ಭಟ್ಕಳ: ಭಟ್ಕಳದಲ್ಲಿ ನೂರ್ ಹಲ್ಕಾ ವತಿಯಿಂದ ಎರಡು ದಿನಗಳ ಕಾಲ ನಡೆದ ಮತದಾರರ ಗುರುತಿನ ಚೀಟಿ ಮೆಗಾ ಶಿಬಿರದಲ್ಲಿ 483 ಹೊಸ ಹೆಸರುಗಳು ಮತದಾರರ ಪಟ್ಟಿಗೆ ಸೇರ್ಪಡೆಗೊಂಡಿವೆ. 710 ಮತದಾರರ ಗುರುತಿನ ಚೀಟಿಯ ಹೆಸರು, ವಿಳಾಸ ತಿದ್ದುಪಡಿ ಮಾಡಲಾಗಿದೆ ಎಂದು ಶಿಬಿರದ ಸಂಚಾಲಕ ಅಬ್ದುಲ್ ಸಮಿ ಸಿದ್ದೀಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಮುರುಡೇಶ್ವರ : ಭಕ್ತಸಾಗರದಲ್ಲಿ ಮಿಂದೆದ್ದ ಶಿವಭಕ್ತರು
ನೂರ್ ಸರ್ಕಲ್ (ಹಲ್ಕ) ಆರು ಕ್ರೀಡಾ ಕೇಂದ್ರಗಳನ್ನು ಒಳಗೊಂಡಿದ್ದು, ಶಿಬಿರದಲ್ಲಿ ಎಲ್ಲಾ ಕ್ರೀಡಾ ಕೇಂದ್ರಗಳ ಪದಾಧಿಕಾರಿಗಳು ಮತ್ತು ಅಂಜುಮನ್ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡಿದ್ದರು. ಭಟ್ಕಳದ ಜನತೆ ಈ ಶಿಬಿರದ ಸಂಪೂರ್ಣ ಪ್ರಯೋಜನ ಪಡೆದುಕೊಂಡರು ಎಂದ ಅವರು, ಭಟ್ಕಳ ತಹಸೀಲ್ದಾರ್ ಕೂಡ ಈ ಉಚಿತ ಶಿಬಿರಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು.
ಮೊದಲ ದಿನವಾದ ಸೋಮವಾರದಂದು 35ಕ್ಕೂ ಹೆಚ್ಚು ಫೆಡರೇಶನ್ ಸ್ವಯಂಸೇವಕರು ಮತ್ತು ಸಂಘ ಸಂಸ್ಥೆಗಳೊಂದಿಗೆ ಹತ್ತು ಬ್ಲಾಕ್ ಮಟ್ಟದ ಅಧಿಕಾರಿಗಳನ್ನು (BLO) ಹೆಸರು ನೋಂದಾಯಿಸಲು ಕಳುಹಿಸಿದ್ದರು ಎಂದರು.
ಈ ವಿಡಿಯೋ ನೋಡಿ : ಮುರುಡೇಶ್ವರದಲ್ಲಿ ಸಚಿವ ಮಂಕಾಳ ವೈದ್ಯ ಕುಟುಂಬ ಸಹಿತ ಪೂಜೆ https://fb.watch/qGH2K11bvu/?mibextid=Nif5oz
ಶಿಬಿರದ ಒಂದು ದಿನ ಮುಂಚಿತವಾಗಿ ಭಾನುವಾರದಂದು ವಿವಿಧ ಕ್ರೀಡಾ ಕೇಂದ್ರಗಳ ಯುವಕರು ಮತ್ತು ಅಂಜುಮನ್ ವಿದ್ಯಾರ್ಥಿಗಳಿಗೆ ಸಾಹಿಲ್ ಆನ್‌ಲೈನ್ ಕಚೇರಿಯಲ್ಲಿ ನಮೂನೆ ಸಂಖ್ಯೆ 6 ರ ಮೂಲಕ ಹೆಸರು ನೋಂದಣಿ ಮತ್ತು ನಮೂನೆ ಸಂಖ್ಯೆ 8 ರ ಮೂಲಕ ತಿದ್ದುಪಡಿಯ ಬಗ್ಗೆ ತರಬೇತಿ ನೀಡಲಾಯಿತು ಎಂದು ಅವರು ತಿಳಿಸಿದರು.
ಈ ವಿಡಿಯೋ ನೋಡಿ : ಮುರುಡೇಶ್ವರದಲ್ಲಿ ಭಕ್ತ ಸಾಗರ https://fb.watch/qGH8u0ZbDQ/?mibextid=Nif5oz
ಮುಬಾಷರ್ ಹುಸೇನ್ ಹಲ್ಲಾರೆ, ಫೈಸಲ್ ಅರ್ಮಾರ್, ಇಮ್ಶಾದ್ ಅಖ್ತರ್, ಶಮೂನ್ ಹಾಜಿ ಫಖಿಹ್, ಸಮೀವುಲ್ಲಾ ಇಟ್ನಾಳ್, ಸಾಜಿದ್ ಎಸ್.ಎಂ, ಅಬ್ದುಲ್ ಬಾಸಿತ್ ಗೊಲ್ಟೆ, ಫೈಜಾನ್ ಎಸ್.ಎಂ.ನದ್ವಿ, ರೋಶನ್ ಕುಂದನಗುಡ, ಅಶ್ರಫ್ ಸಾದ ಸೇರಿದಂತೆ ಭಟ್ಕಳ ಮುಸ್ಲಿಂ ಯುತ್ ಫೆಡರೇಷನ್, ತಂಝೀಮ್ ಸಂಸ್ಥೆ ಶಿಬಿರವನ್ನು ಯಶಸ್ವಿಯಾಗಿ ನಡೆಸಲು ಸಹಕರಿಸಿದ್ದರು ಎಂದು ನೂರ್ ಹಲ್ಕಾದ ಸಂಚಾಲಕ ಅಬ್ದುಲ್ ಸಮೀ ಸಿದ್ದೀಕ್ ತಿಳಿಸಿದರು.
ಮತದಾರರ ಗುರುತಿನ ಚೀಟಿ ಶಿಬಿರವನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಮುಂದೆ ನಾವು ಹದಿನೈದು ದಿನಗಳ ಆಧಾರ್ ಕಾರ್ಡ್ ಶಿಬಿರವನ್ನು ಆಯೋಜಿಸಲು ಯೋಜಿಸಿದ್ದೇವೆ. ಇದಕ್ಕಾಗಿ ನಾವು ಸರ್ಕಾರಿ ಅಧಿಕಾರಿಗಳ ತಂಡವನ್ನು ಕರೆತರುತ್ತೇವೆ.
– ಅಬ್ದುಲ್ ಸಮೀ ಸಿದ್ದೀಕ್, ನೂರ್ ಹಲ್ಕಾದ ಸಂಚಾಲಕ