ಭಟ್ಕಳ: ಅನಧಿಕೃತ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಮಾನದಂಡ ೨೦೧೫ಕ್ಕೆ ನಿಗದಿಗೊಳಿಸಿ ಇತ್ತೀಚಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಹೊರಡಿಸಿದ ಟಿಪ್ಪಣಿಯು ಸುಪ್ರೀಂ ಕೋರ್ಟ ಆದೇಶ ಮತ್ತು ಕಾನೂನು ಉಲ್ಲಂಘನೆ (law violation) ಆಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅವರು ಇಂದು(ಆ.೧೧) ಭಟ್ಕಳ ತಾಲೂಕಿನ ಅರಣ್ಯ ವಾಸಿಗಳ ಸಭೆಯನ್ನು ಉಧ್ದೇಶಿಸಿ ಮಾತನಾಡಿದರು. ದೇಶದಲ್ಲಿಂದು ಅರಣ್ಯ ಸಂರಕ್ಷಣಾ ಕಾಯಿದೆ ೧೯೮೦ ಅಡಿಯಲ್ಲಿ ೧೯೭೮ ರ ನಂತರ ಹಾಗೂ ಅರಣ್ಯ ಹಕ್ಕು ಕಾಯಿದೆಯಂತೆ ಡಿಸೆಂಬರ ೧೩, ೨೦೦೫ ರ ನಂತರ ಅತಿಕ್ರಮಣ ಮಂಜೂರಿಗೆ ನಿರ್ಬಂಧವಿದೆ. ಇದನ್ನು ಸುಪ್ರೀಂ ಕೋರ್ಟ ಸಹಿತ ನಿರ್ಬಂಧಿಸಿದೆ. ಆದರೆ, ಆಗಸ್ಟ್ ೨ರ ಸಚಿವರ ಟಿಪ್ಪಣಿಯಂತೆ ೨೦೧೫ ರವರೆಗಿನ ಅವಧಿಗೆ ಯಾವುದೇ ಅತಿಕ್ರಮಣ ಮಾಡಲು ಕಾನೂನಲ್ಲಿ ಮಾನ್ಯತೆ ಇಲ್ಲ. ಹೀಗಾಗಿ ಅರಣ್ಯ ಸಚಿವರ ಟಿಪ್ಪಣಿಯು ಕಾನೂನು ಉಲ್ಲಂಘನೆ (law violation) ಆಗಿದೆ ಎಂದು ಅವರು ಹೇಳಿದರು.
ಇದನ್ನೂ ಓದಿ : ನೂತನ ಪದಾಧಿಕಾರಿಗಳ ನೇಮಕ
ಸಭೆಯಲ್ಲಿ ಪದಾಧಿಕಾರಿಗಳಾದ ಪಾಂಡು ನಾಯ್ಕ ಬೆಳಕೆ, ದೇವರಾಜ ಗೊಂಡ, ಮಂಜುನಾಥ ಮರಾಠಿ, ಶಬ್ಬೀರ್, ಚಂದ್ರು ನಾಯ್ಕ ಗೊರಟೆ, ದೇವೇಂದ್ರ ಮರಾಠಿ ಹೆಜ್ಜಿಲು, ಕಯುಂ ಕೊಲ, ಎಸ್ ಕೆ ಮನ್ಸೂರ್, ಚೇತನ ಮರಾಠಿ ಮುಂತಾದವವರು ಸಭೆಯಲ್ಲಿ ಮಾತನಾಡಿದರು.
ಇದನ್ನೂ ಓದಿ : ಭುವನಜ್ಯೋತಿ ಕಾನೂನು ಕಾಲೇಜು ಉದ್ಘಾಟನೆ
ಅರಣ್ಯ ವಾಸಿಗಳ ಸಮಸ್ಯೆಗಳಿಗೆ ನಿರಂತರ ೩೩ ವರ್ಷದ ಹೋರಾಟಕ್ಕೆ, ಮುಂದಿನ ದಿನಗಳಲ್ಲಿ ಸಂಘಟನಾ ಬಲ ಹೆಚ್ಚಿಸುವ ನಿರ್ಣಯ ಸಭೆಯಲ್ಲಿ ತೆಗೆದುಕೊಳ್ಳಲಾಯಿತು ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.