ನ್ಯಾಮತಿ: ಜೋಕಾಲಿ ಆಡುವಾಗ ಕುತ್ತಿಗೆಗೆ ಹಗ್ಗ ಸುತ್ತಿಕೊಂಡು 14 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲ್ಲೂಕಿನ ಸವಳಂಗ ಗ್ರಾಮದಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ : ಬೆಳಗಾವಿ ಸೋನಟ್ಟಿ ಬಳಿ ₹ 12 ಲಕ್ಷ ಮೌಲ್ಯದ ಕಳ್ಳಬಟ್ಟಿ, ಸಾರಾಯಿ ವಶ
ಪಿ ಜೆ ಕೊಟ್ರೇಶ್ (14) ಸಾವನ್ನಪ್ಪಿದ ಬಾಲಕನಾಗಿದ್ದಾನೆ. ಇಂದು ಶಾಲೆ ಮುಗಿಸಿ ಮನೆಗೆ ಬಂದ ಬಾಲಕ ಜೋಕಾಲಿಯಾಡುತ್ತಿದ್ದ. ಆಕಸ್ಮಿಕವಾಗಿ ಕೊರಳಿಗೆ ಹಗ್ಗ ಸುತ್ತಿಕೊಂಡು ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಈ ವಿಡಿಯೋ ನೋಡಿ : ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಭಾಷಣ https://fb.watch/qpMpWRDxlo/?mibextid=Nif5oz
ಮೃತ ಕೊಟ್ರೇಶ್ ಶಿವಮೊಗ್ಗದ ಖಾಸಗಿ ಶಾಲೆಯಲ್ಲಿ 4 ನೇ ತರಗತಿ ಓದುತ್ತಿದ್ದ. ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಅಸ್ವಭಾವಿಕ ಸಾವಿನ ಪ್ರಕರಣ ದಾಖಲಾಗಿದೆ.