ಕುಮಟಾ: ತಾಲೂಕಿನಲ್ಲಿ ಮಳೆ ಗಾಳಿಯಿಂದ ಮನೆಗಳ ಮೇಲೆ ಮರ ಮುರಿದು ಬೀಳುವುದು ಶನಿವಾರವೂ ಮುಂದುವರಿದಿದೆ. ಹಲವು ಕಡೆ ಮನೆ ಗೋಡೆ ಕುಸಿತಕಂಡಿದೆ(wall collapsed).
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಬಂಕಿಕೋಡ್ಲದಲ್ಲಿ ಸುಮಿತ್ರಾ ಮಹದೇವ ಅಗೇರ ಅವರ ಮನೆಯ ಮೇಲ್ಛಾವಣಿ ಕುಸಿದಿದೆ. ಇದರಿಂದ ಅಂದಾಜು ೨೫ ಸಾವಿರ ರೂ. ಹಾನಿಯಾಗಿದೆ.
ಹೊಸ್ಕೇರಿ ಗ್ರಾಮದಲ್ಲಿ ಬಲೀಂದ್ರ ಸಣ್ಣು ಗೌಡ ಅವರ ಮನೆಯ ಗೋಡೆ (wall collapsed) ಕುಸಿದಿದೆ. ಹಾನಿಯನ್ನು ಇನ್ನಷ್ಟೆ ಅಂದಾಜಿಸಬೇಕಿದೆ.
ಹೊಳೆಗದ್ದೆಯಲ್ಲಿ ಆರತಿ ಅರುಣಾ ಶ್ಯಾನಭಾಗ ಇವರ ವಾಸ್ತವ್ಯ ಇಲ್ಲದ ಮನೆಯ ಒಂದು ಭಾಗದ ಗೋಡೆ ಕುಸಿದು ಬಿದ್ದಿದೆ. ಗೋಕರ್ಣದ ತಲಗೇರಿಯ ಹುಲಿಯಾ ತುಳಸು ಗೌಡ ಅವರ ಮನೆಗೆ ಹೊಂದಿಕೊಂಡಿದ್ದ ಶೌಚಾಲಯದ ಮಣ್ಣಿನ ಗೋಡೆ ಕುಸಿದು ಬಿದ್ದಿದೆ. ಕುಮಟಾದ ಮಣಕಿ, ವಿವೇಕ ನಗರದ ಮಾದೇವಿ ಹನುಮಂತ ಮುಕ್ರಿ ಇವರ ಮನೆಯ ಮೇಲೆ ಮಾವಿನ ಮರ ಬಿದ್ದು ೩೦ ಸಾವಿರ ರೂ. ಹಾನಿಯಾಗಿದೆ. ಹೆಗಡೆ ಗ್ರಾಮದ ತಾರಿಬಾಗಿಲ ಬಳಿಯ ದಿನೇಶ ನಾಗಪ್ಪ ನಾಯ್ಕ ಅವರ ಮನೆ ಗೋಡೆ ಕುಸಿದು ೨೦ ಸಾವಿರ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ಕಾಲಜ್ಞಾನಕ್ಕೆ ಶಾಸ್ತ್ರಜ್ಞಾನ ಆಧಾರ: ರಾಘವೇಶ್ವರ ಶ್ರೀ