರಿತಾ ಸಮ್ಮಾನ್‌ನಿಂದ ವರ್ಷದ ಅತ್ಯುತ್ತಮ ಅಧ್ಯಕ್ಷ ಪ್ರಶಸ್ತಿಯನ್ನು ಪಡೆದಿದ್ದಾರೆ.

ಇದನ್ನೂ ಓದಿ : Shivarajkumar / ಯಾಣಕ್ಕೆ ಭೇಟಿ ನೀಡಿದ ಶಿವರಾಜಕುಮಾರ, ನಮ್ಮೂರ ಮಂದಾರ ಹೂವೇ ಮೆಲುಕು