ಹೊನ್ನಾವರ : ಮೂತ್ರ ವಿಸರ್ಜನೆಗೆಂದು ಹೋದಾಗ ಆಯ ತಪ್ಪಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಹೊನ್ನಾವರ (Honnavara) ತಾಲೂಕಿನ ಮಂಕಿಯಲ್ಲಿ ನಡೆದಿದೆ.

ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ಫಾಲೋವ್ ಮಾಡಲು ಇಲ್ಲಿ ಒತ್ತಿ.

ಮಂಕಿಯ ಪಳ್ಳಿಬೀದಿಕೆರೆ ನಿವಾಸಿ ಮಂಕಾಳಿ ಮಂಜಯ್ಯ ನಾಯ್ಕ (೩೮) ಮೃತ ದುರ್ದೈವಿ. ರವಿವಾರ ಬೆಳಿಗ್ಗೆ ೩.೩೦ರ ಸುಮಾರಿಗೆ ಮೂತ್ರ (urine) ವಿಸರ್ಜನೆಗೆ ಹೊರ ಹೋದಾಗ ಆಯತಪ್ಪಿ ಬಿದ್ದಿದ್ದರು. ಗೋಡೆಗೆ ತಲೆ ಬಲವಾಗಿ ಅಪ್ಪಳಿಸಿದ್ದರಿಂದ ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗಿತ್ತು. ಮನೆಯಲ್ಲಿದ್ದ ಪುತ್ರ ದಿನೇಶ ತಕ್ಷಣ ಅವರನ್ನು ಹೊನ್ನಾವರ(Honnavara) ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಇದನ್ನೂ ಓದಿ : ಶ್ರೀ ಕ್ಷೇತ್ರ ಕರ್ಕಿ ದೈವಜ್ಞ ಶ್ರೀಗಳ ಚಾತುರ್ಮಾಸ್ಯ ಆರಂಭ

ರವಿವಾರ ಬೆಳಿಗ್ಗೆ ಚಿಕಿತ್ಸೆಗೆ ಸ್ಪಂದಿಸದೆ ಮಹಿಳೆ ಮೃತ(woman death) ಪಟ್ಟಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಮಂಗಳೂರಿನಲ್ಲಿ ಚಿತ್ರಾಪುರ ಶ್ರೀಗಳ ಚಾತುರ್ಮಾಸ್ಯ