ಭಟ್ಕಳ: ಜಾಗತಿಕವಾಗಿ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಒಂದು ಉನ್ನತ ಸ್ಥಾನ ಮಾನ ಸಿಕ್ಕಿದೆ. ಭಾರತ ವಿಶ್ವ ಮಟ್ಟದಲ್ಲಿ 5 ನೇ ಅತೀ ದೊಡ್ಡ ಆರ್ಥಿಕತೆಯುಳ್ಳ ರಾಷ್ಟ್ರ ಆಗಿದೆ. ಕಾಂಗ್ರೆಸ್ ಅವಧಿಯಲ್ಲಿ ಆಗದಂತಹ ಅಭಿವೃದ್ಧಿಯ ಕೆಲಸಗಳು ಪ್ರಧಾನಿ ಮೋದಿ ಅವರು 10 ವರ್ಷದಲ್ಲಿ ಸಾಧಿಸಿದ್ದಾರೆ. ಮುಂದಿನ ಅವಧಿಯಲ್ಲಿ ಮೋದಿ ಅವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದರೆ ಎರಡೇ ವರ್ಷದಲ್ಲಿ ಜಗತ್ತಿನ ಅತ್ಯಂತ ಬಲಿಷ್ಠ ಮೂರನೇಯ ಆರ್ಥಿಕ ರಾಷ್ಟ್ರವಾಗಿ ಮಾಡುವ ಭರವಸೆ ನೀಡಿದ್ದು ಅವರು ದೇಶದ ಜನರ ನಂಬಿಕೆ ಉಳಿಸಲಿದ್ದಾರೆ. ಈ ಎಲ್ಲ ಕಾರಣದಿಂದ ಮೋದಿ ಅವರನ್ನು ಗೆಲ್ಲಿಸುವುದು ಅನಿವಾರ್ಯವಾಗಿದೆ ಎಂದು ನಮೋ ಬ್ರೀಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಮೋ‌ ಬ್ರಿಗೇಡ್ 2.0 ಸಂಘಟನೆಯಿಂದ ಇಲ್ಲಿನ ಮುರುಡೇಶ್ವರ ದೇವರ ಓಲಗ ಮಂಟಪದಲ್ಲಿ ಅವರು ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಉಪನ್ಯಾಸ ನೀಡಿ ಮಾತನಾಡಿದರು.

ಕಾಂಗ್ರೆಸ್ ಸರ್ಕಾರ ಇರುವಾಗ ಇದ್ದಷ್ಟು ಉಗ್ರಗಾಮಿಗಳು ಬಿಜೆಪಿ ನರೇಂದ್ರ ಮೋದಿ ಸರ್ಕಾರ ಬಂದ ಮೇಲೆ ಇಲ್ಲ. ಯಾಕೆಂದರೆ ಯಾವುದೇ ದಾಳಿ ನಡೆಸಿದ್ದರು ಅದಕ್ಕೆ ಮೋದಿ ಅವರು ಪ್ರತಿಕಾರ ಸಾಧಿಸಿ ಉಗ್ರರ ಸದೆಬಡಿದಿದ್ದಾರೆ. ಇಂದಿನ ಭಾರತ ನಮ್ಮ ಮೇಲಿನ ದಾಳಿಗೆ ಪ್ರತ್ಯುತ್ತರ ನೀಡುವಂತಹ ದಿಟ್ಟ ಪ್ರಧಾನಿ ಇದ್ದಾರೆ. ದೇಶದ ಸುಭದ್ರತೆಗಾಗಿ ಇಂತಹ ಪ್ರಧಾನಿಯನ್ನು ಮತ್ತೊಮ್ಮೆ ಆಯ್ಕೆ ಮಾಡುವುದು ಅಗತ್ಯ ಇದೆ ಎಂದರು.

ಇದನ್ನೂ ಓದಿ: ಫೆ.‌14- 17: ನಿಚ್ಛಲಮಕ್ಕಿ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ವರ್ಧಂತಿ ಮಹೋತ್ಸವ

ಮೋದಿ ಅವರ ಸರ್ಕಾರ 80 ಕೋಟಿ ಜನರಿಗೆ 5 ಕೆಜಿ ಅಕ್ಕಿ, 1 ಕೆಜಿ ಬೆಳೆ ನೀಡುತ್ತಿದೆ. ಅದಕ್ಕೆ ಸಿದ್ದರಾಮಯ್ಯ ಅವರು 5 ಕೆಜಿ ಸೇರಿಸಿ ಕೊಟ್ಟು ನಾವು 10 ಕೆಜಿ ಕೊಟ್ಟಿದ್ದಾರೆ ಎಂದು ಹೇಳುತ್ತಿದ್ದಾರೆ. ಇಂತಹ ಗ್ಯಾರಂಟಿ ಯೋಜನೆಗಳಿಗೆ ಮರುಳಾಗಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಿದವರು ಮುಂದೆ ರೈಲು ಪ್ರಯಾಣವನ್ನು ಫ್ರೀ ಮಾಡುತ್ತೇವೆ ಎಂದರೆ ರಾಹುಲ ಗಾಂಧಿ ಅವರನ್ನು ಪ್ರಧಾನಿ ಮಾಡುವ ಸಾಧ್ಯತೆ ಇದೆ. ಅದಕ್ಕಾಗಿ ನಾವು ಮೂರ್ಖರಾಗುವುದು ಬೇಡ. ರಾಹುಲ ಗಾಂಧಿಯಂತಹ ಅಸಮರ್ಥನ ಕೈಯಲ್ಲಿ ಭಾರತವನ್ನು ನೀಡುವುದು ಬೇಡ. ಭಾರತಕ್ಕೆ ರಾಹುಲ್ ಗಾಂಧಿ ಪ್ರಧಾನಿಯಾಗುವುದು ಸ್ವತಃ ಕಾಂಗ್ರೆಸನವರಿಗೆ ಇಷ್ಟವಿಲ್ಲ ಎಂದು ಹೇಳಿದರು.

ವಿಡಿಯೋ ನೋಡಿ:  https://www.facebook.com/share/r/rEmESPAJKHms3Ycc/?mibextid=2JQ9oc

ನರೇಂದ್ರ ಮೋದಿ ಅವರು 500 ವರ್ಷ ಕನಸಾಗಿಯೇ ಉಳಿದ ರಾಮ ಮಂದಿರದ ನಿರ್ಮಾಣ ಮಾಡಿ ಹಿಂದೂಗಳ ಆಸೆಯನ್ನು ಈಡೇರಿಸಿದ್ದು, ಕಾಶಿ ವಿಶ್ವನಾಥ ಮಂದಿರ ಇನ್ನೂ ಹಲವು ಮಂದಿರದ ನಿರ್ಮಾಣ ಮಾಡಲಿದ್ದು, ಅವರ ಆಯ್ಕೆ ನಮ್ಮ ದೇಶದ ಬೆಳವಣಿಗೆಗೆ ಮುನ್ನುಡಿಯಾಗಲಿದೆ ಎಂದರು.

ಭಾರತವು ಕಾಂಗ್ರೆಸ್ ಸರ್ಕಾರದ ವೇಳೆಯಲ್ಲಿ ಪಾಕಿಸ್ತಾನ, ಬಾಂಗ್ಲಾ ಇನ್ನಿತರ ದೇಶಗಳೊಂದಿಗೆ ಜಾಗತಿಕವಾಗಿ ಹೋಲಿಕೆ ಮಾಡಲಾಗುತ್ತಿತ್ತು. ಆದರೆ ಈಗ ಬಿಜೆಪಿ ಪಕ್ಷ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಜಗತ್ತಿನ ಬಲಿಷ್ಠ ರಾಷ್ಟ್ರಗಳಾದ ಅಮೇರಿಕಾ, ಚೀನಾ, ಜಪಾನ್, ರಷ್ಯಾದಂತಹ ರಾಷ್ಟ್ರದ ಜೊತೆ ಸರಿ ಸಮಾನವಾಗಿ ಬೆಳೆದಿದೆ. ಇದು ಮೋದಿ ಅವರ ದೂರ ದೃಷ್ಟಿಯ ಕೆಲಸದಿಂದ ಸಾಧ್ಯವಾಯಿತು. ‌ಪ್ರಧಾನಿಯಾಗಿ ಮೋದಿ ಮುಂದಿನ ದಿನಗಳಲ್ಲಿ ಬಂದಲ್ಲಿ 2027ರ ಹೊತ್ತಿಗೆ ಮುಂದಿನ 1000 ವರ್ಷ ಭಾರತವನ್ನು ಸುಭದ್ರ ರಾಷ್ಟ್ರವನ್ನು ನಿರ್ಮಾಣ ಮಾಡುವ ಕಲ್ಪನೆಯಿದೆ ಎಂದು ಹೇಳಿದರು.
ಮೋದಿ ಅವರ ಜಾತಿ ಬಗ್ಗೆ ಪ್ರಶ್ನಿಸುವ ರಾಹುಲ್‌ ಗಾಂಧಿ‌ ಹುಟ್ಟ ಭಾರತೀಯನೇ ಅಲ್ಲ ಎಂಬುದು ಸತ್ಯ. ರಾಹುಲ್ ಗಾಂಧಿಯ ತಾಯಿ ಸೋನಿಯಾ ಗಾಂಧಿ ಅವರು ಭಾರತದ ಪೌರತ್ವ 1981ರಲ್ಲಿ ಪಡೆದಿದ್ದಾರೆ. ಆದರೆ ರಾಹುಲ್ ಗಾಂಧಿ ಹುಟ್ಟಿದ್ದು 1970ರಲ್ಲಿ. ರಾಹುಲ ಗಾಂಧಿ ವಾದದ ಪ್ರಕಾರ ರಾಹುಲ ಗಾಂಧಿಯವರು ಭಾರತೀಯರೇ ಅಲ್ಲ ಎನ್ನುವುದು ಸ್ಪಷ್ಟವಾಗಿದೆ. ದೇಶದ ಜನರೂ ಅವರ ಮಕ್ಕಳು ಮೋದಿ ತರಹ ಆಗಬೇಕು ಎನ್ನುತ್ತಾರೆ ಹೊರತು ಯಾರೂ ರಾಹುಲ್‌ ಗಾಂಧಿ‌ ತರಹ ಆಗಲು ಬಯಸುವುದಿಲ್ಲ ಎಂದು ಲೇವಡಿ ಮಾಡಿದರು.
ಜಿ 20 ಶೃಂಗ ಸಭೆಯ ವೇಳೆ ಬೇರೆ ದೇಶದ ಪ್ರಧಾನಿಗಳಿಗೆ ಮೊಬೈಲ್ ಕೊಟ್ಟು ಸರಕಾರದಿಂದ 1 ಸಾವಿರ ಹಣವನ್ನು ಖಾತೆಗೆ ಹಾಕಿ ಅವರನ್ನು ಮಾರುಕಟ್ಟೆಗೆ ಕಳುಹಿಸಿ ವಸ್ತುಗಳ ಖರೀದಿಗೆ ತೆರಳಿದ ವೇಳೆ ಹಣವನ್ನು ಮೊಬೈಲ್ ಮೂಲಕ ಖಾತೆಯಿಂದ ವ್ಯವಹರಿಸುವುದನ್ನು ನೋಡಿ ಚಪ್ಪಾಳೆ ತಟ್ಟಿ ಸಂತಸ ಪಟ್ಟರು. ಈ ಶ್ರೇಯಸ್ಸು ಮೋದಿಯವರಿಗೆ ಸಲ್ಲಿಸಬೇಕು ಡಿಜಿಟಲ್ ಯೋಜನೆಯನ್ನು ಜಾರಿಗೆ ತಂದ ಮೊದಲ ಪ್ರಧಾನಿಯಾಗಿದ್ದಾರೆ. ಅಮೇರಿಕಾದಂತಹ ದೇಶವು 3 ತಿಂಗಳಲ್ಲಿ ಡಿಜಿಟಲ್ ವ್ಯವಹಾರ ನಡೆಸುವ ಹಣ ಭಾರತದಲ್ಲಿ ಒಂದು ದಿನದಲ್ಲಿ ನಡೆಯುತ್ತದೆ. ಇದಕ್ಕಿಂತ ದೊಡ್ಡ ಉದಾಹರಣೆ ಬೇಕಾ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಎಂದು ಹೇಳಿದ ಅವರು, ಮೋದಿ ಅವರಿಗೆ ಇನ್ನು 5 ವರ್ಷ ಅಧಿಕಾರ ನೀಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ. ಕರ್ನಾಟಕದಲ್ಲಿ 28ಕ್ಕೆ 28 ಗೆದ್ದು ಮೋದಿ ಅವರಿಗೆ ಬಲ ನೀಡಬೇಕು. ಯಾರೂ ಅಭ್ಯರ್ಥಿಯನ್ನು ನೋಡಿ ಮತ ಚಲಾಯಿಸಬೇಡಿ. ನಿಮಗೆ ಇಷ್ಟವಿರಲಿ ಇಲ್ಲದೆ ಇರಲಿ ಮೋದಿಯವರಿಗಾಗಿ ಬಿಜೆಪಿಗೆ ವೋಟು ನೀಡಿ. ನೀವು ಒಬ್ಬರು ನಿರ್ಲಕ್ಷ ತೋರಿಸಿದರೆ ಮುಂದಿನ ಐದು ವರ್ಷ ಮೋದಿ ಅವರು ಪ್ರಧಾನಿಯಾಗುವುದನ್ನು ತಪ್ಪಿಸಿದಂತಾಗುತ್ತದೆ. ಹಿಂದೆ ಪ್ರಧಾನಿ ವಾಜಪೇಯಿ ಅವರಿಗೆ ಮಾಡಿದ ದ್ರೋಹವನ್ನು ಮಾಡಲು ಹೋಗಬೇಡಿ ಎಂದರು.

ಇದನ್ನೂ ಓದಿ : ಸಮುದ್ರ ಸ್ವಚ್ಚಗೊಳಿಸಲು ಇಟ್ಟ 840 ಕೋಟಿಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿ : ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹ

ಮುಖ್ಯ ಅತಿಥಿಯಾಗಿ ನಿವೃತ್ತ ಕೃಷಿ ಅಧಿಕಾರಿ ಜಿ.ಎನ್. ನಾಯ್ಕ ಮಾತನಾಡಿ ‘ಭಾರತ ಐದನೇ ಸ್ಥಾನದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. 5 ಜನರನ್ನಿ ಭಾರತರತ್ನ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಪಕ್ಷ ಭೇದ ಮರೆತು ಪ್ರಧಾನಿಗಳು ದೇಶವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಆಧ್ಯಾತ್ಮಿಕ, ದೇಶಭಕ್ತಿಯ ಕಾರ್ಯಕ್ರಮದಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು. ದೇಶವಿದ್ದರೆ ನಾವು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಪ್ರಧಾನಿ ಮೋದಿ ಅವರ ಕಾರ್ಯಕ್ಕೆ ಪಕ್ಷ ಮರೆತು ಅವರಿಗೆ ಸಹಕರಿಸಿ ದೇಶದ ಅಭಿವೃದ್ಧಿಗೆ ದುಡಿಯಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಮೋ ಬ್ರಿಗೇಡ್ ಸಂಘಟನೆಯ ಕಾರ್ಯಕರ್ತರು, ಸಾರ್ವಜನಿಕರು ಇದ್ದರು.

ನಾನು ಯಾವುದೇ ರಾಜಕೀಯ ಪಕ್ಷದ ಪರವಾಗಿ ಮತ ಯಾಚಿಸಲೋ ಅಥವಾ ಯಾವುದೇ ಟಿಕೆಟ್ ಆಸೆ ನನಗಿಲ್ಲ. ಓರ್ವ ಸಮರ್ಥ ವ್ಯಕ್ತಿಯನ್ನು ದೇಶದ ಅಭಿವೃದ್ಧಿಗೆ ಆಯ್ಕೆ ಮಾಡುವ ಕಾರ್ಯದಲ್ಲಿ ಜನರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದೇವೆ. ನಮೋ ಬ್ರಿಗೇಡ್ ಸಂಘಟನೆಯು 2013ರಲ್ಲಿ ಮೊದಲು ಪ್ರಾರಂಭಗೊಂಡು ಮೋದಿ ಅವರನ್ನು ಗೆಲ್ಲಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಈಗಲೂ ಸಹ ಅದೇ ಪ್ರಯತ್ನವನ್ನು ಮುಂದುವರೆಸಿದ್ದೇವೆ.
ಚಕ್ರವರ್ತಿ ಸೂಲಿಬೆಲೆ