ಬೆಂಗಳೂರು (Bengaluru) :  ಕರ್ನಾಟಕ ರಾಜ್ಯ ಹವಾಮಾನ ಇಲಾಖೆಯು (Weather Department) ೧೨ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಿದೆ. ಈ ಪ್ರದೇಶಗಳಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿದೆ (Weather update).

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಹವಾಮಾನ ಇಲಾಖೆ ನೀಡಿದ ವರದಿ ಪ್ರಕಾರ, ದಕ್ಷಿಣ ಕನ್ನಡ (Dakshina Kannada), ಉಡುಪಿ (Udupi), ಬೆಂಗಳೂರು ಗ್ರಾಮಾಂತರ (Bengaluru rural), ಬೆಂಗಳೂರು ನಗರ(Bengaluru city), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಕೊಡಗು, ಕೋಲಾರ, ರಾಮನಗರ, ಶಿವಮೊಗ್ಗ (Shivamogga) ಮತ್ತು ತುಮಕೂರು ಸೇರಿದಂತೆ ೧೨ ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಯಲ್ಲೋ ಅಲರ್ಟ್‌ ಪಟ್ಟಿಯಲ್ಲಿದ್ದರೆ, ಉತ್ತರ ಕನ್ನಡ (Uttara Kannada) ಜಿಲ್ಲೆ ಇದರಿಂದ ಹೊರತಾಗಿದೆ.

ಇದನ್ನೂ ಓದಿ : ಸ್ಟೇಟ್ ಬ್ಯಾಂಕ್ ನೌಕರಗೆ ೧೩.೫೦ ಲಕ್ಷ ರೂ. ಪಂಗನಾಮ

ಈ ನಡುವೆ ವಿಜಯನಗರ, ಮೈಸೂರು, ಮಂಡ್ಯ, ಹಾಸನ, ದಾವಣಗೆರೆ, ಚಿತ್ರದುರ್ಗ, ಯಾದಗಿರಿ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ (Weather update). ಈ ಪಟ್ಟಿಯಲ್ಲೂ ಉತ್ತರ ಕನ್ನಡ ಜಿಲ್ಲೆ ಹೊರತಾಗಿದೆ. ಆದಾಗ್ಯೂ, ಇತ್ತೀಚಿನ ವಾರಗಳಲ್ಲಿ ಕೆಲವು ಪ್ರದೇಶಗಳ ಮೇಲೆ ಪರಿಣಾಮ ಬೀರಿದ ಭಾರೀ ಮಳೆಯಿಂದ ವಿರಾಮವನ್ನು ನೀಡುವ ಮೂಲಕ ರಾಜ್ಯದ ಹೆಚ್ಚಿನ ಪ್ರದೇಶಗಳಲ್ಲಿ ಶುಷ್ಕ ಪರಿಸ್ಥಿತಿಯಿದೆ.

ಇದನ್ನೂ ಓದಿ : ಅತಿ ಹೆಚ್ಚು ಲಾಭದಾಸೆಗೆ ೫೦.೭೩ ಲಕ್ಷ ರೂ. ಕಳೆದುಕೊಂಡ ಮುರ್ಡೇಶ್ವರದ ಗೃಹಿಣಿ