ಕಾರವಾರ: ಪೋಲಿಸ್ ಕಿರುಕುಳಕ್ಕೆ ವ್ಯಕ್ತಿ ಆತ್ಮಹತ್ಯೆ ಆರೋಪದಡಿ ಕಾರವಾರ ಗ್ರಾಮೀಣ ಠಾಣೆ ಇನ್ಸಪೆಕ್ಟರ್ ಕುಸುಮಾಧರ್, ಪಿಎಸ್ಐ ಶಾಂತಿನಾಥ, ಕಾನ್‌ಸ್ಟೇಬಲ್ ದೇವರಾಜ ಅವರನ್ನು ಅಮಾನತುಗೊಳಿಸಲಾಗಿದೆ.

ಪ್ರಕರಣದ ಇಲಾಖಾ ತನಿಖೆ ಮುಕ್ತಾಯದವರೆಗೆ ಅಮಾನತು ಮಾಡಿ ಪಶ್ಚಿಮ ವಲಯ ಐಜಿ ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ತಾಲ್ಲೂಕಿನ ಶಿರವಾಡ ನಿವಾಸಿ ಮಾರುತಿ ನಾಯ್ಕ ಆತ್ಮಹತ್ಯೆ ಮಾಡಿಕೊಂಡವರಾಗಿದ್ದು, ಡೆತ್‌ನೋಟ್‌ನಲ್ಲಿ ಪೊಲೀಸರ ಹೆಸರು ಬರೆದು, ವಿಡಿಯೋ ಮಾಡಿ ಅಕ್ಟೋಬರ್ 20 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು.
ದಲಿತ ಮುಖಂಡನಿಂದ ಹಿಂದೂ ದೇವರ ಅವಹೇಳನ ವೀಡಿಯೋ ಮಾಡಿ ದೂರು ನೀಡಿದ್ದ ಮಾರುತಿ ನಾಯ್ಕ ಅವರಿಗೆ, ಪ್ರಕರಣದ ತನಿಖೆ ನೆಪದಲ್ಲಿ ಪೊಲೀಸರೇ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ.
ಕುಟುಂಬಸ್ಥರಿಂದ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ ಹಿನ್ನಲೆ, ಮಾರುತಿ ಅವರಿಗೆ ಬೆದರಿಕೆಯೊಡ್ಡಿದ ಆರೋಪದಲ್ಲಿ ದಲಿತ ಮುಖಂಡ ಎಲಿಷಾ ಸೇರಿ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರವಾರ ಗ್ರಾಮೀಣ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.