ಭಟ್ಕಳ : ಬಹಿರ್ದೆಸೆಗೆ ಹೋದ ವ್ಯಕ್ತಿ ನದಿಯಲ್ಲಿ ಬಿದ್ದು ನಾಪತ್ತೆಯಾದ ಘಟನೆ ತಾಲೂಕಿನ ಅಳ್ವೆಕೋಡಿಯಲ್ಲಿ ನಡೆದಿದೆ.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.
ಅಳ್ವೆಕೋಡಿ ಬಾಳೇಹಿತ್ಲು ನಿವಾಸಿ ವಸಂತ ಕುಪ್ಪ ನಾಯ್ಕ(೫೩) ನಾಪತ್ತೆಯಾದವರು. ಕೂಲಿ ಕೆಲಸ ಮಾಡುತ್ತಿದ್ದ ವಸಂತ ನಾಯ್ಕ ಜುಲೈ ೧೭ರಂದು ೧೨ ಗಂಟೆಗೆ ಅಳ್ವೆಕೋಡಿ ನದಿ ತೀರದಲ್ಲಿ ಬರ್ಹಿದೆಸೆಗೆ ಹೋಗಿದ್ದರು. ಆದರೆ ಸಂಜೆ ೬ ಗಂಟೆಯಾದರೂ ವಾಪಸ್ ಬಂದಿರಲಿಲ್ಲ. ಬಹಿರ್ದೆಸೆಗೆ ಹೋದ ವ್ಯಕ್ತಿ ಆಕಸ್ಮಿಕವಾಗಿ ಕಾಲು ಜಾರಿ ನದಿ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ವಸಂತ ನಾಯ್ಕ ಅವರ ಅಣ್ಣ ಮಂಜುನಾಥ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಜುಲೈ ೧೮ರಂದು ರಾಜ್ಯದ ವಿವಿಧೆಡೆ ಅಡಿಕೆ ಧಾರಣೆ