ಕೋಲ್ಕತ್ತಾ (Kolkatta): ಮೂರು ವರ್ಷದ ಅನೀಶ್ ಸರ್ಕಾರ್ (Anish Sarkar) ತನ್ನ ತರಬೇತಿ ಶಾಲೆಯಲ್ಲಿ ಮೇಜಿನ ಮೇಲೆ ಇರಿಸಲಾಗಿರುವ ಚದುರಂಗ ಫಲಕವನ್ನು ತಲುಪಲು ಮೂರು ಪ್ಲಾಸ್ಟಿಕ್ ಕುರ್ಚಿಗಳ ರಾಶಿಯ ಮೇಲೆ ಕುಳಿತುಕೊಳ್ಳಬೇಕು. ಕಾಯಿಗಳನ್ನು ಚಲಾಯಿಸಲು – ಮೇಜಿನ ಮೇಲೆ ಕೈಗಳು, ಕುರ್ಚಿಯ ಮೇಲೆ ಕಾಲುಗಳು. ಇಂತಿಪ್ಪ ಪೋರ ಮಾಡಿದ ಸಾಧನೆ ಮಾತ್ರ ಹುಬ್ಬೇರಿಸುವಂಥದ್ದು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಹೌದು, ಕೋಲ್ಕತ್ತಾದ ಶಾಲೆಯ ಮೆಟ್ಟಿಲೂ ಏರದ ಅನೀಶ್ (Anish Sarkar), ವಿಶ್ವದಲ್ಲೇ ಅತ್ಯಂತ ಕಿರಿಯ ಫಿಡೆ ಶ್ರೇಯಾಂಕದ ಆಟಗಾರನಾಗಿದ್ದಾನೆ (World’s youngest FIDE rated chess player). ಈತನ ಅಭೂತಪೂರ್ವ ಸಾಧನೆ ಜಗತ್ತಿನ ಮಾಧ್ಯಮ ಗಮನವನ್ನು ಸೆಳೆದಿದೆ. ಅವರ ತರಬೇತುದಾರರಾದ ಗ್ರ್ಯಾಂಡ್ ಮಾಸ್ಟರ್ (grand master) ದಿಬ್ಯೆಂದು ಬರುವಾ ಅನೀಶ್ ಸ್ಮರಣಾಶಕ್ತಿ ನೋಡಿ ಆಶ್ಚರ್ಯಚಕಿತರಾಗಿದ್ದಾರೆ.
ವಿಡಿಯೋ ಸಹಿತ ಇದನ್ನೂ ಓದಿ : ಆತಂಕ ಮೂಡಿಸಿದ ರಣಹದ್ದು ಹಾರಾಟ
ಕಳೆದ ವರ್ಷ, ಕೋಲ್ಕತ್ತಾದಲ್ಲಿ ನಡೆದ ದೇಶದ ಅತಿ ದೊಡ್ಡ ಪಂದ್ಯಾವಳಿಗಳಲ್ಲಿ ಒಂದಾದ ಟಾಟಾ ಸ್ಟೀಲ್ (Tata Steel) ಇಂಡಿಯಾ ಚೆಸ್ ಪಂದ್ಯಾವಳಿಯಲ್ಲಿ ಖ್ಯಾತ ಚೆಸ್ ಪಟು ಆರ್. ಪ್ರಗ್ನಾನಂದ (R Praggnanandhaa) ಅವರ ಉಪಸ್ಥಿತಿ ಅನೀಶ್ ಅವರ ಸೋದರ ಮಾವರಲ್ಲಿ ಉತ್ಸುಕತೆ ಮೂಡಿಸಿತು. ಅವರು ಮಗುವಿಗೆ ದುರ್ಗಾಪೂಜೆಗಾಗಿ ಚದುರಂಗ ಫಲಕ ತಂದುಕೊಟ್ಟಿದ್ದರು. (YouTube) ನಿಂದ ಆಟದ ನಿಯಮಗಳನ್ನು ಕಲಿತ ಮೂರು ವರ್ಷದ ಮಗುವಿಗೆ ಇದು ವಯಸ್ಸಿಗೆ ಮೀರಿದ ಸಾಧನೆ. ಮುಂದಿನ ದಿನಗಳಲ್ಲಿ, ತಾಯಿ ತನ್ನ ಮಗ ವಿಶೇಷ ಎಂಬುದು ಅರಿವಾಗುತ್ತದೆ.
ಇದನ್ನೂ ಓದಿ : ಭಟ್ಕಳ ಪೊಲೀಸರ ಭರ್ಜರಿ ಕಾರ್ಯಾಚರಣೆ
ಕುಟುಂಬವು ಒಂದು ದಿನ ರೈಲಿನಲ್ಲಿ ಆಗ್ರಾದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಬೇಸರಗೊಂಡ ಪುಟ್ಟ ಹುಡುಗ ಅನೀಶ್ ಪಕ್ಕದ ಸೀಟಿನಲ್ಲಿ ಆನ್ಲೈನ್ನಲ್ಲಿ ಚೆಸ್ ಆಡುತ್ತಿದ್ದ ಒಬ್ಬ ಹಿರಿಯ ಬಾಲಕನ ಬಳಿಗೆ ಹೋಗುತ್ತಾನೆ. ಆದರೆ ರೈಲು ಪ್ರಯಾಣ ಮುಗಿಯುವುದರೊಳಗೆ ಅನೀಶ್ ಆ ಹಿರಿಯ ಬಾಲಕನ ವಿರುದ್ಧ ಗೆದ್ದಿದ್ದ. ಕಳೆದ ಮಾರ್ಚ್ನಲ್ಲಿ ಪಾಲಕರು ಅನೀಶನನ್ನು ಚೆಸ್ ಅಕಾಡೆಮಿಗೆ ದಾಖಲಿಸುತ್ತಾರೆ.
ವಿಡಿಯೋ ಸಹಿತ ಇದನ್ನೂ ಓದಿ : ತರಕಾರಿಗೆ ಉಗುಳಿದ ವ್ಯಾಪಾರಿ ಬಂಧನ
ಕೆಲವೇ ತಿಂಗಳುಗಳಲ್ಲಿ, ಅನೀಶ್ ೯ ವರ್ಷ ವಯೋಮಾನದೊಳಗಿನ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಪಾದಾರ್ಪಣೆ ಮಾಡುತ್ತಾನೆ. 8 ಅಂಕಗಳಲ್ಲಿ ೫.೫ ಅಂಕಗಳನ್ನು ಗಳಿಸಿ ೨೪ನೇ ನೇ ಸ್ಥಾನ ಪಡೆದ ಅನೀಶ್, ಇಬ್ಬರು ಫಿಡೆ ಶ್ರೇಯಾಂಕಿತ ಎದುರಾಳಿಗಳನ್ನು ಸೋಲಿಸುತ್ತಾನೆ. ಮುಂದೆ ೧೩ ವರ್ಷದೊಳಗಿನವರ ರಾಜ್ಯ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಾನೆ. ಅಲ್ಲಿ ಐವರು ಫಿಡೆ ಶ್ರೇಯಾಂಕಿತ ಐವರು ಆಟಗಾರರನ್ನು ಎದುರಿಸಿ ೧೫೫೫ ಶ್ರೇಯಾಂಕ ಗಳಿಸುತ್ತಾನೆ. ಆ ಮೂಲಕ ಜಗತ್ತಿನ ಅತ್ಯಂತ ಕಿರಿಯ ಫಿಡೆ ಶ್ರೇಯಾಂಕಿತ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಇದನ್ನೂ ಓದಿ : ಅಪರಿಚಿತಗೆ ಎಟಿಎಂ ಕಾರ್ಡ್ ಕೊಟ್ಟು ಮೋಸ ಹೋದರು !